ಮೊದಲ ಮಗು ಕಳೆದುಕೊಂಡೆ, ಇದು ದೇವರು ಕೊಟ್ಟ ಮಗು..! ಸಮನ್ವಿ ಸಾವಿಗೆ ಕಣ್ಣೀರಿಟ್ಟ ತಾರಾ

By Infoflick Correspondent

Updated:Friday, January 14, 2022, 13:51[IST]

ಮೊದಲ ಮಗು ಕಳೆದುಕೊಂಡೆ, ಇದು ದೇವರು ಕೊಟ್ಟ ಮಗು..! ಸಮನ್ವಿ ಸಾವಿಗೆ ಕಣ್ಣೀರಿಟ್ಟ ತಾರಾ

ಆರು ವರ್ಷದ ಪುಟ್ಟ ಬಾಲಕಿ ಕಲಾವಿದೆ ಸಮನ್ವಿ ಇದೀಗ ಬಾರದ ಲೋಕಕ್ಕೆ ತೆರಳಿದ್ದಾಳೆ. ಇಷ್ಟು ಸಣ್ಣ ವಯಸ್ಸಿನ ಪುಟ್ಟಿ ಸಮನ್ವಿಯನ್ನು ದೇವರು ಕಲ್ಲು ಮನಸ್ಸಿನಿಂದಲೇ ತನ್ನ ಬಳಿ ಕರೆಸಿಕೊಂಡಿದ್ದಾನೆ. ಹೌದು ಸಮನ್ವಿ ಅವರ ಸಾವಿನ ಸುದ್ದಿ ಕೇಳಿ ಇಡೀ ಕಿರುತೆರೆ ಲೋಕ ಬೆಚ್ಚಿಬಿದ್ದಿದೆ. ಹಾಗೆ ಯಾರಿಗೂ ಕೂಡ ಈ ವಿಷಯವನ್ನು ಅರಗಿಸಿಕೊಳ್ಳಲು ಸತ್ಯವಾಗಲೂ  ಆಗುತ್ತಿಲ್ಲ. ಶೂಟಿಂಗ್ ಸೆಟ್ನಲ್ಲಿ ಚಟಪಟನೆ  ಮಾತನಾಡುತ್ತಿದ್ದ ಸಮನ್ವಿ ನೋಡಲು ಮುಗ್ಧವಾಗಿದ್ದಳು. ಹಾಗೆ ತುಂಬಾನೇ ಸೈಲೆಂಟ್ ಕೂಡ. ಆದರೆ ನಿನ್ನೆ ತಾಯಿ ಜೊತೆ ದ್ವಿಚಕ್ರವಾಹನದಲ್ಲಿ ಬರುವಾಗ ಹಿಂದಿನಿಂದ ಟಿಪ್ಪರ್ ಒಂದು ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹೋಗಿದೆ. ಬಳಿಕ ಸ್ಥಳದಲ್ಲಿಯೇ ಸಮನ್ವಿ ಉಸಿರು ಚೆಲ್ಲಿದ್ದಾಳೆ.

ನಂತರ ಅವರ ತಾಯಿ ಅಮೃತ ನಾಯ್ಡು ಅವರಿಗೂ ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಕೇಳಿಬಂದಿತ್ತು. ಹೌದು ಇದೀಗ ತಾರಾ ಅವರು ಪುಟ್ಟ ಕಂದ ಸಮನ್ವಿ ಸಾವಿನ ಬಗ್ಗೆ ಕಣ್ಣೀರಿಟ್ಟಿದ್ದು, ನಿಜಕ್ಕೂ ಏನು ಹೇಳಲು ತೋಚುತ್ತಿಲ್ಲ ಕೊರೋನಾ ಬಂದ ಬಳಿಕ ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಎಂಟು ವಾರದಿಂದ ನಾವೆಲ್ಲರೂ ತುಂಬಾ ಒಂದು ಕುಟುಂಬದಂತೆ ಇದ್ದೆವು.  

ಕಳೆದ ವಾರವಷ್ಟೇ ಅಮೃತ ನಾಯ್ಡು ಹಾಗೂ ಸಮನ್ವಿಯನ್ನು ನಾಮಿನೇಟ್ ಮಾಡಿದೆವು. ಕಾರಣ ಅಮೃತ ನಾಯ್ಡು ಗರ್ಭಿಣಿಯಾಗಿದ್ದಳು ಹಾಗಾಗಿ ಅವರಿಗೆ ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ನಾವು ನಾಮಿನೇಟ್ ಮಾಡಿದ್ದೆವು.

ತಾರಮ್ಮ ನಾನು ಒಂದು ಮಗು ಕಳೆದುಕೊಂಡಿದ್ದೇನೆ, ಇದು ದೇವರು ಕೊಟ್ಟ ಮಗು ಎಂದು ಅಮೃತ ನಾಯ್ಡು ಅವರು ತಾರಾ ಅವರ ಬಳಿ ಹೇಳಿದ್ದರಂತೆ. ಆದರೆ ವಿಧಿ ಅದಕ್ಕೂ ಕೂಡ ಕಲ್ಲು ಹಾಕಿತು ನೋಡಿ, ತಾರಾ ಅವರು ಈ ವಿಷಯ ಹೇಳುತ್ತಾ ಗಳಗಳನೆ ಅಳುತ್ತಿದ್ದಾರೆ. ಒಂದೊಂದು ಬಾರಿ ದೇವರು ಎಂತಹ ಕ್ರೂರಿ ಎಂದೆನಿಸುತ್ತೆ. ಇಂತಹ ಘಟನೆಗಳು ನಡೆದಾಗ ಅರ್ಥವಿಲ್ಲದ ಜೀವನದಲ್ಲಿ ಅರ್ಥವಾಗದಂತೆ ದೇವರು ಕೂಡ ಸಾಕಷ್ಟು ನೋವು ಕೊಟ್ಟು ಬಿಡುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿದೆ..

( video credit : news first kannada )