ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ ನಾನೊಂಥರ ಚಿತ್ರದ ನಟ ತಾರಕ್..!

Updated: Tuesday, June 8, 2021, 20:44 [IST]

ಹೌದು ಸ್ನೇಹಿತರೆ ಕಳೆದ ಲಾಕ್ ಡೌನ್ ಮುಗಿದ ಮೇಲೆ ಆ ಸಮಯದಲ್ಲಿ ಕನ್ನಡದ ಕೆಲ ಸಿನಿಮಾಗಳು ತೆರೆಗೆ ಬಂದವು. ಅದರಲ್ಲಿ ನಾನೊಂಥರಾ ಚಿತ್ರ ಕೂಡ ಹೌದು. ಹೌದು ನಾನೊಂತರ ಚಿತ್ರದ ನಾಯಕ ನಟ ತಾರಕ್ ಅವರು ಸಕತ್ ಆಗಿಯೇ ತೆರೆಯಮೇಲೆ ಮಿಂಚಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನಟ ತಾರಕ್ ಅವರಿಗೆ ಈ ನಾನೊಂಥರ ಸಿನಿಮಾ ಬಳಿಕ ಸಾಕಷ್ಟು ಹೊಸ ಚಿತ್ರಗಳ ಆಫರುಗಳು ಬರುತ್ತಿವೆಯಂತೆ. ತೆಲುಗು ಸಿನಿಮಾರಂಗದಲ್ಲೂ ಸಹ ಅವಕಾಶಗಳು ಬರುತ್ತಿವೆ ಎನ್ನಲಾಗಿ ಕೇಳಿಬಂದಿದೆ.

ಕನ್ನಡದಲ್ಲಿಯೂ ಸಹ ಹೆಚ್ಚು ಸಿನಿಮಾಗಳು ನಟನೆ ಮಾಡುವುದಕ್ಕೆ ಕೇಳಿಬಂದಿದ್ದು ನಟ ತಾರಕ್ ಅವರು ಮುಂದಿನ ದಿನಗಳಲ್ಲಿ ಸಕತ್ತಾಗಿಯೇ ಮಿಂಚುತ್ತಾರೆ ಎಂಬುದಾಗಿ ಈಗಾಗಲೇ ಗಾಂಧಿನಗರದಲ್ಲಿ ಸದ್ದಾಗಿದೆ. ಹೌದು ನಟ ತಾರಕ್ ಅವರು ತಮ್ಮ ಮೈಕಟ್ಟಿನ ಮೂಲಕ ತಮ್ಮ ಸಕತ್ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೇನೆ ಪ್ರತಿದಿನ ವರ್ಕೌಟ್ ಸಹ ಮಾಡುತ್ತಾ ಸಿನಿಮಾರಂಗದಲ್ಲಿ ಏನಾದರೂ ಒಂದು ದೊಡ್ಡ ಸಾಧನೆ ಮಾಡಬೇಕೆಂಬುದು ತಾರಕ್ ಅವರ ಆಶಯವಾಗಿದೆ.

ಇದೀಗ ಪ್ರೊಡಕ್ಷನ್ ನಂಬರ್ ಒಂದರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕರೋನಾ ಎರಡನೇ ಅಲೆ ಬರುವ ಮುನ್ನ ಏರಿಯಾ ಹುಡುಗರು ಎಂಬ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಿತು. ನಟ ಧ್ರುವ ಸರ್ಜಾ ಅವರು ಈ ಚಿತ್ರದ ಮೂರ್ತಕ್ಕೆ ಆಗಮಿಸಿದ್ದರು. ನಟ ತಾರಕ್ ಅವರಿಗೆ ಹಾಗೂ ಇಡೀ ಏರಿಯಾ ಹುಡುಗರು ಎಂಬ ಹೊಸ ಸಿನಿಮಾ ತಂಡಕ್ಕೆ ಧ್ರುವ ಸರ್ಜಾ ಅವರು ಶುಭಕೋರಿದ್ದರು. ಹೌದು ಇತ್ತೀಚಿಗಷ್ಟೇ ತಾರಕ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು , ಸರಳವಾಗಿಯೇ ಹುಟ್ಟು ಹಬ್ಬವನ್ನ ಆಚರಣೆ ಮಾಡಿ, ಒಬ್ಬ ಸರಳ ವ್ಯಕ್ತಿ ಕೂಡ ಎನಿಸಿಕೊಂಡರು.    

ಹೌದು ವೃತ್ತಿಯಲ್ಲಿ ನಟ ತಾರಕ್ ಅವರು ವೈದ್ಯರು. ಈ ಕರೋನಾ ಸಮಯದಲ್ಲಿ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ, ರೋಗಿಗಳಿಗೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿ ಕೇಳಿಬಂದಿದೆ. ಹೌದು ಸ್ಯಾಂಡಲ್ವುಡ್ನಲ್ಲಿ ಯುವನಟ ತಾರಕ್ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಕಾಮೆಂಟ್ ಮಾಡಿ, ಮತ್ತು ಹೊಸ ನಟನಿಗೆ ಹಾರೈಸಿ ಧನ್ಯವಾದಗಳು...