ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಿನ್ನು ಅಲಿಯಾಸ್ ರಶ್ಮೀ ಪ್ರಭಾಕರ್ ಮನೆಯಲ್ಲಿ ಮದುವೆ ಸಂಭ್ರಮ

By Infoflick Correspondent

Updated:Wednesday, March 30, 2022, 14:19[IST]

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಿನ್ನು ಅಲಿಯಾಸ್ ರಶ್ಮೀ ಪ್ರಭಾಕರ್ ಮನೆಯಲ್ಲಿ ಮದುವೆ ಸಂಭ್ರಮ

ಒಂದು ಕಾಲದ ನಂಬರ್ ಒನ್ ಸೀರಿಯಲ್ ಲಕ್ಷ್ಮೀ ಬಾರಮ್ಮ ಧಾರಾವಾಹಿ. ಸತತ ಎಂಟು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರವಾಗಿತ್ತು. ಈ ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು. ಈ ಸೀರಿಯಲ್ ನ ಕಲಾವಿದರು ಪ್ರಸ್ತುತ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಧಾರಾವಾಹಿ ನಂತರದಲ್ಲಿ ಕಲಾವಿದರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದ್ದಲ್ಲದೇ, ಕನ್ನಡ, ತೆಲುಗು ಸೇರಿದಂತೆ ಇತರೆ ಭಾಷೆಗಳ ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಚಂದನ್ ಕುಮಾರ್ ಈ ಸೀರಿಯಲ್ ನಲ್ಲಿ ಚಂದು ಪಾತ್ರ ಮಾಡಿದ್ದರು. ಇನ್ನು ಮೊದಮೊದಲು ಚಿನ್ನು ಪಾತ್ರ ನಿರ್ವಹಿಸಿದ್ದ ಕವಿತಾ ಕಾರಣಾಂತರಗಳಿಂದ ಸೀರಿಯಲ್ ತೊರೆದಿದ್ದರು. ಆಗಲೇ ಚಿನ್ನು ಪಾತ್ರಕ್ಕೆ ಬಂದದ್ದು ರಶ್ಮಿ ಪ್ರಭಾಕರ್.

ಕೆಲ ತಿಂಗಳ ಹಿಂದಷ್ಟೇ ರಶ್ಮೀ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಶ್ಮಿ ತೆಲುಗು ಧಾರಾವಾಹಿಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಕೆಲ ಸಮಯದ ಹಿಂದ ಪರಿಚಯವಾಗಿದ್ದ ನಿಖಿಲ್ ಭಾರ್ಗವ್ ಹಾಗೂ ರಶ್ಮಿ ಪ್ರಭಾಕರ್ ಸ್ನೇಹಿತರಾಗಿದ್ದರು. ಆದರೆ ಸ್ನೇಹಕ್ಕೆ ಪ್ರೀತಿಯ ಮುದ್ರೆ ಹೊತ್ತಿ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ಅದ್ಧೂರಿಯಾಗಿ ನಿಖಿಲ್ ಜೊತೆ ನಿಶ್ಚಿಥಾರ್ತ ಮಾಡಿಕೊಂಡಿರುವ ರಶ್ಮಿ ಮುಂದಿನ ತಿಂಗಳು ಭಾರ್ಗವ್ ಕೈ ಹಿಡಿಯಲಿದ್ದಾರೆ. ನಿಖಿಲ್ ಭಾರ್ಗವ್ ಬೆಂಗಳೂರಿನಲ್ಲಿ ನೆಲೆಸಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 

ಇನ್ನು ಮುಂದಿನ ತಿಂಗಳು ಅಂದರೆ ಏಪ್ರಿಲ್ 25ರಂದು ರಶ್ಮೀ ಹಾಗೂ ಭಾರ್ಗವ್ ಮದುವೆಯಾಗಲಿದ್ದಾರೆ. ಮದುವೆಗಾಗಿ ಎರಡೂ ಕುಟುಂಬದಲ್ಲಿ ತಯಾರಿಗಳು ನಡೆಯುತ್ತಿವೆ. ಶೂಟಿಂಗ್ ಗಳಲ್ಲಿ ಬ್ಯುಸಿ ಇರುವ ರಶ್ಮೀ, ಶಾಪಿಂಗ್ ಕೂಡ ಮಾಡುತ್ತಿದ್ದಾರೆ. ಮದುವೆಗೆ ಸೀರೆ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ರಶ್ಮೀ ಅವರ ಸ್ನೇಹಿತರು ಸೇರಿ ಬ್ಯಾಚುಲರ್ ಪಾರ್ಟಿ ಮಾಡಿದ್ದು, ರಶ್ಮೀ ಸಕತ್ ಎಂಜಾಯ್ ಮಾಡಿದ್ದಾರೆ.