ನಟ ಮಹೇಶ್ ಬಾಬು ಜೊತೆ ಅನು ಸಿರಿಮನೆ ಖ್ಯಾತಿಯ ಮೇಘ..! ಅಸಲಿ ಸತ್ಯ ಈಗ ಬಯಲು
Updated:Tuesday, April 12, 2022, 10:45[IST]

ಕನ್ನಡ ಕಿರುತೆರೆಯ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ಸಾಕಷ್ಟು ಕಲಾವಿದರು ಕನ್ನಡದಲ್ಲಿ ಈಗಾಗಲೇ ಬೆಳಕಿಗೆ ಬಂದಿದ್ದಾರೆ. ಅವರದೇ ಆದ ಸಕತ್ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಕನ್ನಡ ಸೀರಿಯಲ್ ಮೂಲಕವೇ ಅಪಾರ ಕನ್ನಡಿಗರ ಮನಸ್ಸನ್ನು ಗೆಲ್ಲುವ ಯಶಸ್ವಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಬರುವ ನಟಿ ಮೇಘ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ ಎನ್ನಬಹುದು. ಜೊತೆ ಜೊತೆಯಲಿ ಸೀರಿಯಲ್ ಮೂಲಕ ಅನಿರುದ್ಧ್ ಅವರಿಗೆ ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯ ಆರಂಭಿಸಿದರು. ಹೌದು ಅನುಸಿರಿಮನೆ ಪಾತ್ರದಲ್ಲಿ ಮಿಂಚಿದ ನಟಿ ಮೇಘ ಶೆಟ್ಟಿ ಅವರು ಇಂದು ಕನ್ನಡಿಗರ ಮನೆ ಮಾತಾಗಿದ್ದಾರೆ.
ಹೆಚ್ಚು ಕನ್ನಡಿಗರು ಹೃದಯವನ್ನು ಗೆದ್ದಿದ್ದಾರೆ ಎಂದು ನಾವು ಹೇಳಬಹುದು. ನಟಿ ಮೇಘ ಶೆಟ್ಟಿ ಅವರು ಇತ್ತೀಚಿಗಷ್ಟೇ ಜೊತೆ ಜೊತೆಯಲಿ ಸೀರಿಯಲ್ ಜೊತೆ ನಿರ್ಮಾಪಕಿಯಾಗಿ ಕೂಡ ಕೆಂಡಸಂಪಿಗೆ ಎಂಬ ಸೀರಿಯಲ್ಗೆ ಹಣವನ್ನ ಹೂಡಿಕೆ ಮಾಡಿ ಸುದ್ದಿಯಾಗಿದ್ದರು. ಬಳಿಕ ನಟ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿ ಅತ್ತ ಡಾರ್ಲಿಂಗ್ ಕೃಷ್ಣ, ನಿಷ್ವಿಕ ನಾಯ್ಡು ದಿಲ್ ಪಸಂದ್ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಬೆಳವಣಿಗೆಯ ನಡುವೆ ನಟಿ ಮೇಘ ಶೆಟ್ಟಿ ಅವರು ಇದೀಗ ತೆಲುಗು ಖ್ಯಾತ ಸ್ಟಾರ್ ನಟ ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿದ್ದಾರೆ .

ಅಸಲಿಗೆ ಇದೇನಪ್ಪ ಎಂದು ಅಭಿಮಾನಿಗಳು ತುಂಬಾ ಕಾತರದಿಂದ ಕಾದಿದ್ದು, ಇದಕ್ಕೆ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಿದೆ. ಅದು ನಟಿ ಮೇಘ ಶೆಟ್ಟಿಯವರು ಹಾಗೂ ನಟ ಮಹೇಶ್ ಬಾಬು ಒಂದು ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ನಟ ಮಹೇಶ್ ಬಾಬು ಅವರ ಪತ್ನಿಯಾಗಿ ನಟಿ ಮೇಘ ಶೆಟ್ಟಿಯವರು ಈ ಜಾಹೀರಾತಿನಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ನಟಿ ಮೇಘ ಶೆಟ್ಟಿಯವರು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೂರು ಫೋಟೋಗಳನ್ನು ಮಹೇಶ್ ಬಾಬು ಅವರ ಜೊತೆ ಕೆಂಪುಸೀರೆ ತೊಟ್ಟು ಜೊತೆಗೆ ನಿಂತಿದ್ದು ಶೇರ್ ಮಾಡಿಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೇನೇ ಮೇಘ ಶೆಟ್ಟಿ ಅವರ ಅಭಿಮಾನಿಗಳು ನಟ ಮಹೇಶ್ ಬಾಬು ಅವರ ಜೊತೆ ಫೋಟೋ ನೋಡಿ ಖುಷಿಯಾಗಿದ್ದಾರೆ ಎಂದು ತಿಳಿದುಬಂದಿದೆ...
ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಸಾಲದ ಭಾದೆ ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಯಾವುದೇ ಸಮಸ್ಯೆಗಳಿದ್ದರೂ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ, ಅಶೋಕ ಡೀಲಕ್ಸ್ ಆರ್ ಎಸ್ ಟ್ರಾವೆಲ್ಸ್ ಶಿವಮೊಗ
9739332500