ಕಿರಿತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆಯಿಟ್ಟ ಗಟ್ಟಿಮೇಳ ಧಾರಾವಾಹಿಯ ರೌಡಿಬೇಬಿ- ಈಗ ಇವರ ಸಂಭಾವನೆ  ಎಷ್ಟು ಗೊತ್ತೆ ?

By Infoflick Correspondent

Updated:Saturday, April 16, 2022, 18:14[IST]

ಕಿರಿತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆಯಿಟ್ಟ ಗಟ್ಟಿಮೇಳ ಧಾರಾವಾಹಿಯ ರೌಡಿಬೇಬಿ- ಈಗ ಇವರ ಸಂಭಾವನೆ  ಎಷ್ಟು ಗೊತ್ತೆ ?

ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಮೂಲ್ಯ ಖ್ಯಾತಿಯ ನಿಶಾ ರಾಮಕೃಷ್ಣನ್  ಹಲವರಿಗೆ ಅಚ್ಚು ಮೆಚ್ಚು.‌ ಕಿರುತೆರೆ ಜನರ ಮನೆಗಳಲ್ಲಿ ದಿನಂ ಪ್ರತಿ ಕಾಣಿಸಿಕೊಂಡು ಅವರ ಮನ ಗೆದ್ದು ಈಗ ಬೆಳ್ಳಿತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ರೌಡಿ ಬೇಬಿಗೆ ಚಂದನವನದಲ್ಲೂ ನಟಿಸುವ ಅವಕಾಶವೊಂದು ಒದಗಿ ಬಂದಿದೆ.  

ರೌಡಿಬೇಬಿಯಾಗಿ ಕಾಣಿಸಿಕೊಂಡ‌ ನಿಶಾ, ನಿಜ ಜೀವನದಲ್ಲಿ ನಿಶಾ ರಾಮಕೃಷ್ಣನ್ ಅವರು ಸರಳ ಹಾಗೂ ಸೈಲೆಂಟ್ ಹುಡುಗಿ. ಆರನೇ ಕ್ಲಾಸ್‌ನಲ್ಲಿದ್ದಾಗಲೇ ಚಿಂಟು ಟಿವಿಯ ನಿರೂಪಕಿಯಾಗಿ ಕಾಣಿಸಿಕೊಂಡರು. ದೊಡ್ಡವರಾದ ಬಳಿಕ ಸ್ಟಾರ್ ಸುವರ್ಣದ ಸರ್ವ ಮಂಗಲ ಮಾಂಗಲ್ಯೆ ಸೀರಿಯಲ್‌ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. 

ವಿಶೇಷವೆಂದರೆ ಈಗ ಮೊದಲ ಸಿನಿಮಾದಲ್ಲೇ ದೊಡ್ಮಮನೆ‌‌ ಕುಟುಂಬದವರೊಡನೆ ನಟಿಯಾಗುವ ಅವಕಾಶ ಒದಗಿಬಂದಿರುವುದು ನಿಶಾ ರಾಮಕೃಷ್ಣನ್ ಅವರ ಅದೃಷ್ಟ. ವಿನಯ್ ರಾಜ್ ಕುಮಾರ್ ಅವರಿಗೆ ನಾಯಕ ನಟಿಯಾಗಿ ಅದೊಂದಿತ್ತು ಕಾಲ ಎಂಬ ಸಿನಿಮಾದಲ್ಲಿ ನಿಶಾ ರಾಮಕೃಷ್ಣನ್ ನಟಿಸಲಿದ್ದಾರೆ. 

ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅವರ ಜೊತೆಗೆ ತಾರೆಯಾಗಿ ಮಿಂಚುತ್ತಿದ್ದಾರೆ. ನಿಶಾ ರಾಮಕೃಷ್ಣನ್ ಅವರಿಗೆ ಟಾಲಿವುಡ್​ನಿಂದ ಸಿಕ್ಕಾಪಟ್ಟೆ ಆಫರ್ಸ್ ಗಳು ಬರುತ್ತಿದ್ದು, ನಂತರ ತೆಲುಗಿನ ಒಂದು ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ.   

ಇಷ್ಟೇಲ್ಲ ಬೇಡಿಕೆ ಇರುವ ನಟಿ ಸಂಭಾವನೆ ಎಷ್ಟು ? ಗೊತ್ತೆ ಇಲ್ಲಿದೆ ನೋಡಿ. ನಿಶಾ ಅವರು ಒಂದು ಎಪಿಸೋಡ್ ಗೆ ಮೊದಲು 8-10 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ಸಂಭಾವನೆ ಹೆಚ್ಚಿಸಿದ್ದು, ಒಂದು ಎಪಿಸೋಡ್ ಗೆ 40-45 ಸಾವಿರಕ್ಕೆ ಪಡೆಯುತ್ತಿದ್ದಾರೆ. ಎಂದು ಬಲ್ಲಮೂಲಗಳು ತಿಳಿಸಿವೆ.