ಯಶ್ ಮೇಲೆ ಗರಂ ಆದ ತೆಲುಗು ಮಾಧ್ಯಮ ; ಮರುಕಳಿಸಿದ ಘಟನೆ
Updated:Monday, April 11, 2022, 23:44[IST]

ಚಿತ್ರದ ಪ್ರಚಾರ ಮಾಡುತ್ತಿದೆ 'ಕೆಜಿಎಫ್ 2' ತಂಡ. ಹಾಗಾಗಿ ಈಗ ಹೈದ್ರಾಬಾದ್ನಲ್ಲೂ ಕೂಡ ಚಿತ್ರ ಸುದ್ದಿಗೋಷ್ಟಿ ನಡೆದಿದೆ. ಹೈದ್ರಾಬಾದ್ನಲ್ಲಿ ನಡೆದ ಸುದ್ದಿಗೋಷ್ಟಿ ಹೆಚ್ಚಾಗಿ ಗಮನ ಸೆಳೆಯುತ್ತಿದೆ. ಏಕೆಂದರೆ ಕರ್ನಾಟಕದಲ್ಲಿ ಪುಷ್ಪ ಸಿನಿಮಾ ಪ್ರಚಾರದಲ್ಲಿ ಅಲ್ಲು ಅರ್ಜುನ್ ಭಾಗವಹಿಸಿದಾಗ ನಡೆದ ಘಟನೆ ಈಗ ಯಶ್ ಗೆ ಮರುಕಳಿಸಿದೆ.
ಹಿಂದೆ ತೆಲುಗು ಸ್ಟಾರ್ ನಟನಿಗೆ ಕನ್ನಡದ ಮಾಧ್ಯಮಗಳು ಕೇಳಿದ್ದ ಪ್ರಶ್ನೆಯೇ ಈಗ ತೆಲುಗು ಮಾಧ್ಯಮಗಳಿಂದ ಯಶ್ಗೆ ಎದುರಾಗಿದೆ. ಹೈದ್ರಾಬಾದ್ನಲ್ಲಿ ಕೆಜಿಎಫ್ 2 ಚಿತ್ರದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಯಶ್ ಮತ್ತು ತಂಡ ಈ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ಹೋಗಿದ್ದಾರೆ.
ಜರ್ನಲಿಸ್ಟ್ ಒಬ್ಬರು ಸುದ್ದಿಗೋಷ್ಟಿಗೆ ಒಂದು ಗಂಟೆ ತಡವಾಗಿ ಬಂದಿದ್ದೀರಿ. ಎಲ್ಲರೂ ಎರಡು ಗಂಟೆಯಿಂದ ಕಾಯುತ್ತಾ ಇದ್ದೇವೆ' ಎಂದು ಹೇಳುತ್ತಾರೆ. ಈ ಬಗ್ಗೆ ಕ್ಷಮೆ ಕೇಳಿದ್ದಾರೆ ಯಶ್. ಅಲ್ಲು ಅರ್ಜುನ್ ಅವರಿಗೂ ಇದೇ ಸನ್ನಿವೇಶ ಕರ್ನಾಟಕದಲ್ಲಿ ಜರುಗಿತ್ತು.
ತೆಲುಗು ಮಾಧ್ಯಮಗಳು ತಡವಾಗಿದ್ದಕ್ಕೆ ಗರಂ ಆದ ಕಾರಣ ಯಶ್, ತೆಲುಗಿನಲ್ಲೇ ಮಾತನಾಡಿ 'ದಯವಿಟ್ಟು ಕ್ಷಮಿಸಿ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ, ಆಯೋಜಕರು ಹೇಳಿದ ಸಮಯಕ್ಕೆ, ಜಾಗಕ್ಕೆ ಹೋಗುತ್ತಾ ಇದ್ದೇನೆ. ನನಗೆ ಸಮಯದ ಬೆಲೆ ಗೊತ್ತು, ನಮ್ಮಿಂದ 10 ನಿಮಿಷ ತಡವಾಗಿದ್ದರು ಅದು ನಮ್ಮದೇ ತಪ್ಪು, ಪ್ರೈವೆಟ್ ಫ್ಲೈಟ್ನಲ್ಲಿ ಬಂದಿದ್ದು, ಹಾಗಾಗಿ ಟೇಕ್ ಆಫ್ ಆಗಲು ಸಮಯ ತೆಗೆದುಕೊಳ್ಳುತ್ತದೆ' ಎಂದು ಯಶ್ ಉತ್ತರಿಸಿದ್ದಾರೆ.
ಈ ಘಟನೆ , ತೆಲುಗು ಮಾಧ್ಯಮದ ಪ್ರಶ್ನೆ ಕಾಕತಾಳಿಯವೋ ಅಥವಾ ಪ್ರತಿಕಾರವೋ ಎಂದು ವಿಡಿಯೋ ನೋಡಿದ ಜನರಲ್ಲಿ ಪ್ರಶ್ನೆ ಮೂಡಿದೆ.
VIDEO CREDIT : CINIBUZZ