ಕನ್ನಡ ಚಿತ್ರರಂಗದ ಪೋಷಕ ಪಾತ್ರಧಾರಿಯ ಭೀಕರ ಸಾವು! ಚಾಕುವಿನಿಂದ ಚುಚ್ಚಿಕೊಂದದ್ದು ಯಾರು ?
Updated:Saturday, June 18, 2022, 19:01[IST]

ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟ ಸತೀಶ್ ವಜ್ರ (36) ಅವರನ್ನು ಕೊಲೆ ಮಾಡಲಾಗಿದೆ. ಸತೀಶ್ ಕನ್ನಡದ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಇವರು ನಟ ದರ್ಶನ್ ಹಾಗೂ ಪ್ರಜ್ವಲ್ ದೇವರಾಜ್ರ ಅಭಿಮಾನಿಯೂ ಆಗಿದ್ದರು. ನಟನಾಗಿ ಚಂದನವನದಲ್ಲಿ ಮಿಂಚಬೇಕು ಎಂಬ ಆಸೆ ಹೊಂದಿದ್ದ ಸತೀಶ್ ವಜ್ರ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದರು.
ಸತೀಶ್ ಅವರ ಬಾಮೈದನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸಹೋದರಿಯ ಹತ್ಯೆಗೆ ಸತೀಶ್ ಬಾಮೈದ ಸೇಡು ತೀರಿಸಿಕೊಂಡಿರುವ ಶಂಕೆ ಇದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟ ಸತೀಶ್ ವಜ್ರ ಅವರು ತಮ್ಮ ಮನೆಯಲ್ಲಿ ಇದ್ದರು. ಈ ವೇಳೆ ಮನೆಗೆ ಬಂದ ಬಾಮೈದನು ಸತೀಶ್ಗೆ ಚಾಕುವಿನಿಂದ ಇರಿದಿದ್ದಾನೆ. ಸತೀಶ್ ದೇಹಕ್ಕೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ರಸ್ರಾವ ಉಂಟಾಗಿ ಸತೀಶ್ ವಜ್ರ ಮೃತಪಟ್ಟಿದ್ದಾರೆ. ಎಂಬ ಅನುಮಾನಗಳಿವೆ.
ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.