Meghana Raj : ಮದುವೆ ವಿಚಾರವಾಗಿ ಉತ್ತರವೇ ಮೇಘನಾ ರಾಜ್ ಹಾಕಿದ ಈ ಫೋಟೊ ಹಾಗು ಟ್ಯಾಟೊ

By Infoflick Correspondent

Updated:Saturday, August 27, 2022, 11:50[IST]

Meghana Raj : ಮದುವೆ ವಿಚಾರವಾಗಿ ಉತ್ತರವೇ ಮೇಘನಾ ರಾಜ್ ಹಾಕಿದ ಈ ಫೋಟೊ ಹಾಗು ಟ್ಯಾಟೊ

ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದಾರೆ. ಅಲ್ಲಿಂದಲೇ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು ಶೇರ್​ ಮಾಡಿಕೊಂಡಿರುವ ಟ್ಯಾಟೂ ಫೋಟೋ ಸಖತ್​ ಗಮನ ಸೆಳೆಯುತ್ತಿದೆ ವೈರಲ್ ಆಗಿದೆ. 

ಚಿರಂಜೀವಿ ಸರ್ಜಾ ಮತ್ತು ರಾಯನ್​ ರಾಜ್​ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರುವಂತೆ ಮೇಘನಾ ರಾಜ್​ ಅವರು ಈ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಬದುಕಿನಲ್ಲಿ ಇವರಿಬ್ಬರು ತುಂಬ ಪ್ರಮುಖ ವ್ಯಕ್ತಿಗಳು. ವಿಶೇಷವಾದ ವಿನ್ಯಾಸದಲ್ಲಿ ಇರುವ ಈ ಟ್ಯಾಟೂ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. 

ಎರಡನೇ ಮದುವೆ ಬಗ್ಗೆ ವದಂತಿಗಳು ಹರಿದಾಡುತ್ತಿರೋ ಬೆನ್ನಲ್ಲೇ ಮೇಘನಾ ರಾಜ್ ಪತ್ನಿ ಚಿರಂಜೀವಿ ಸರ್ಜಾ ಹಾಗೂ ರಾಯನ್​ ರಾಜ್​ ಸರ್ಜಾ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ಇವರಿಬ್ಬರೂ ತುಂಬಾನೇ ಮುಖ್ಯ ವ್ಯಕ್ತಿಗಳು ಎಂಬುದನ್ನು ಈ ಮೂಲಕ ಸಾರಿ ಹೇಳಿದ್ದಾರೆ. 

ಪತಿ ಚಿರಂಜೀವಿ ಸರ್ಜಾ ಅವರ ನೆನಪುಗಳು ಮೇಘನಾ ರಾಜ್ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಇರಲಿವೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಗಿದೆ. ಹೊಸದಾಗಿ ಟ್ಯಾಟೂ ಹಾಕಿಸಿಕೊಂಡು ಮೇಘನಾ ಪ್ರೀತಿಯನ್ನು ಶಾಶ್ವತವಾಗಿಸಿದ್ದಾರೆ.