Rashmika Mandanna : ಬಾಲ್ಯದ ಗೆಳತಿಯ ಮದವೆಯಲ್ಲಿ ಹೀಗೆ ಕಂಗೊಳಿಸಿದ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡ ಅನುಭವ
Updated:Monday, May 16, 2022, 09:16[IST]

ಟಾಲಿವುಡ್, ಬಾಲಿವುಡ್, ಕಾಲಿವುಡ್ ಸಖತ್ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಕೈತುಂಬ ಆಫರ್ಗಳನ್ನು ಇಟ್ಟುಕೊಂಡಿದ್ದಾರೆ. ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ, ಸ್ಯಾಂಡಲ್ವುಡ್ನಲ್ಲಿ ಮಿಂಚಿ, ಟಾಲಿವುಡ್ನಲ್ಲೂ ಹೆಸರು ಮಾಡಿದವರು. ಇದೀಗ ಬಾಲಿವುಡ್ನ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ರಶ್ಮಿಕಾ.
ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರೀಗ ‘ನ್ಯಾಷನಲ್ ಕ್ರಶ್’ ಎಂದೂ ಫ್ಯಾನ್ಸ್ಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಆಗಾಗ ತಮ್ಮ ದಿನಚರಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇಷ್ಟೆಲ್ಲ ಬ್ಯುಸಿ ಇರುವ ರಶ್ಮಿಕಾ, ಕೊಡಗಿನ ತಮ್ಮ ತವರಿನಲ್ಲಿ ಸುತ್ತಾಡುತ್ತಿದ್ದಾರೆ. ಬಿಡುವು ಮಾಡಿಕೊಂಡು ರಶ್ಮಿಕಾ ಗೆಳತಿಯ ಮದುವೆಗೆ ಹೋಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ರಶ್ಮಿಕಾ ಸ್ನೇಹಿತೆ ಮದುವೆ ಭಾನುವಾರ ನಡೆದಿದ್ದು, ಮದುವೆಗೆ ಆಗಮಿಸಿದ್ದಾರೆ. ಮದುಮಗಳಾದ ರಾಗಿಣಿ ಮುದ್ದಯ್ಯ ಜೊತೆಗೆ ರಶ್ಮಿಕಾ ಅವರದ್ದು 17 ವರ್ಷಗಳ ಗೆಳೆತನ. ಇಂದು (ಮೇ 15) ಮದುವೆಯ ಸಂಭ್ರಮದಲ್ಲಿದ್ದ ರಶ್ಮಿಕಾ, ಒಂದಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೊಡಗಿನಲ್ಲಿ ಕೂರ್ಗಿ ಸಂಪ್ರದಾಯದಂತೆ ಮದುವೆಯಾಗಿದ್ದು, ರಶ್ಮಿಕಾ ಕೊಡಗಿನ ಸೀರೆ ಉಟ್ಟು ಸಂಭ್ರಮಿಸಿದ್ದಾರೆ.
'ಮುಂಜಾನೆ 4 ಗಂಟೆಯ ಫ್ಲೈಟ್ ಮಿಸ್ ಮಾಡಿಕೊಂಡೆ. ನನ್ನ ವಿಮಾನ 4-5 ಬಾರಿ ತಡವಾಯ್ತು. ಧನ್ಯವಾದ ದೇವರೆ ಕೊನೆಗೂ ಆಕೆಯ ಮದುವೆಗೆ ನಾನು ಬಂದೆ. ಈ ಹುಡುಗಿಯರ ಜೊತೆಗೆ ಬೆಳೆದ 17 ವರ್ಷಗಳಾದರೂ ಏನೂ ಬದಲಾಗಿಲ್ಲ..' ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

17 ವರ್ಷದ ಗೆಳತಿಯೊಂದಿಗೆ ರಶ್ಮಿಕಾ ಮಂದಣ್ಣ ಮುದ್ದಾದ ಪೋಸ್


ಮದುವೆಯಲ್ಲಿ ಮದುಮಗಳ ಗೆಳತಿಯಾಗಿ ಮಿಂಚಿದ ಕೊಡಗಿನ ಬೆಡಗಿ

ಗೆಳತಿಯ ಮದುವೆಯಲ್ಲಿ ಗೆಳತಿಯರೊಂದಿಗೆ ಮುಗುಳು ನಕ್ಕ ನ್ಯಾಷನಲ್ ಕ್ರಶ್