ಇದೆ ಜಾಗದಲ್ಲಿ ಬೈಕ್ ಉರುಳಿ ಬಿತ್ತು.! ಸಂಚಾರಿ ವಿಜಯ್ ಅಪಘಾತ ಹೇಗಾಯ್ತು ನೋಡಿ

Updated: Friday, June 18, 2021, 10:44 [IST]

    

ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಶನಿವಾರ ರಾತ್ರಿ ಕರ್ನಾಟಕದ ಖ್ಯಾತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ, ಇದೆಲ್ಲದರ ಬದಲಿಗೆ ಒಬ್ಬ ಒಳ್ಳೆಯ ಮನುಷ್ಯ, ಸದಾ ಯಾವಾಗಲೂ ಇನ್ನೊಬ್ಬರ ಒಳಿತಿಗಾಗಿ ದುಡಿಯುತ್ತಿದ್ದ, ಮತ್ತು ಮಿಡಿಯುತ್ತಿದ್ದ ಜೀವ,ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದರು. ಹೌದು ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ತಲೆಗೆ ಜೋರಾದ ಪೆಟ್ಟುಬಿದ್ದು, ಮೆದುಳು ನಿಷ್ಕ್ರಿಯಗೊಂಡ ಕಾರಣಕ್ಕಾಗಿ ಇವರ ದೇಹದ ಅಂಗಾಂಗಗಳನ್ನು ದಾನ ಮಾಡಿ ಕೊನೆಯುಸಿರೆಳೆದರು.

ಹಾಗೇನೆ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆಯನ್ನು ಸಹ ನಡೆಸಲಾಯಿತು. ಇದೆಲ್ಲದರ ನಡುವೆ ಮುಂಚೆ ಯಾವ ಒಂದೇ ಒಂದು ಮಾಧ್ಯಮವೂ ಸಹ ಸಂಚಾರಿ ವಿಜಯ್ ಅಪಘಾತ ಹೇಗಾಯಿತು, ಯಾವ ಸ್ಥಳದಲ್ಲಿ ಆಯಿತು ಮತ್ತು ಅದರ ಪೂರ್ತಿ ಮಾಹಿತಿ ಏನು ಎಂದು ಯಾವ ವಿಡಿಯೋ ಮೂಲಕವೂ ತೋರಿಸಲಿಲ್ಲ. ಆದ್ರೆ ಇದೀಗ ಇಲ್ಲೊಬ್ಬ ಯುವಕ ಚೆನ್ನಾಗಿ ವಿಡಿಯೋ ಮೂಲಕವೇ ತಿಳಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಅಂದು ರಾತ್ರಿ ಯಾವ ಕಾರಣಕ್ಕೆ ನಟ ಸಂಚಾರಿ ವಿಜಯ್, ಹಾಗೂ ನವೀನ್ ಹೊರಗಡೆ ಹೋಗ್ತಿದ್ದರು.   

ಮತ್ತೆ ಯಾವ ಕಾರಣಕ್ಕಾಗಿ ಮನೆಗೆ ಹಿಂದಿರುಗುವಾಗ ಯಾವ ಸಮಸ್ಯೆ ಎದುರಾಗಿ ಬೈಕ್ ಚಲಾಯಿಸುತ್ತಿದ್ದ ನವೀನ ಯಾವ ರೀತಿ ಎಡವಟ್ಟು ಮಾಡಿಕೊಂಡು, ಆಕ್ಸಿಡೆಂಟ್ ಮಾಡಿದನು ಎಂಬ ಪೂರ್ತಿ ಮಾಹಿತಿಯನ್ನು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದದ್ದೇನು, ಅಪಘಾತ ಸ್ಥಳದ ಬಗ್ಗೆ ಪೂರ್ತಿ ವಿವರ ಈ ವಿಡಿಯೋದಲ್ಲಿದೆ ನೋಡಿ, ಯಾವ ಮಾಧ್ಯಮದವರು ಪ್ರಸಾರ ಮಾಡದ ವಿಡಿಯೋವನ್ನು ಈತ ಬಿಡುಗಡೆ ಮಾಡಿದ್ದಾನೆ. ಒಮ್ಮೆ ವಿಡಿಯೋ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.