Puneeth rajkumar : ಸೈಮಾದಲ್ಲಿ ಅಪ್ಪು ಸಿನಿಮಾ ಸೇರಿ ಮೂರು ಸಿನಿಮಾ ನಾಮಿನೇಟ್..! ವೋಟ್ ನೀವು ಮಾಡಬಹುದು ನೋಡಿ

By Infoflick Correspondent

Updated:Saturday, August 27, 2022, 10:00[IST]

Puneeth rajkumar :  ಸೈಮಾದಲ್ಲಿ ಅಪ್ಪು ಸಿನಿಮಾ ಸೇರಿ ಮೂರು ಸಿನಿಮಾ ನಾಮಿನೇಟ್..! ವೋಟ್ ನೀವು ಮಾಡಬಹುದು ನೋಡಿ

ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅಥವಾ ನಾವು ಇದನ್ನು ಸೈಮಾ 2021ನೇ ಸಾಲಿನ ನಾಮನಿರ್ದೇಶನ ಪಟ್ಟಿ ಎಂದು ಕರೆಯಬಹುದು. ಈಗ ಈ ಪಟ್ಟಿ ಬಿಡುಗಡೆ ಹೊಂದಿದೆ. ಕೆಲವು ದಕ್ಷಿಣ ಭಾರತದ ಸಿನಿಮಾಗಳು ಇದೀಗ ಹೆಚ್ಚು ನಾಮಿನೇಟ್ ಆಗಿರುವುದು ಹೆಮ್ಮೆಯ ವಿಚಾರ. ಈ ನಮ್ಮ ಸ್ಯಾಂಡಲ್ವುಡ್ ಸಿನಿರಂಗದಿಂದಲೂ ಕೂಡ ಒಟ್ಟು ಮೂರು ಸಿನಿಮಾಗಳು ನಾಮಿನೇಟ್ ಆಗಿವೆ ಎನ್ನಲಾಗಿದೆ. ಟಾಲಿವುಡ್ ಅಂಗಳದ ಖ್ಯಾತ ನಟ ಅಲ್ಲೂ ಅರ್ಜುನ್ ಅಭಿನಯದ ಪುಷ್ಪ ಚಿತ್ರ ಒಟ್ಟು 12 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರ ಮುಖಾಂತರ ಅತಿ ಹೆಚ್ಚು ನಾಮ ನಿರ್ದೇಶನಗೊಂಡ ಚಿತ್ರ ಈ ಪುಷ್ಪ ಸಿನಿಮಾ ಎಂದು ಹೇಳಲಾಗುತ್ತಿದ್ದು ಈ ಮೂಲಕ ಹೆಚ್ಚು ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಬಹುದು.

ನಮ್ಮ ಕನ್ನಡ ಚಿತ್ರರಂಗದಿಂದ ಒಟ್ಟು ಮೂರು ಚಿತ್ರಗಳು ಸೈಮಾಗೆ ನಾಮಿನೇಟ್ ಆಗಿದ್ದು ನಿರ್ದೇಶಕ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ರಾಬರ್ಟ್ ಚಿತ್ರ ಒಟ್ಟು 7 ವಿಭಾಗಗಳಲ್ಲಿ ನಾಮಿನೇಟ್ ಆಗಿರುವುದು ಖುಷಿಯ ವಿಚಾರ. ಇನ್ನೊಂದು ಕಡೆ ರಾಜ್ ಬಿ ಶೆಟ್ಟಿ ಅವರು ಕೂಡ ಕನ್ನಡಿಗರ ಮನೆಮಾತಾದ ನಿರ್ದೇಶಕ. ಹೌದು ಇವರೆ ಅಭಿನಯಿಸಿ ನಿರ್ದೇಶಿಸಿದ ಸಿನಿಮಾ ಗರುಡಗಮನ ವೃಷಭ ವಾಹನ ಚಿತ್ರಕ್ಕೂ ಎಂಟು ವಿಭಾಗಗಳಲ್ಲಿ ನಾಮ ನಿರ್ದೇಶನ ಆಗಿರುವುದಾಗಿಯಂತೆ. ಚಿತ್ರ ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ ರಾಮ್ ಅವರು ಅಪ್ಪು ಅವರಿಗೆ ಯುವರತ್ನ ಸಿನಿಮಾ ನಿರ್ದೇಶನ ಮಾಡಿದ್ದರು. ಇವರ ಈ ಚಿತ್ರ ಯುವರತ್ನ ಒಟ್ಟು ಏಳು ವಿಭಾಗಗಳಲ್ಲಿ ಸೈಮಾಗೆ ನಾಮನಿರ್ದೇಶನಗೊಂಡಿರುವುದಾಗಿಯೂ ಸಹ ತಿಳಿದು ಬಂದಿದೆ. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಎಲ್ಲಿದ ಸಂತಸ ತಂದಿರುವುದಂತೂ ನಿಜ.  

ಅಸಲಿಗೆ ನೀವು ಕೂಡ ಈ ಕನ್ನಡದ ಮೂರೂ ಚಿತ್ರಗಳು ಒಟ್ಟಿಗೆ ನಿಮ್ಮ ನೆಚ್ಚಿನ ಸಿನಿಮಾಗಳು ಬೇರೆ ಬೇರೆ ಭಾಷೆಯ ಒಳಗೊಂಡಿದ್ದರೂ ಸಹ ನೀವು ವೋಟ್ ಮಾಡಬಹುದು. ನಿಮ್ಮ ನೆಚ್ಚಿನ ಸಿನಿಮಾಗೆ ವೋಟ್ ಮಾಡಬಹುದು ಅಸಲಿಗೆ  ಹೇಗೆ ವೋಟ್ ಮಾಡುವುದು, ವೋಟ್ ಮಾಡುವ ವಿಧಾನ ಹೇಗಿದೆ ಗೊತ್ತಾ..? ಸಿಧಾ ಸೈಮಾ ವೆಬ್ಸೈಟ್ ನಲ್ಲಿ ವೋಟ್ ಮಾಡಿ, ಇಲ್ಲವಾದಲ್ಲಿ ಫೇಸ್ಬುಕ್ ಖಾತೆಯಾದ ಸೈಮ ಪೇಜ್ ಮೂಲಕ ವೋಟ್ ಮಾಡುವ ಅವಕಾಶ ಇದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಕನ್ನಡದ ಈ ಮೂರು ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...