Pavithra Lokesh : ಪವಿತ್ರಾ ಲೋಕೇಶ್‌ ಕೈ ಹಿಡಿಯಲು ನರೇಶ್‌ ಮಾಡಿರುವ ಕುತಂತ್ರಿ ಕೆಲಸವೇನು ಗೊತ್ತಾ..?

By Infoflick Correspondent

Updated:Thursday, June 30, 2022, 08:17[IST]

Pavithra Lokesh :  ಪವಿತ್ರಾ ಲೋಕೇಶ್‌ ಕೈ ಹಿಡಿಯಲು ನರೇಶ್‌ ಮಾಡಿರುವ ಕುತಂತ್ರಿ  ಕೆಲಸವೇನು ಗೊತ್ತಾ..?

ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಇಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಕೆಲ ವರ್ಷಗಳಿಂದ ಇಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಈಗ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪವಿತ್ರಾ ಮತ್ತು ನರೇಶ್ ಇಬ್ಬರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಇತ್ತೀಚೆಗೆ  ಮಹಾಬಲೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ಈ ವೀಡಿಯೋ ಹಾಗೂ ಫೋಟೋ ಕೂಡ ವೈರಲ್‌ ಆಗಿತ್ತು.   

ಇತ್ತ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್  ತುಂಬಾ ದಿನದಿಂದ ಬೇರೆಯಾಗಿ ವಾಸ ಮಾಡುತ್ತಿದ್ದಾರೆ . ಅತ್ತ ನರೇಶ್‌ ಹಾಗೂ ಅವರ ಪತ್ನಿ ರಮ್ಯ ರಘುಪತಿ ಕೂಡ ವಿಚ್ಛೇಧನ ಪಡೆದಿಲ್ಲ. ವಿಚ್ಛೇಧನ ಪಡೆಯುವುದಕ್ಕೂ ಮುನ್ನ ಈ ಸುದ್ದಿ ಹರಿದಾಡುತ್ತಿರುವುದರ ಬಗ್ಗೆ ಸ್ವತಃ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಸ್ಪಷ್ಟನೆ ನೀಡಬೇಕಿದೆ. ಇನ್ನು ನರೇಶ್‌ ಅವರು ಪವಿತ್ರಾ ಲೋಕೇಶ್‌ ಅವರನ್ನು ವಿವಾಹವಾಗಲು ರಮ್ಯ ರಘುಪತಿ ಅವರ ವಿರುದ್ಧ ಕುತಂತ್ರ ಮಾಡಿದ್ದಾರೆ. 

ಅದೇನೆಂದರೆ, ರಮ್ಯ ರಘಪತಿ ಅವರು ಗಂಧದ ಕಡ್ಡಿಯ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸಾಲವನ್ನು ಕೂಡ ಪಡೆದಿದ್ದಾರೆ.ಹಂತ  ಹಂತವಾಗಿ ರಮ್ಯ ಅವರು ಸಾಲ ತೀರಿಸುತ್ತಿದ್ದಾರೆ. ಹಾಗಿದ್ದರೂ ನರೇಶ್‌ ಅವರು ಕುತಂತ್ರ ಮಾಡಿ ೫೦೦ ಕೋಟಿ ರೂಪಾಯಿ ನಷ್ಟವುಂಟು ಮಾಡಿದ್ದು, ಪತ್ನಿಯ ವಿರುದ್ಧವೇ ಹಣ ವಂಚನೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ರಮ್ಯ ರಘುಪತಿ ಅವರು ಮಾಡದ ತಪ್ಪಿಗೆ ಈಗ ಪೊಲೀಸ್‌ ಠಾಣೆ, ಕೋರ್ಟ್‌ ಅಂತ ಅಲೆಯುತ್ತಿದ್ದಾರೆ. ಪವಿತ್ರಾ ಲೋಕೇಶ್‌ ಅವರ ಜೊತೆಗೆ ಮದುವೆಯಾಗಲು ಈ ಕುತಂತ್ರ ಮಾಡಿರುವುದು ನಿಜಕ್ಕೂ ವಿಪರ್ಯಾಸವೇ.