ಕನ್ನಡದ ಟಾಪ್ ನಟಿ ನಿಧನ ! ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ ! ಏನಾಗಿತ್ತು ಗೊತ್ತಾ ? ಶಾಕಿಂಗ್

Updated: Wednesday, April 7, 2021, 11:00 [IST]

ಕನ್ನಡ ಚಿತ್ರರಂಗದ ಮೊತ್ತೊಬ್ಬ ಹಿರಿಯ ನಟಿ ಪ್ರತಿಮಾ ದೇವಿ ನಿಧನರಾಗಿದ್ದಾರೆ. ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ನಟಿ ಪ್ರತಿಮಾ ದೇವಿ ಮಲಗಿದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿದ್ದು, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. 

ಏಪ್ರಿಲ್ 9, 1932 ರಂದು ಪ್ರತಿಮಾ ದೇವಿ ಜನಿಸಿದ್ದ ನಟಿ ಪ್ರತಿಮಾ ದೇವಿ, ಮೂರು ದಿನ ಕಳೆದಿದ್ದರೆ 89ನೇ ವಸಂತಕ್ಕೆ ಕಾಲಿಡುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ದುರಾದೃಷ್ಟವಶಾತ್ ಬಾರದ ಲೋಕಕ್ಕೆ ಪ್ರತಿಮಾ ದೇವಿ ಪಯಣಿಸಿದ್ದಾರೆ.  
ಮೈಸೂರಿನಲ್ಲಿರುವ ಸ್ವಂತ ನಿವಾಸಕ್ಕೆ ಪ್ರತಿಮಾ ದೇವಿ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗಿದ್ದು, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರತಿಮಾ ದೇವಿ ನಿಧನಕ್ಕೆ ಕನ್ನಡ ಚಿತ್ರರಂಗದ ಮಂದಿ ಕಂಬನಿ ಮಿಡಿದಿದ್ದಾರೆ. 

1947ರಲ್ಲಿ ತೆರೆಕಂಡ ತಮ್ಮ 14ನೇ ವಯಸ್ಸಿನಲ್ಲೇ  'ಕೃಷ್ಣಲೀಲಾ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪ್ರತಿಮಾ ದೇವಿ ಪದಾರ್ಪಣೆ ಮಾಡಿದ್ದರು. 1951ರಲ್ಲಿ ತೆರೆಕಂಡ 'ಜಗನ್‌ಮೋಹಿನಿ' ಚಿತ್ರದಲ್ಲಿ ಪ್ರತಿಮಾ ದೇವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಇದು ಶತದಿನೋತ್ಸವ ಕಂಡ ಪ್ರಪ್ರಥಮ ಕನ್ನಡ ಸಿನಿಮಾ.   

ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. ಶಿವ ಪಾರ್ವತಿ, ಶ್ರೀ ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚಿನ್ನ, ಮಂಗಳ ಸೂತ್ರ, ಪಾತಾಳ ಮೋಹಿನಿ, ನಾಗರಹಾವು, ನಾಗಕನ್ಯೆ, ನಾರದ ವಿಜಯ, ರಾಮಾ ಶಾಮಾ ಭಾಮ ಸೇರಿದಂತೆ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರತಿಮಾ ದೇವಿ ಅಭಿನಯಿಸಿದ್ದರು.

ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಶಂಕರ್ ಸಿಂಗ್‌ರನ್ನು ಪ್ರತಿಮಾ ದೇವಿ ಮದುವೆಯಾಗಿದ್ದರು. ಶಂಕರ್ ಸಿಂಗ್-ಪ್ರತಿಮಾ ದೇವಿ ದಂಪತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್ ಮತ್ತು ವಿಜಯಲಕ್ಷ್ಮೀ ಸಿಂಗ್ ಅವರನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ಮೊಮ್ಮಕ್ಕಳು ನಟಿಸಿದ್ದ 'ಯಾನ' ಚಿತ್ರದಲ್ಲಿ ಪ್ರತಿಮಾ ದೇವಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಯಾನ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು.