Big Boss OTT : ಬಿಗ್‌ಬಾಸ್‌ ಗೂಡಿನಲ್ಲಿ ಕುಚ್..ಕುಚ್...! ಹೇಗಿದೆ ನೋಡಿ ರಾಕೇಶ್ ಮತ್ತು ಸೋನು ಜೋಡಿ !!

By Infoflick Correspondent

Updated:Thursday, August 18, 2022, 12:02[IST]

Big Boss OTT  : ಬಿಗ್‌ಬಾಸ್‌ ಗೂಡಿನಲ್ಲಿ ಕುಚ್..ಕುಚ್...! ಹೇಗಿದೆ ನೋಡಿ ರಾಕೇಶ್ ಮತ್ತು ಸೋನು ಜೋಡಿ !!

ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ​ಈ ಬಾರಿ ಓಟಿಟಿಯಲ್ಲಿ ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕು ತೂಹಲ ಮೂಡಿಸಿದೆ . ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಸದ್ದಿಲ್ಲದೆ ಲವ್‌ ಸ್ಟೋರಿಗಳು ನಿಧಾನವಾಗಿ ಆರಂಭ ಆಗಿದೆ. ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರ ಬಂದು ಮದುವೆ ಆಗಿದ್ದಾರೆ. 
ಎರಡನೇ ವಾರಕ್ಕೆ ಮೂರು ಲವ್ ಸ್ಟೋರಿ ಪ್ರಾರಂಭವಾಗಿದೆ.‌ ಇದು ನಿಜವಾದ ಲವ್ ಸ್ಟೋರಿನಾ? ಇಲ್ಲಾ ಸ್ಟ್ರಾಟಜಿನಾ? 

ಸ್ಫೂರ್ತಿ ಗೌಡ ಈಗಾಗಲೇ ರಾಕೇಶ್ ಹಾಗು ತಮ್ಮ ಜಾತಕ ನೋಡುವಂತೆ ಆರ್ಯವರ್ಧನ್‌ ಗುರೂಜಿಗೆ ಕೇಳಿಕೊಂಡಿದ್ದರು. ಇತ್ತ ಸೋನು ಗೌಡ ನೇರವಾಗಿ ರಾಕೇಶ್‌ಗೆ ನಿಮ್ಮ ಮೇಲೆ ಫೀಲಿಂಗ್ ಇದೆ ಎಂದಿದ್ದರು. ರಾಕೇಶ್‌ಗೆ ಸ್ಪೂರ್ತಿ ಗೌಡ ಮೇಲೆ ಮನಸ್ಸಾಗಿದೆ. ಹಾಗು ಸೋನುಗೂ ರಾಕೇಶ್ ಮೇಲೆ‌ ಮನಸ್ಸಿದೆ‌.  

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೀತಿದೆ ಅಂತ ಗುಸು ಗುಸು ಶುರುವಾಗಿದೆ. ಇಬ್ಬರೂ ತುಂಬಾ ಅನ್ಯೋನ್ಯವಾಗಿ ಓಡಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಮನೆಯೊಳಗೆ ಇವರಿಬ್ಬರ ಬಗ್ಗೆ ಅನುಮಾನವಿದೆ. ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇಬ್ಬರೂ ಈಗಾಗಲೇ ನಾವು ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಆದರೂ, ಮನೆಯೊಳಗಿರುವವರಿಗೆ ಅನುಮಾನ ಮೂಡಿದೆ.

ಈಗ ಬಿಗ್ ಬಾಸ್ ಮನೆಯೊಳಗೆ ಮೂರನೇ ಲವ್‌ ಸ್ಟೋರಿನೂ ಶುರುವಾಗಿದೆ. ಉದಯ್ ಸೂರ್ಯ ಹಾಗೂ ಅಕ್ಷತಾ ಕುಕ್ಕಿ ನಡುವೆ ಏನೋ ನಡೀತಿದೆ ಅಂತ ಚೈತ್ರ ಹಳ್ಳಿಕೇರಿಗೆ ಅನುಮಾನ. ಉದಯ್ ಟಾಸ್ಕ್‌ನಲ್ಲಿ ಅಕ್ಷತಾ ಕುಕ್ಕಿಗೆ ಸಪೋರ್ಟ್ ಮಾಡಿದ್ದು ಇಷ್ಟಲ್ಲಾ ಅನುಮಾನಕ್ಕೆ ಕಾರಣವಾಗಿದೆ. ( VIDEO CREDIT :: BENGALURU  1 NEWS )