ಮೋಹನ್ ಜುನೇಜಾ ಅವರ ಬಗ್ಗೆ ನಿಮಗೆ ಗೊತ್ತಿರದ ಈ ವಿಷಯ ಕೇಳಿದರೆ ಅಳು ಬರುತ್ತೆ..

By Infoflick Correspondent

Updated:Tuesday, May 10, 2022, 10:25[IST]

ಮೋಹನ್ ಜುನೇಜಾ ಅವರ ಬಗ್ಗೆ ನಿಮಗೆ ಗೊತ್ತಿರದ ಈ ವಿಷಯ ಕೇಳಿದರೆ ಅಳು ಬರುತ್ತೆ..

ಹಾಸ್ಯ ಕಲಾವಿದ ಮೋಹನ್ ಜುನೇಜಾ ಅವರು ಅನಾರೋಗ್ಯ ಹಿನ್ನೆಲೆ ಮೊನ್ನೆ ಇಹಲೋಕ ತ್ಯಜಿಸಿದರು. ಕೆಜಿಎಫ್ ಸೇರಿದಂತೆ ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜುನೇಜಾ ಅವರು ನಟಿಸಿದ್ದರು. ಹಲವು ಕಿರುತೆರೆ ಧಾರಾವಾಹಿಗಳು ಹಾಗೂ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಜುನೇಝಾ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. ವಠಾರ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ, ಜುನೇಜಾ ಅವರ ಜೀವನ ತುಂಬಾ ಕಷ್ಟಕರವಾಗಿತ್ತು. ಈ ಬಗ್ಗೆ ಸಹ ನಟ ಗಣೇಶ್ ರಾವ್ ಅವರು ಏನ್ ಹೇಳಿದ್ದಾರೆ ಎಂದು ಕೇಳೋಣ ಬನ್ನಿ..

ಸ್ಥಿತಿವಂಣತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜುನೇಜಾ ಅವರು ಓದಿನಲ್ಲಿ ಮುಂದಿದ್ದರು. ಅವರ ತಂದೆಗೆ ಮಗನು ಇಂಜಿನಿಯರ್ ಆಗಬೇಕೆಂಬ ಕನಸಿತ್ತು, ಆದರೆ ಯಾವಾಗ ಜುನೇಜಾ ಅವರು ಇಂಜಿನಿಯರ್ ಆಗೊಲ್ಲ ಎಂದು ತಿಳಿಯಿತೋ ಆಗ ಹಣ ಕೊಡುವುದನ್ನೇ ನಿಲ್ಲಿಸಿ ಬಿಟ್ಟರಂತೆ. ಜುನೇಜಾ ಅವರಿಗೆ ನಟನೆ ಮೇಲೆ ಆಸಕ್ತಿ ಇದ್ದಿದ್ದರಿಂದ ಸದಾ ಸಿನಿಮಾಗಳನ್ನು ನೋಡುತ್ತಿದ್ದರಂತೆ. ಅಪ್ಪ ಹಣ ಕೊಡುವುದನ್ನು ನಿಲ್ಲಿಸಿದಾಗ ಬೇರೆ ದಾರಿಯಿಲ್ಲದೆ ಜುನೇಜಾ ಅವರು ಕೆಲಸಕ್ಕೆ ಸೇರಿದಂತೆ. ಸೆಕ್ಯೂರಿಟಿ ಗಾರ್ಡ್, ಫೋಟೋಗ್ರಾಫರ್, ಟೈಲರಿಂಗ್ ಹೀಗೆ ಸಿಕ್ಕ ಕೆಲಸವನ್ನೆಲ್ಲಾ ಮಾಡಿದ್ದಾರೆ.  

ಕೆಲಸ ಮಾಡಿಕೊಂಡೇ ರಂಗಭೂಮಿಗೆ ಎಂಟ್ರಿ ಕೊಟ್ಟರು. ನಂತರ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದರು. ವಠಾರ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಜುನೇಜಾ ಅವರಿಗೆ ಇದೇ ಧಾರಾವಾಹಿ ಹೆಸರು ತಂದುಕೊಟ್ಟಿತು. ಹೀಗೆ ಧಾರಾವಾಹಿಯಲ್ಲಿ ನಟಿಸುತ್ತಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಜುನೇಜಾ ಅವರು ನೂರಾರು ಸುನುಮಾ, ನೂರಾರು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದರು. ಆದರೆ ಇತ್ತೀಚೆಗೆ ಅನಾರೋಗ್ಯದಿಮದ ಬಳಲುತ್ತಿದ್ದರಂತೆ. ಕರುಳೀನಲ್ಲಿ ಸಮಸ್ಯೆ ಇದುದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. 

ನಟ ಗಣೇಶ್ ರಾವ್ ಅವರು ಮಾತನಾಡಿದ್ದು, ನಾನು ಹಾಗೂ ಜುನೇಜಾ ಅವರು ಹಲವು ವರ್ಷಗಳ ಕಾಲ ಒಂದೇ ಏರಿಯಾದಲ್ಲಿ ಇದ್ದೆವು. ಜುನೇಜಾ ಅವರು ತುಂಬಾ ಒಳ್ಳೆಯ ವ್ಯಕ್ತಿ. ನಾನು ಅವರು ಹಲವು ವರ್ಷಗಳ ಕಾಲ ಒಟ್ಟಿಗೆ ಓಡಾಡಿದ್ದೇವೆ. ಇತ್ತೀಚೆಗೆ ಅಷ್ಟು ಸಂಪರ್ಕವಿರಲಿಲ್ಲ. ಕೆಲ ದಿನಗಳ ಹಿಂದೆ ಕರೆ ಮಾಡಿ ಕಷ್ಟದಲ್ಲಿದ್ದೀನಿ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದೀನಿ. ಹಣವಿಲ್ಲ ಎಂದು ಹೇಳಿದ್ದರು. ಆಗ ಎಲ್ಲಾ ಸೇರಿಕೊಂಡು ಸಹಾಯವನ್ನೂ ಮಾಡಿದ್ದೆವು. ಜುನೇಜಾ ಅವರ ಸಾವಿನಿಂದ ಚಿತ್ರರಂಗಕ್ಕೆ ನಷ್ಟವಾಗಿದೆ ಎಂದು ಹೇಳಿದರು.