ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಸೇರಿ ಮಾಡಲಿದ್ದಾರೆ ಈ ಸಿನಿಮಾ

By Infoflick Correspondent

Updated:Sunday, April 24, 2022, 14:45[IST]

ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಸೇರಿ ಮಾಡಲಿದ್ದಾರೆ ಈ ಸಿನಿಮಾ

ಆರ್​ಜಿವಿ  ಎಂದೇ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ಭಾರತೀಯ ಸಿನಿಮಾರಂಗದ ದೈತ್ಯ ಪ್ರತಿಭೆ ಎಂದರೆ ತಪ್ಪಲ್ಲ. ಸಿನಿಮಾ ನಿರ್ದೇಶಕ, ಬರಹಗಾರ ಹಾಗೂ ಸಂಭಾಷಣೆಕಾರನಾಗಿ ಅದ್ಭುತ ಸಿನಿಮಾಗಳ ಜೊತೆಗೆ ಅಷ್ಟೇ ವಿವಾದಾತ್ಮಕ-ವಿಲಕ್ಷಣ ಸಿನಿಮಾಗಳನ್ನೂ ಚಿತ್ರರಂಗಕ್ಕೆ ಕೊಟ್ಟವರು ಇದೀಗ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಗ್ಯಾಂಗ್ ಸ್ಟಾರ್ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಳಿಕ ಈಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸಿನಿಮಾ‌ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇದ್ರ ಮತ್ತು ರಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊಡಿಯಾದ ಸಿನಿಮಾ ವೀಕ್ಷಕರ ನಿರೀಕ್ಷೆ ಹೆಚ್ಚಿಸಿದೆ.  

ಹಿರಿಯ ನಿರ್ಮಾಪಕ ಯಜಮಾನ್ ಮೋತಿ ಸುಪುತ್ರ, ರಾಜ್ ಯಜಮಾನ್, ಎ ಸ್ಕೈಯರ್ ಪ್ರೊಡಕ್ಷನ್ ಅಡಿಯಲ್ಲಿ ರಾಮ್ ಗೋಪಾಲ್ ವರ್ಮ ನಿರ್ದೇಶನದ ಹಾಗೂ ಉಪೇಂದ್ರ ಅಭಿನಯದ ಈ ಸಿನಿಮಾ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. 

ಈ ಸಿನಿಮಾದ ಆಫೀಶಿಯಲ್ ಟೈಟಲ್ ಲಾಂಚ್ ಕಾರ್ಯಕ್ರಮ ಖಾಸಗಿ ಹೋಟೆಲ್​ನಲ್ಲಿ ನಿನ್ನೆ ನಡೆದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈ ಟೈಟಲ್ ಅನಾವರಣ ಮಾಡಿದ್ದಾರೆ. 

ಈ ಭರ್ಜರಿ ಸಿನಿಮಾದ ಹೆಸರು ಬಹಳ ವಿಶೇಷವಾಗಿದೆ. ಐ ಯಾಮ್ ಆರ್.  ಆರ್ ಎಂದರೇನು ಎಂದು ಕೇಳಿದ ಪ್ರಶ್ನೆಗೆ ನಿರ್ದೇಶಕರು ಇವಾಗ್ಲೇ ಈ ಸಿನಿಮಾದ‌ ಟೈಟಲ್ ಸುಳಿವು ನೀಡಿದ್ರೆ, ಸಿನಿಮಾದ ಮಿಸ್ಟರಿ ಬಿಟ್ಟು‌ ಕೊಟ್ಟಾಗ ಹಾಗೇ ಆಗುತ್ತೆ ಎಂದರು. ಸುದೀಪ್ ಈ ಉತ್ತರಕ್ಕೆ ಸಮ್ಮತಿಸಿದರು. 

ಈ ಸಿನಿಮಾದಲ್ಲಿ ಯಾರೆಲ್ಲ ತಾರ ಬಳಗ ಇರುತ್ತೆ‌ ಅನ್ನೋದು ಕಾದು ನೋಡಬೇಕು. ಐ ಯಾಮ್ ಆರ್.. ಆರ್ ಎಂದರೆ ಏನು ? ಯಾರು ? ಎಂದು ಟ್ರೇಲರ್ ಬಿಡುಗಡೆಯಾದಾಗ ತಿಳಿಯಲಿದೆ. ಟ್ರೇಲರ್ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ‌.