Upendra : ಕೋಳಿ ಗೂಡಿನಲ್ಲಿ ಜೀವನ ಸಾಗಿಸಿದ ಉಪ್ಪಿ ಅವರ ಬದುಕಿನ ಕಥೆ ರೋಚಕ

By Infoflick Correspondent

Updated:Saturday, August 13, 2022, 16:24[IST]

Upendra : ಕೋಳಿ ಗೂಡಿನಲ್ಲಿ ಜೀವನ ಸಾಗಿಸಿದ ಉಪ್ಪಿ ಅವರ ಬದುಕಿನ ಕಥೆ ರೋಚಕ

ಬಡ ಕುಟುಂಬದಲ್ಲಿ ಜನಿಸಿ ಕಷ್ಟದ ದಿನಗಳನ್ನು ಎದುರಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರು ಇಂದು ನಮ್ಮ ನಿಮ್ಮ ನಡುವೆ ಎತ್ತರದ ಸ್ಥಾನದಲ್ಲಿ ಕಾಣಿಸುತ್ತಾರೆ. ಉಪೇಂದ್ರ ಅವರ ಪೋಷಕರು ತುತ್ತು ಅನ್ನಕ್ಕೂ ಕಷ್ಟಪಟ್ಟಿದ್ದಾರೆ. ಇವರ ಮನೆಯಲ್ಲಿ ಒಂದೊತ್ತು ಅಡುಗೆ ಮಾಡಲು ಸಾಧ್ಯವಿರಲಿಲ್ಲವಂತೆ. ನಿತ್ಯ ಇವರ ಪೋಷಕರು ದೇವಸ್ಥಾನಕ್ಕೆ ಹೋಗಿ ಪ್ರಸಾದವನ್ನು ತಂದು ಮಕ್ಕಳಿಗೆ ತಿನ್ನಿಸುತ್ತಿದ್ದರಂತೆ. ಉಪ್ಪಿ ಅವರ ತಂದೆ ಮಂಜುನಾಥ್ ಹಾಗೂ ಅವರ ತಾಯಿ ಅನಸೂಯ ಅವರು ಮಕ್ಕಳನ್ನು ಸಾಕಲು ತುಂಬಾ ಕಷ್ಟವನ್ನು ಎದುರಿಸಿದ್ದಾರೆ. ಪ್ರಸಾದವನ್ನು ತಿಂದು ಉಪೇಂದ್ರ ಹಾಗೂ ಅವರ ಅಣ್ಣ ಶಾಲೆಗೆ ಹೋಗುತ್ತಿದ್ದರು.

ಮಂಜುನಾಥ್ ಅವರು ಬಟ್ಟರ ಕೆಲಸ ಮಾಡುತ್ತಿದ್ದರು. ಉಪೇಂದ್ರ ಅವರು ಚಿಕ್ಕವರಿದ್ದಾಗ ಬೇರೆಯವರು ಕೊಟ್ಟ ಬಟ್ಟೆಯನ್ನು ಧರಿಸಿ ಬೆಳೆದವರು. ಗಂಧದ ಕಟ್ಟಿ ಪ್ಯಾಕ್ ಮಾಡಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿ ಇಲ್ಲಿ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರಂತೆ. ಒಮ್ಮೆ ಅವರ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿದಾಗ ಕೋಳಿಗಳಿದ್ದ ಗೂಡಿನಲ್ಲಿ ಒಂದು ವಾರ ಬದುಕಿದ್ದರಂತೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ವೀಡೀಯೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ಆ ಕಷ್ಟದ ದಿನಗಳಲ್ಲೂ ಕುಗ್ಗದ ಉಪ್ಪಿ ಅವರು ಏನಾದರೂ ಸಾಧಿಸಬೇಕು ಎಂಬ ಛಲದಿಂದಲೇ ಬದುಕಿದರಂತೆ.    

ಅಂದು ಒಂದು ಹೊತ್ತು ಊಟಕ್ಕೂ ಪರದಾಡಿದ ಉಪೇಂದ್ರ ಅವರು ಇಂದು ಕರ್ನಾಟಕದ ಜನರಿಗೆ  ಸವಿ ರುಚಿಯನ್ನು ಉಣಬಡಿಸುತ್ತಿದ್ದಾರೆ. ತಮ್ಮ ಬುದ್ಧಿವಂತಿಕೆಯಿಂದ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು. ಇಂದು ದೊಡ್ಡ ಹೆಸರನ್ನು ಮಾಡಿದ್ದಾರೆ. ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ( video credit : tv 5 kannada )