ಕಿಚ್ಚನ ಮುಂದೆಯೇ ಯಶ್ ಗೆ ಇದೇನಿದು ಸವಾಲ್..? ನಟ ಉಪೇಂದ್ರ ಹೇಳಿದ್ದು ಆಗುತ್ತ..?

By Infoflick Correspondent

Updated:Thursday, July 28, 2022, 19:53[IST]

ಕಿಚ್ಚನ ಮುಂದೆಯೇ ಯಶ್ ಗೆ ಇದೇನಿದು ಸವಾಲ್..? ನಟ ಉಪೇಂದ್ರ ಹೇಳಿದ್ದು ಆಗುತ್ತ..?

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕಿಚ್ಚ ಸುದೀಪ್ ಅವರ ಅಭಿನಯದಲ್ಲಿ ಮೂಡಿ ಬಂದಂತಹ ಬಹುನಿರೀಕ್ಷಿತ ಚಿತ್ರ ತ್ರೀಡಿಯಲ್ಲಿ ಭರ್ಜರಿಯಾಗಿ ತೆರೆಯ ಮೇಲೆ ಇಂದು ಬಂದಿದೆ. ಅದೇ ವಿಕ್ರಾಂತ್ ರೋಣ ಸಿನಿಮಾ. ಹೌದು ಇಂದು ಭರ್ಜರಿಯಾಗಿ ತೆರೆಗೆ ಎಂಟ್ರಿ ಪಡೆದಿದೆ. ಕಿಚ್ಚನ ಅಭಿಮಾನಿಗಳು ಸಿನಿಮಾವನ್ನು ವೀಕ್ಷಿಸಿ ಶಿಳ್ಳೆ ಕೇಕೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಕನ್ನಡದ ಹೆಮ್ಮೆಯ ಸಿನಿಮಾ. ಚಿತ್ರ ನೋಡಿ ಪ್ರತಿಯೊಬ್ಬರು ಕೂಡ ಸಿನಿಮಾ ತುಂಬಾ ಅದ್ಭುತವಾಗಿಯೇ ಮೂಡಿ ಬಂದಿದೆ ಹೇಳುತ್ತಿದದಾರೆ. ಹಾಗೆ ಇಂತಹ ಸಿನಿಮಾ ಮತ್ತೆ ಮತ್ತೆ ಬರಬೇಕು ಒಂದೊಳ್ಳೆ ವಿಭಿನ್ನವಾದ ಅನುಭವ ನಮಗಾಯಿತು ಎಂದು ಹೇಳುತ್ತಿದ್ದಾರೆ. ಅವರ ಅಭಿಮಾನಿ ಬಳಗದವರು ಸಿನಿಮಾ ನೋಡಿದ ಬಳಿಕ ಅವರ ಅನಿಸಿಕೆಗಳನ್ನು ಸಹ ಹಂಚಿಕೊಂಡಿದ್ದಾರೆ.  

ಹೌದು ಇತ್ತೀಚಿಗೆ ಬೆಂಗಳೂರಿನಲ್ಲೂ ಲುಲು ಮಾಲ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಿ ರರಿಲೀಸ್ ಇವೆಂಟ್ ಷೋ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದ ಪರಿ, ಹಾಗೂ ಈ ಸಿನಿಮಾಗಾಗಿ ಅವರು ಪಟ್ಟ ಕಷ್ಟ, ಅದಕ್ಕೆ ಸ್ಪಂದಿಸಿದ ಎಲ್ಲಾ ಟೇಕ್ನಿಶಿಯನ್ಸ್ ಹಾಗೂ ನಿರ್ದೇಶಕ, ಮತ್ತೆ ನಿರ್ಮಾಪಕರಿಗೂ ಸಹ ಕಿಚ್ಚ ಅವರು ಧನ್ಯವಾದ ತಿಳಿಸಿದ್ದರು. ಹೌದು ವಿಕ್ರಾಂತ್ ರೋಣ ಚಿತ್ರ ತಂಡದ ಪ್ರತಿಯೊಬ್ಬ ಕಲಾವಿದರು ಸಹ ಇವೆಂಟ್ ಗೆ ಆಗಮಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ನಟ ಕಿಚ್ಚ ಸುದೀಪ್ ಅವರ ಈ ಸಿನಿಮಾ ಬೇರೆಯದ್ದೆ ಅನುಭವ ನೀಡುತ್ತದೆ ಎಂದು ಕೆಲವರು ಮಾತನಾಡಿದ್ದು ನಿಜ. ಭಾರತ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ ನಟ ಆಗಿರುವ ನಮ್ಮ ಹೆಮ್ಮೆಯ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ವೇದಿಕೆ ಮೇಲೆ ಈ ಸಿನಿಮಾ ಕುರಿತು ಹೇಳಿದ್ದೆ ಬೇರೆ. ಮುಂದೆ ಓದಿ

ಸುದೀಪ್ ಅವರು ಮತ್ತು ಚಿತ್ರತಂಡ ನಮಗೆ ಚಿತ್ರದ ಕೆಲ ದೃಶ್ಯಗಳನ್ನು ತೋರಿಸಿದ್ದಾರೆ. ನಾನು ಕೂಡ ಮೊದಲ ದಿನವೇ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡುತ್ತೇನೆ. ಈ ಚಿತ್ರ  ಬೇರೆಯದೆ ಲೋಕಕ್ಕೆ ಕರೆದುಕೊಂಡು ನಿಮ್ಮನ್ನ ಹೋಗುತ್ತದೆ ನಿಜಕ್ಕೂ ಇದು ಕೂಡ ಗೆದ್ದಂತೆಯೇ ಎಂದು ಉಪೇಂದ್ರ ಅವರ ಮಾತನಾಡಿದರು. ಹಾಗೆ ಪ್ಯಾನ್ ಇಂಡಿಯಾ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಬಗ್ಗೆ ಮಾತನಾಡಿದ ಉಪೇಂದ್ರ ಅವರು, ಈ ಸಿನಿಮಾ ಮೂಲಕ ಅವರು ಇಡೀ ಇಂಡಿಯಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದಾರೆ. ಆದ್ರೆ ಈ ವಿಕ್ರಾಂತ್ ರೋಣ ಸಿನಿಮಾ ಇಡೀ ವರ್ಲ್ಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತದೆ ಎಂದು ಯಶ್ ಅವರ ಸಿನಿಮಾ ವಾದ ಕೆಜಿಎಫ್ ಗೆ ಸವಾಲ್ ಹಾಕಿದಂತೆ ಉಪೇಂದ್ರ ಅವರು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ನೀವು ಕೂಡ ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ನೋಡಿದ್ದರೆ, ಈ ಸಿನಿಮಾ ಹೇಗೆ ಮೂಡಿ ಬಂದಿದೆ ನಮಗೆ ಕಾಮೆಂಟ್ ಮಾಡಿ. ಎಲ್ಲಾ ದಾಖಲೆಗಳನ್ನು ಪುಡಿ ಮಾಡುತ್ತದೆಯಾ ಅಥವಾ ಇಲ್ಲವಾ ಎಂದು ಕಾಮೆಂಟ್ ಮಾಡಿ ತಿಳಿಸಿ. ಮತ್ತು ಕನ್ನಡದ ಮತ್ತೊಂದು ಹೆಮ್ಮೆಯ ಚಿತ್ರವಾದ ಈ ವಿಕ್ರಾಂತ್ ರೋಣ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ನೀವೂ ಸಹ  ಹರಸಿ ಧನ್ಯವಾದಗಳು...