Upendra : UI ಚಿತ್ರದ ಪೋಸ್ಟರ್ ರೀಲಿಸ್ ಕಾರ್ಯಕ್ರಮದಲ್ಲಿ ಅಪ್ಪು ಫೋಟೊ ತೋರಿಸಿದ್ದೇಕೆ ಉಪ್ಪಿ ?

By Infoflick Correspondent

Updated:Saturday, June 4, 2022, 15:58[IST]

Upendra :  UI ಚಿತ್ರದ ಪೋಸ್ಟರ್ ರೀಲಿಸ್ ಕಾರ್ಯಕ್ರಮದಲ್ಲಿ ಅಪ್ಪು ಫೋಟೊ ತೋರಿಸಿದ್ದೇಕೆ ಉಪ್ಪಿ ?

ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನದ ಹೊಸ ಸಿನಿಮಾ UI. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ.  ಮುಹೂರ್ತ ಸಮಾರಂಭಕ್ಕೆ ಸ್ವತಃ ಉಪ್ಪಿಯೇ ತಮ್ಮ ಚಿತ್ರದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಬಂದು ಗಮನ ಸೆಳೆದಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಉಪ್ಪಿ ಸ್ಮಾರ್ಟ್‍ಫೋನ್‍ವೊಂದರಲ್ಲಿ 'ಅಪ್ಪು' ಹಣೆಯ ಮೇಲೂ UI ಇರುವುದನ್ನು ತೋರಿಸಿದ್ದಾರೆ.  

ತಮ್ಮ ಹಣೆಯ ಮೇಲೆ ಹೊಸ ಸಿನಿಮಾದ ಟೈಟಲ್ ತೋರಿಸುವುದರ ಜೊತೆಗೆ ಪುನೀತ್ ಅವರ ಬಾಲ್ಯದ ಫೋಟೋದಲ್ಲಿಯೂ ನಾಮವಿರುವುದನ್ನು ತೋರಿಸಿ ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ 'ಅಪ್ಪು' ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ ಅಂತಾ ಪುನೀತ್ ಬಗ್ಗೆ ಒಂದಷ್ಟು ನೆನಪುಗಳನ್ನು ಉಪ್ಪು ಮೆಲಕು ಹಾಕಿದ್ದಾರೆ.   

ಕಿಚ್ಚ ಸುದೀಪ್, ಶಿವರಾಜ್​ಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸುದೀಪ್ ಅವರು ಉಪೇಂದ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. 'ನಾನು ಉಪ್ಪಿ ಅವರ ಅಭಿಮಾನಿ ಆಗಿ ಇಲ್ಲಿಗೆ ಬಂದಿದ್ದೇನೆ' ಎಂದು ಹೆಮ್ಮೆಯಿಂದ ಹೇಳಿಕೊಂಡರು. ( video credit : public tv )