Vaishnavi : ಕೊನೆಗೂ ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿಸಿದ ನಟಿ ವೈಷ್ಣವಿ..! ಹೀಗೆ ತಯಾರಾಗಲು ಕಾರಣ ಇಲ್ಲಿದೆ

By Infoflick Correspondent

Updated:Wednesday, June 15, 2022, 19:02[IST]

Vaishnavi : ಕೊನೆಗೂ ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿಸಿದ ನಟಿ ವೈಷ್ಣವಿ..! ಹೀಗೆ ತಯಾರಾಗಲು ಕಾರಣ ಇಲ್ಲಿದೆ

ಕನ್ನಡ ಕಿರುತೆರೆಯ ಖ್ಯಾತ ನಟಿಯರ ಪಟ್ಟಿಯಲ್ಲಿ ಬರುವ ವೈಷ್ಣವಿಗೌಡ ಅವರು ಇತ್ತೀಚಿಗೆ ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿಯೇ ಸಕ್ರಿಯರಾಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಆದ ನೈಜ ಆಟವನ್ನು ಆಡಿದ ವೈಷ್ಣವಿ ಗೌಡ ಅವರು ಮೊದಲೇ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡವರು. ಕನ್ನಡದ ಬಿಗ್ಬಾಸ್ ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿ ನೋಡುಗರಿಗೆ ಖುಷಿಯನ್ನು ಹೆಚ್ಚು ಸಂತಸದ ಕ್ಷಣಗಳನ್ನು ನೀಡುತ್ತಿದ್ದ ವೈಷ್ಣವಿ ಅವರು ಇತ್ತೀಚಿಗೆ ಒಂದು ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಹೌದು ಯೂಟ್ಯೂಬ್ ಮೂಲಕ ಹೆಚ್ಚು ಅಭಿಮಾನಿಗಳಿಗೆ ಹತ್ತಿರ ಆಗುತ್ತಿರುವ ವೈಷ್ಣವಿ ಅವರು ಆಗಾಗ ವಿಡಿಯೋ ಹಂಚಿಕೊಳ್ಳುತ್ತಾರೆ.    

ಆ ವಿಡಿಯೋ ಎಲ್ಲವೂ ಬಾರಿ ವೈರಲ್ ಆಗುತ್ತಿವೆ ಎಂದು ಹೇಳಬಹುದು. ಹೌದು ನಟಿ ವೈಷ್ಣವಿ ಅವರು ಬಿಗ್ ಬಾಸ್ನ ಇನ್ನೊಬ್ಬ ಸ್ಪರ್ಧಿ ನಿವೇದಿತಾ ಗೌಡ ಅವರೊಟ್ಟಿಗೆನೆ ಒಂದು ಚಟುವಟಿಕೆಯಲ್ಲಿ ತೊಡಗಿ ಯೂಟ್ಯೂಬ್ ವಿಡಿಯೋದಲ್ಲಿ ಮೊದಲಿಗೆ ಕಾಣಿಸಿಕೊಂಡರು. ಒಂದರಮೇಲೊಂದರಂತೆ ಹೆಚ್ಚು ವಿಡಿಯೋಗಳನ್ನು ಈಗೀಗ ಅಭಿಮಾನಿಗಳಿಗಾಗಿ ಮತ್ತು ದೈನಂದಿನ ಚಟುವಟಿಕೆಗಳ ಕೆಲವೊಂದಿಷ್ಟು ವಿಭಿನ್ನ ಪ್ರಯತ್ನಗಳ ಮತ್ತು ಅವರ ಜೀವನಶೈಲಿಯೂ ಹೇಗಿರುತ್ತದೆ ಎಂಬುದಾಗಿ ತೋರಿಸುವುದಕ್ಕೆ ವಿಡಿಯೋಗಳನ್ನು ಹರಿ ಬಿಡುತ್ತಿದ್ದಾರೆ. ಇದೀಗ ಅಂತಹದೇ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ವೈಷ್ಣವಿ ಅವರು ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ ಎನ್ನಲಾಗಿದೆ.

ಹೌದು ವೈಷ್ಣವಿ ಅವರು ಸುಮಾರು 16 ತಿಂಗಳ ಬಳಿಕ ಇದೀಗ ಅವರ ತಲೆಯ ಕೂದಲಿಗೆ ಕತ್ತರಿ ಹಾಕಿಸಿದ್ದು ಹೇರ್ ಕಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಇದಕ್ಕೆ ಕಾರಣ ಏನು ಎಂದು ಅವರೇ ವಿಡಿಯೋದಲ್ಲಿ ತಿಳಿಸಿದ್ದಾರೆ. ಮತ್ತೆ ಈ ಮುಂಚೆ ಅವರು ಹೇರ್ ಕಟ್ ಮಾಡಿಸಲು ಹೋಗಿ ಅಂದು ಮಾಡಿಕೊಂಡ ಅವಂತರ ಏನು ಎಂಬುದಾಗಿಯೂ ಸಹ ಅವರೇ ಹೇಳಿದ್ದಾರೆ. ಹೌದು ಇಲ್ಲಿದೆ ನೋಡಿ ಅದೇ ವಿಡಿಯೋ. ಈ ವಿಡಿಯೋ ನಿಮಗೂ ಹೆಚ್ಚು ಇಷ್ಟವಾದಲ್ಲಿ ಶೇರ್ ಮಾಡಿ. ವೈಷ್ಣವಿ ಅವರ ಈ ಮಾಹಿತಿಯ ವಿಡೀಯೋ  ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು...