Vaishnavi Gowda : ವೈಷ್ಣವಿ ಗೌಡ ಸೀರೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋಕ್ಕೆ ಫ್ಯಾನ್ಸ್ ಮೆಚ್ಚುಗೆ

By Infoflick Correspondent

Updated:Sunday, June 19, 2022, 08:58[IST]

Vaishnavi Gowda :  ವೈಷ್ಣವಿ ಗೌಡ ಸೀರೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋಕ್ಕೆ ಫ್ಯಾನ್ಸ್ ಮೆಚ್ಚುಗೆ

ನಟಿ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯರಾದರು. ವೈಷ್ಣವಿ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ತೋರಿಸಿದ್ದರು. ಕಳೆದ ಕೆಲ ತಿಂಗಳಿಂದ ಅವರದ್ದೇ ಒಂದು ಯುಟ್ಯೂಬ್ ಚಾನೆಲ್ ಅನ್ನು ಕೂಡ ಓಪನ್ ಮಾಡಿಕೊಂಡಿದ್ದು, ನಿವೇದಿತಾ ಗೌಡ ಸೇರಿದಂತೆ ಕೆಲವರ ಸಂದರ್ಶನವನ್ನೂ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾಗಳಲ್ಲೂ ವೈಷ್ಣವಿ ಗೌಡ ಬ್ಯುಸಿಯಾಗಿದ್ದಾರೆ. ಇನ್ನು ಈಗ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ವೈಷ್ಣವಿ ಜೀ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  'ಅಗ್ನಿಸಾಕ್ಷಿ' ಧಾರಾವಾಹಿಗೂ ಮುನ್ನ ವೈಷ್ಣವಿ ಗೌಡ ಹಲವು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರೂ ಕೂಡ ಸನ್ನಿಧಿ ಪಾತ್ರ ತಂದುಕೊಟ್ಟಷ್ಟು ಹೆಸರು ಇನ್ಯಾವುದು ತಂದುಕೊಟ್ಟಿಲ್ಲ. ಆ ಧಾರಾವಾಹಿಯಲ್ಲಿ ಅವರು ಮಾಡಿದ ಸನ್ನಿಧಿ ಪಾತ್ರ ಕರುನಾಡಿನ ಜನರ ಮನೆ ಮಾತಾಗಿತ್ತು. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸನ್ನಿಧಿ ಎಂದೇ ಪರಿಚಿತರಾಗಿದರು. ಸದ್ಯ ಉಳಿದ ಸಮಯದಲ್ಲಿ ಅವರು ಯೋಗಾಸನ, ಧ್ಯಾನದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ವೈಷ್ಣವಿ ಗೌಡ ಅವರು ಬಹುಕೃತ ವೇಷಂ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಈಗ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಧಾರಾವಾಹಿ ಒಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಡಾಕ್ಟರ್ ಕರ್ಣ ಎಂಬ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದು, ಯಾವಾಗ ಪ್ರಸಾರವಾಗುತ್ತದೆ ಎಂಬುದು ಗೊತ್ತಿಲ್ಲ. ಇದೀಗ ವೈಷ್ಣವಿ ಗೌಡ ಅವರು ಹಾಡೊಂದಕ್ಕೆ ಸೀರೆಯಲ್ಲಿ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. 68,393 ಲೈಕ್ಸ್ ಗಳು ಬಂದಿದ್ದು, ಸೀರೆಯಲ್ಲಿ ಡ್ಯಾನ್ಸ್ ಮಾಡಿರುವ ನೀವೇ ಗ್ರೇಟ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಿನ್ನು ವೈಷ್ಣವಿ ಗೌಡ ಅವರು ಸದಾ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.