Vaishnavi Gowda : ವಿಕ್ರಾಂತ್ ರೋಣ ಹಾಡಿಗೆ ಹೆಜ್ಜೆ ಹಾಕಿದ ಅಗ್ನಿಸಾಕ್ಷಿ ವೈಷ್ಣವಿ..! ವಿಡಿಯೋಗೆ ಫಿದಾ ಆದ ಫ್ಯಾನ್ಸ್
Updated:Wednesday, May 25, 2022, 15:56[IST]

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಆಕ್ಟಿವ್ ಆಗಿರದೇ ಈಗೀಗ ಚಿತ್ರದ ನಟ-ನಟಿಯರು ಕೂಡ ತುಂಬಾ ಆಕ್ಟಿವ್ ಆಗಿದ್ದಾರೆ. ಯಾವ ಹಾಡು ತುಂಬಾ ವೈರಲ್ ಆಗುತ್ತದೆಯೋ ಅದನ್ನೇ ಹೆಚ್ಚು ಗಮನಿಸುತ್ತಿರುವ ಯುವಕಲಾವಿದರು ರಿಲ್ಸ್ ಮಾಡುತ್ತಲೇ ಇರುತ್ತಾರೆ. ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಮೂಲಕ ಕನ್ನಡಿಗರ ಮನೆಮಾತಾದ ನಟಿ. ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟಿ. ಇತ್ತೀಚಿಗೆ ಯುಟ್ಯೂಬ್ ಚಾನೆಲ್ ತೆರೆದಿರುವ ವೈಷ್ಣವಿ ಗೌಡ ಅವರು ಅಭಿಮಾನಿಗಳ ಜೊತೆ ತುಂಬಾನೇ ಹತ್ತಿರವಾಗಿದ್ದಾರೆ ಎನ್ನಬಹುದು. ಆಗಾಗ ಫೋಟೋ ಮತ್ತು ವೀಡಿಯೋ ಹಂಚಿಕೊಳ್ಳುವ ವೈಷ್ಣವಿ ಗೌಡ ಅವರು ಇದೀಗ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿ ಸದ್ದು ಮಾಡಿದ್ದಾರೆ ಎನ್ನಲಾಗುತ್ತಿದೆ.
ಹೌದು ಇತ್ತೀಚಿಗೆ ನಟ ಕಿಚ್ಚ ಸುದೀಪ್ ಅವರ ಸಿನಿಮಾದ ಹಾಡೊಂದು ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾದವಾದ ವಿಕ್ರಾಂತ್ ರೋಣ ಸಿನಿಮಾದ ಹಾಡು ಬಿಡುಗಡೆಯಾಗಿ ಒಳ್ಳೆ ಪ್ರತಿಕ್ರಿಯೆಯ ಪಡೆದುಕೊಂಡಿತ್ತು. ವಿಕ್ರಾಂತ್ ರೋಣ ಐಟಂ ಸಾಂಗ್ ಎಕ್ಕಸಕ್ಕ ಹಾಡಿನಲ್ಲಿ ನಟಿ ಫರ್ನಾಂಡಿಸ್ ಅವರು ಹೆಜ್ಜೆಹಾಕಿ ಕನ್ನಡಿಗರ ಹೃದಯ ಕದ್ದಿದ್ದರು ಎನ್ನಬಹುದು. ಹಾಗೆ ಸುದೀಪ್ ಅವರ ಡಾನ್ಸ್ ಕೂಡ ಮೈ ಕುಣಿಸುವಂತೆ ಕಂಡುಬಂದಿತ್ತು. ಹಾಡು ಕೇಳುತ್ತಾ ಗುನುಗುವ ಹಾಡಿಗೆ ಇದೀಗ ನಟಿ ವೈಷ್ಣವಿ ಅವರು ರೀಲ್ಸ್ ಮಾಡಿ ವೈರಲ್ ಆಗುತ್ತಿದ್ದಾರೆ. ನಟಿ ವೈಷ್ಣವಿ ಅವರ ಹಾಡಿಗೆ ಹೆಜ್ಜೆ ಹಾಕಿದ ಪರಿಗೆ ನೆಟ್ಟಿಗರು ಫಿದಾ ಆಗಿದ್ದು, ಅವರ ಅಭಿಮಾನಿಗಳು ಕಣ್ಣು ಮುಚ್ಚದೆ ವೈಷ್ಣವಿ ಅವರ ಸಕ್ಕತ್ ಸ್ಟೆಪ್ಪು ನೋಡುತ್ತಿದ್ದಾರೆ.
ನಟಿ ವೈಷ್ಣವಿ ಅವರು ಕಪ್ಪು ಬಟ್ಟೆ ಧರಿಸಿ ಸಕ್ಕತ್ ಫಿಟ್ಟಾಗಿ ಡಾನ್ಸ್ ಮಾಡಿದ್ದಾರೆ ಇದರಲ್ಲಿ. ಎಕ್ಕಸಕ್ಕ ಹಾಡಿಗೆ ಹೆಜ್ಜೆ ಹಾಕಿರುವ ವೈಷ್ಣವಿಯವರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನೀವು ಕೂಡ ವೈಷ್ಣವಿ ಅವರ ಈ ಹೊಸ ವಿಡಿಯೋವನ್ನು ನೋಡದೆ ಇದ್ದಲ್ಲಿ, ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ನಿಮಗೂ ಕೂಡ ಇಷ್ಟವಾಗುತ್ತದೆ. ವೈಷ್ಣವಿ ಅವರು ಎಲ್ಲದಕ್ಕೂ ಸೈ ಎಂಬುದಾಗಿ ಮತ್ತೊಮ್ಮೆ ಸಾಬೀತುಪಡಿಸಿದ ಈ ವಿಡಿಯೋ ನೋಡಿ. ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...