Vaishnavi Gowda : ನೃತ್ಯ ಮಾಡುತ್ತಲೇ ವ್ಯಾಯಾಮ ಮಾಡಿದ ಸನ್ನಿಧಿ..! ಲಲಲ ಹಾಡಿಗೆ ಹೆಜ್ಜೆ ಹಾಕಿದ ಪರಿಗೆ ಫಿದಾ ಆದ ನೆಟ್ಟಿಗರು
Updated:Friday, May 20, 2022, 14:24[IST]

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇ ಆದ ವಿಭಿನ್ನ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಕೆಲವೊಂದಿಷ್ಟು ಕಲಾ ಬಂಧುಗಳು ಸೀರಿಯಲ್ ಮೂಲಕ ಅದೆಷ್ಟು ಫೇಮಸ್ ಆಗಿದ್ದಾರೆ ಎಂದರೆ ದೊಡ್ಡ ದೊಡ್ಡ ಸ್ಟಾರ್ ನಟರಿಗೂ ಕೂಡ ಕಿರುತೆರೆ ಕಲಾವಿದರಿಗೆ ಇರುವಷ್ಟು ಅಭಿಮಾನಿಗಳ ಸಂಖ್ಯೆ ಇರುವುದಿಲ್ಲ, ಅಷ್ಟರಮಟ್ಟಿಗೆ ಕಿರುತೆರೆಯಲ್ಲಿ ಕಲಾವಿದರು ಫೇಮಸ್ ಆಗಿದ್ದಾರೆ. ಕೆಲವೊಂದಿಷ್ಟು ಜನಮನ್ನಣೆಗಳಿಸಿದ ಸೀರಿಯಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರು ಇದ್ದಾರೆ. ಆಗಾಗ ಅವರ ಇಷ್ಟದ ಫೋಟೋಶೂಟ್ ಮಾಡಿಸುತ್ತಾ, ಡಾನ್ಸ್ ವಿಡಿಯೋ ನಟನೆಯ ತುಣುಕು ಮಾಡುತ್ತಾ, ಹೀಗೆ ಒಂದಲ್ಲ ಒಂದು ವಿಚಾರಗಳಿಗೆ ವಿಡಿಯೋ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸದಾ ಆಕ್ಟಿವ್ ಇರುತ್ತಾರೆ.
ಹಾಗೆ ವಿಡಿಯೋ ಶೇರ್ ಮಾಡಿಕೊಳ್ಳುವುದರ ಮೂಲಕ ಅಭಿಮಾನಿಗಳ ಪ್ರಶಂಸೆಗೆ ಕಾಯುತ್ತಾರೆ. ಅಭಿಮಾನಿಗಳ ಜೊತೆ ಆಗಾಗ ಲೈವ್ ಬಂದು ಹೆಚ್ಚು ಸಮಯ ಕಳೆದು ಮಾತನಾಡುವುದು ಉಂಟು. ಹೌದು ನಟಿ ವೈಷ್ಣವಿ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸನ್ನಿಧಿ ಪಾತ್ರ ಮಾಡಿ ಅಗ್ನಿಸಾಕ್ಷಿ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯ ಆಗಿರುವ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಮೂಲಕವೇ ಸಾಕಷ್ಟು ಅಭಿಮಾನಿ ಬಳಗ ಗಿಟ್ಟಿಸಿಕೊಂಡರು. ಇತ್ತೀಚಿಗೆ ಬಿಗ್ಬಾಸ್ ಮನೆಗೆ ಹೋಗಿ ಬಂದ ನಂತರ ವೈಷ್ಣವಿ ಇದೀಗ ಹೆಚ್ಚು ಆಕ್ಟಿವ್ ಆಗಿದ್ದಾರೆ. ಈಗ ಒಂದು ವಿಡಿಯೋ ಶೇರ್ ಮಾಡಿಕೊಂಡಿರುವ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಲಲಲಲಲ ಅಡುಗೆ ವಿಭಿನ್ನವಾಗಿ ಡಾನ್ಸ್ ಮಾಡಿದ್ದೂ ಅಲ್ಲದೆ, ಹೇಗೆ ಡಾನ್ಸ್ ಮಾಡುತ್ತ ಯೋಗದ ವ್ಯಾಯಾಮ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ವಿಡಿಯೋ ನೋಡಿದ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನೂ ಕೆಲವರು ಇಷ್ಟು ಕೆಟ್ಟದಾಗಿ ಕಾಣುತ್ತ ಡ್ಯಾನ್ಸ್ ಮಾಡುತ್ತಿರಲ್ಲ ಎಂದಿದ್ದಾರೆ. ಅದ್ಕಕ್ಯಾವುದಕ್ಕೂ ನಟಿ ವೈಷ್ಣವಿ ಗೌಡ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಕಲೆಗೆ ಬೆಲೆ ಕೊಡುವವರು ಹೀಗೆ ಮಾತನಾಡುವುದಿಲ್ಲ ಅಲ್ವ. ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ವೈಷ್ಣವಿ ಗೌಡ ಅವರ ಡಾನ್ಸ್ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಸನ್ನಿಧಿಯವರ ಈ ಡಾನ್ಸ್ ವಿಡಿಯೋ ಇಷ್ಟವಾದಲ್ಲಿ ಶೇರ್ ಕೂಡ ಮಾಡಬಹುದು ಧನ್ಯವಾದಗಳು...