ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ನಟಿ ವೈಷ್ಣವಿ ಗೌಡ ಏನು ಈ ಕಥೆ ವ್ಯಥೆ ?

By Infoflick Correspondent

Updated:Thursday, April 14, 2022, 13:52[IST]

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ನಟಿ ವೈಷ್ಣವಿ ಗೌಡ ಏನು ಈ ಕಥೆ ವ್ಯಥೆ ?

ಊಟ ತನ್ನ ಇಚ್ಛೆ ನೋಟ ಪರರ ಇಚ್ಛೆ ಎಂಬ ಮಾತಿದೆ. ಆದರೆ ಎಲ್ಲವುದಕ್ಕೂ ಒಂದು‌ ಮಿತಿಯಿರುತ್ತದೆ. ಅತಿಯಾದರೆ ಅಮೃತವೂ‌ ವಿಷ. ನಟಿಯರು ಹೆಚ್ಚಾಗಿ ಬಾಡಿಶೇಮಿಂಗ್  ಅನುಭವಿಸುತ್ತಾರೆ. ಬಾಡಿ ಶೇಮಿಂಗ್ ಅಂದರೆ ಒಬ್ಬರ ದೇಹದ ಬಗ್ಗೆ ಹೀಯಾಳಿಸಿ ಮಾತನಾಡುವುದು. 

ಲೋಕೊಭಿನ್ನ ರುಚಿಹಿಃ ಎಂಬ ಮಾತಿದೆ. ಹಾಗೇ ಒಬ್ಬೊಬ್ಬರಿಗೆ ಒಂದೊಂದು ಬಗೆಯ ನೋಟವಿರುತ್ತದೆ. ಆದರೆ ಮತ್ತೊನಬ್ಬರ ದೇಹವನ್ನು ಹೀಯಾಳಿಸುವುದು ಸರಿಯಾದ ಮಾರ್ಗವಲ್ಲ. ಅನೇಕ ನಟಿಯರು ಬಾಡಿ ಶೇಮಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಸ್ಯಾಂಡಲ್ ವುಡ್ ನಟಿಯರಿಗೂ ಬಾಡಿಶೇಮಿಂಗ್ ಅನುಭವ ಆಗುತ್ತಿದ್ದು ಈಗ ಈ ಗಾಳಿ ಅಗ್ನಿ ಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರಿಗೆ ಬಂದು ಬಡಿದಿದೆ. ವೈಷ್ಣವಿ ಗೌಡ ಅಪಾರ ಫ್ಯಾನ್ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ಅವರ ಕೈಯಲ್ಲಿ ಹಲವು ಧಾರಾವಾಹಿ ಹಾಗು ಸಿನಿಮಾಗಳಿದ್ದು ಅದರ ಜೊತೆಗೆ ಯೂಟ್ಯೂಬ್ ಚಾನಲ್ ಮೂಲಕವೂ ಜನತೆಗೆ ಹತ್ತಿರವಾಗಿದ್ದಾರೆ ಡಿಂಪಲ್ ರಾಣಿ ವೈಷ್ಣವಿ ಗೌಡ. ವೈಷ್ಣವಿ ಗೌಡ ಅವರು ನೋಡಲು ತೆಳ್ಳಗೆ, ಬೆಳ್ಳಗೆ ಇದ್ದಾರೆ ಅವರಿಗೂ ಬಾಡಿಶೇಮಿಂಗ್ ಆಗುವುದೇ ಎಂದು ನಿಮಗೆ ಅನುಭವಿಸಬಹುದು. ಅವರಿಗಾದ ಬಾಡೀ ಶೇಮಿಂಗ್ ನೋವಿನ ಕಥೆಯನ್ನು ನಟಿ ಹಂಚಿಕೊಂಡಿದ್ದಾರೆ. 

ಹೌದು ಹೈಸ್ಕೂಲ್ ಇದ್ದಾಗಲೇ ವೈಷ್ಣವಿ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ. ಹೈಸ್ಕೂಲ್ ಓದುತ್ತಿರುವಾಗ ದಪ್ಪಗಿದ್ದರಂತೆ, ಅಮ್ಮ ಮಾಡಿದ ಊಟ ತಿನ್ನುವುದು ಬಿಟ್ಟರೆ ಬೇರೆ ಯಾವ ಕೆಲಸನೂ ಮಾಡದೆ ದಪ್ಪ ಆಗಿದ್ದೆ, ಕುಳ್ಳಗೆ ಇದ್ದ ಕಾರಣ ಇನ್ನೂ ದಪ್ಪ ಕಾಣಿಸುತ್ತಿದ್ದೆ, ಆಗ ಎಲ್ಲರೂ‌ ನನ್ನ ಡುಮ್ಮಿ ಡುಮ್ಮಿ ಅಂತ ಕರೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.  

ಈಗಲೂ ನಾನು ಬಾಡಿ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹಲವು ನ್ಯೂನತೆಗಳು ಸರಿ ಮಾಡಿಕೊಳ್ಳುತ್ತಿದ್ದೇನೆ. ಇನ್ನು ಪ್ರತಿಯೊಬ್ಬರೂ ಪರ್ಫೆಕ್ಟ್ ಆಗಿರುವುದಿಲ್ಲ, ಒಂದಲ್ಲ ಒಂದು ಸಮಸ್ಯೆಗಳು, ಕೊರತೆ ಗಳು ಇದ್ದೇ ಇರುತ್ತದೆ. ಹಾಗಾಗಿ ಬೇರೆಯವರನ್ನು ಅವಮಾನಿಸುವುದು ಸರಿಯಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.