ಮತ್ತೆ ಕಿರುತೆರೆಗೆ ಬರಲಿದ್ದಾರಾ ವೈಷ್ಣವಿ ಗೌಡ: ಯಾವುದು ಆ ಧಾರಾವಾಹಿ..?

By Infoflick Correspondent

Updated:Thursday, March 31, 2022, 10:07[IST]

ಮತ್ತೆ ಕಿರುತೆರೆಗೆ ಬರಲಿದ್ದಾರಾ ವೈಷ್ಣವಿ ಗೌಡ: ಯಾವುದು ಆ ಧಾರಾವಾಹಿ..?

ನಟಿ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯರಾದರು. ವೈಷ್ಣವಿ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ತೋರಿಸಿದ್ದರು. ಕಳೆದ ಕೆಲ ತಿಂಗಳಿಂದ ಅವರದ್ದೇ ಒಂದು ಯುಟ್ಯೂಬ್ ಚಾನೆಲ್ ಅನ್ನು ಕೂಡ ಓಪನ್ ಮಾಡಿಕೊಂಡಿದ್ದು, ನಿವೇದಿತಾ ಗೌಡ ಸೇರಿದಂತೆ ಕೆಲವರ ಸಂದರ್ಶನವನ್ನೂ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾಗಳಲ್ಲೂ ವೈಷ್ಣವಿ ಗೌಡ ಬ್ಯುಸಿಯಾಗಿದ್ದಾರೆ. ಇನ್ನು ಈಗ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ವೈಷ್ಣವಿ ಜೀ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

'ಅಗ್ನಿಸಾಕ್ಷಿ' ಧಾರಾವಾಹಿಗೂ ಮುನ್ನ ವೈಷ್ಣವಿ ಗೌಡ ಹಲವು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರೂ ಕೂಡ ಸನ್ನಿಧಿ ಪಾತ್ರ ತಂದುಕೊಟ್ಟಷ್ಟು ಹೆಸರು ಇನ್ಯಾವುದು ತಂದುಕೊಟ್ಟಿಲ್ಲ. ಆ ಧಾರಾವಾಹಿಯಲ್ಲಿ ಅವರು ಮಾಡಿದ ಸನ್ನಿಧಿ ಪಾತ್ರ ಕರುನಾಡಿನ ಜನರ ಮನೆ ಮಾತಾಗಿತ್ತು. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸನ್ನಿಧಿ ಎಂದೇ ಪರಿಚಿತರಾಗಿದರು. 

ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಹಲವು ಕಲಾವಿದರಿಗೆ ಸಿಕ್ಕಾಪಟ್ಟೆ ಖ್ಯಾತಿ ನೀಡಿತ್ತು. ವಿಜಯ್ ಸೂರ್ಯ, ವೈಷ್ಣವಿ ಗೌಡ, ಐಶ್ವರ್ಯಾ ಸಾಲಿಮಠ, ರಾಜೇಶ್ ಧ್ರುವ, ಚಂದನಾ, ಪ್ರಿಯಾಂಕಾ ಎಸ್. ಸುಕೃತಾ ನಾಗ್, ಮುಖ್ಯಮಂತ್ರಿ ಚಂದ್ರು, ಅನುಷಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿದ್ದರು. ಸದ್ಯ ಸಮಯದಲ್ಲಿ ಅವರು ಯೋಗಾಸನ, ಧ್ಯಾನದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ವೈಷ್ಣವಿ ಗೌಡ ಅವರು ಬಹುಕೃತ ವೇಷಂ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ವೈಷ್ಣವಿ ಗೌಡ ಅವರು ಬಹುಕೃತ ವೇಷಂ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.   

ಇದಲ್ಲದೇ ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಧಾರಾವಾಹಿ ಒಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಡಾಕ್ಟರ್ ಕರ್ಣ ಎಂಬ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದು, ಯಾವಾಗ ಪ್ರಸಾರವಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಕೆಎಸ್ ರಾಮ್ ಜೀ ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ವಿಚಾರವೇನೆಂದರೆ, ವೈಷ್ಣವಿ ಜೋಡಿಯಾಗಿ ಈ ಧಾರಾವಾಹಿಯಲ್ಲೂ ವಿಜಯ್ ಸೂರ್ಯ ನಟಿಸುತ್ತಿದ್ದಾರೆ ಎಂಬು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.