ವೈಷ್ಣವಿ ಮದುವೆ ವಿಡಿಯೋ ಎಂದ ಮಹಿಳೆ..! ಈ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದೇಕೆ ಗೊತ್ತಾ.?

Updated: Thursday, October 21, 2021, 12:12 [IST]

ವೈಷ್ಣವಿ ಮದುವೆ ವಿಡಿಯೋ ಎಂದ ಮಹಿಳೆ..! ಈ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದೇಕೆ ಗೊತ್ತಾ.?

ಹೌದು ಸ್ನೇಹಿತರೆ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕಾಣಿಸಿಕೊಂಡಿದ್ದ ನಟಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಅವರ ವಿಚಾರವಾಗಿ ಇದೀಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೌದು ನಟಿ ವೈಷ್ಣವಿ ಗೌಡ ಅವರು ಮದುವೆಯಾಗಿದ್ದಾರೆ ಎನ್ನಲಾಗಿ ವಿಡಿಯೋವನ್ನು ಮಹಿಳೆಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ಸಾಮಾಜಿಕ ಪ್ರಿಯರು, ನಿಮಗೆ ತಲೆ ಇಲ್ಲವಾ ಸುಳ್ಳು ಸುದ್ದಿಯನ್ನು ಏಕೆ ಹಬ್ಬಿಸುತ್ತಿರಿ ಸುಳ್ಳುಸುದ್ದಿ ವಿಡಿಯೋ ಹಂಚಿಕೊಂಡು ಅವರ ಮರ್ಯಾದೆಯನ್ನು ಯಾಕೆ ಕಳೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಅವರು ಮದುವೆಯಾಗುವ ವೇಳೆ ಅವರೇ ಎಲ್ಲರೆದುರು ಬಹಿರಂಗವಾಗಿ ಅಧಿಕೃತ ಮಾಹಿತಿಯನ್ನು ತಿಳಿಸುತ್ತಾರೆ. ಅಥವಾ ವೀಡಿಯೋ ಮೂಲಕ ಖುಷಿ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ ಎಂಬುದಾಗಿ ಹೇಳಿ ಕಿಡಿಕಾರಿದ್ದಾರೆ. ಹೌದು ವೈಷ್ಣವಿ ಅವರು ತುಂಬಾನೇ ಸೈಲೆಂಟ್, ಬಿಗ್ ಬಾಸ್ ಮನೆಯಲ್ಲಿ ಸಹ ಅಷ್ಟೇ ಸೈಲೆಂಟಾಗಿ ಆಟವನ್ನು ಆಡಿ ಹೊರಬಂದವರು. ವೈಷ್ಣವಿ ನಿಜಜೀವನದಲ್ಲಿ ಸಹ ತುಂಬಾನೇ ಸೈಲೆಂಟ್ ಇರುತ್ತಾರೆ ಎಂಬುದಾಗಿ ಇವರ ಅಭಿಮಾನಿಗಳು ಸಹ ಈಗಾಗಲೇ ಹೇಳಿದ್ದಾರೆ. ಆದರೆ ಈ ರೀತಿ ವಿಡಿಯೋ ನೋಡಿದ ನೆಟ್ಟಿಗರು ಹೆಚ್ಚು ಬೇಸರ ವ್ಯಕ್ತಪಡಿಸಿದ್ದು ಈ ರೀತಿ ವಿಡಿಯೋ ಶೇರ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಈ ರೀತಿ ಹೇಳುವುದರಿಂದ ನಿಮಗೆ ಕೆಟ್ಟ ಹೆಸರು ಬರುತ್ತದೆ, ಜೊತೆಗೆ ಎಲ್ಲಾ ನ್ಯೂಸ್ ಮಾಧ್ಯಮಗಳ ಮೇಲೆ ಕೆಟ್ಟ ಅಭಿಪ್ರಾಯ ಭಾವನೆ ಮೂಡುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ. ಅಷ್ಟಕ್ಕೂ ವೈಷ್ಣವಿ ಅವರ ಮದುವೆ ವಿಡಿಯೋ ಎನ್ನಲಾದ ಈ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.? ನೀವೇ ಒಂದು ಬಾರಿ ಈ ವಿಡಿಯೋ ನೋಡಿಬಿಡಿ. ಹಾಗೆ ಇವರು ಹಾಕಿರುವ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು..(ಸುದ್ದಿ ಹಾಗು ವಿಡಿಯೋ ಕೃಪೆ :ಕನ್ನಡ ನಾಡು ಟಿವಿ )