Vaishnavi : ಮ್ಯಾರೇಜ್ ವಿಡಿಯೋ ಹಂಚಿಕೊಂಡ ನಟಿ ವೈಷ್ಣವಿ ಗೌಡ..! ಇಡೀ ಕುಟುಂಬದ ಪರಿಚಯ ಇಲ್ಲಿದೆ ನೋಡಿ

By Infoflick Correspondent

Updated:Saturday, July 16, 2022, 13:48[IST]

Vaishnavi : ಮ್ಯಾರೇಜ್ ವಿಡಿಯೋ ಹಂಚಿಕೊಂಡ ನಟಿ ವೈಷ್ಣವಿ ಗೌಡ..! ಇಡೀ ಕುಟುಂಬದ ಪರಿಚಯ ಇಲ್ಲಿದೆ ನೋಡಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ನಟಿ ವೈಷ್ಣವಿ ಅವರು ಹೆಚ್ಚು ಪ್ರಸಿದ್ದಿ ಹೊಂದಿದ್ದಾರೆ. ಅಗ್ನಿಸಾಕ್ಷಿ ಎಂಬ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ವೈಷ್ಣವಿ ಅವರು ಹೆಚ್ಚು ಗುರುತಿಸಿಕೊಂಡಿದ್ದು ಸನ್ನಿಧಿ ಪಾತ್ರದ ಮೂಲಕ. ಇದು ಆರಂಭ ಆಗಿದ್ದು ಕಲರ್ಸ್ ಕನ್ನಡದಲ್ಲಿ. ಸಿದ್ಧಾರ್ಥ್ ಹಾಗೂ ಸನ್ನಿಧಿ ಪಾತ್ರ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು ಎಂಬುದಾಗಿ ಹೇಳಬಹುದು. ಸನ್ನಿಧಿ ಕನ್ನಡ ಕಿರುತೆರಯ ಖ್ಯಾತ ರಿಯಾಲಿಟಿ ಶೋ ಆಗಿ ಜನ ಮನ್ನಣೆ ಗಳಿಸಿದ್ದ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದಿದ್ದರು. ತದನಂತರ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರದೆ ಆದ  ಲೋಕದಲ್ಲಿ ಬಿಜಿಯಾಗಿದ್ದಾರೆ. ಕಿರುತೆರೆಯಲ್ಲಿ ಹಾಗೆ ಕೆಲವೊಂದಿಷ್ಟು ಕಾರ್ಯಕ್ರಮಗಳಲ್ಲಿ ಜೊತೆಗೆ ಯುಟ್ಯೂಬ್ ನಲ್ಲೂ ಕೂಡ ಹೆಚ್ಚು ಸಕ್ರಿಯ ಆಗಿದ್ದಾರೆ ವೈಷ್ಣವಿ.

ಇತ್ತೀಚಿಗಷ್ಟೇ ನಿವೇದಿತ ಅವರ ಜೊತೆಯೂ ವಿಡಿಯೋ ಮಾಡಿ ಅವರೊಟ್ಟಿಗೆ ಸಮಯ ಕಳೆದ ನಟಿ ವೈಷ್ಣವಿ ಗೌಡ ಸುದ್ದಿಯಾಗಿದ್ದರು. ಹಾಗೆ ಸದಾ ವೈರಲ್ ವಿಡಿಯೋಗೇ ಡ್ಯಾನ್ಸ್ ಮಾಡುತ್ತ ಇರುತ್ತಾರೆ. ಮೊನ್ನೆ ಟ್ರಿಪ್ಪು ಕೈಗೊಂಡಿದ್ದು ಪರಿಸರದ ವಾತಾವರಣದಲ್ಲಿ ಎಷ್ಟು ಎಂಜಾಯ್ ಮಾಡಬಹುದು ಎಂಬುದಾಗಿ ತೋರಿಸಿಕೊಟ್ಟಿದ್ದರು.    

ಹಾಗೆ ಮೇಕಪ್ ವಿಚಾರದಲ್ಲಿಯೂ ಕೂಡ ಯೂಟ್ಯೂಬ್ ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡು, ಕೆಲವರಿಗೆ ಅದರ ಬಗ್ಗೆ ಮಾಹಿತಿ ನೀಡಿ ಸುದ್ದಿ ಆಗಿದ್ದರು. ವೈಷ್ಣವಿ ಗೌಡ ಅವರು ಇತ್ತೀಚಿಗೆ ಅವರ ಯುಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಆಕ್ಟಿವ್ ಆಗಿಯೇ ಉಳಿದಿದ್ದಾರೆ ಎಂದು ಹೇಳಬಹುದು.

ಆಗಾಗ ಅಭಿಮಾನಿಗಳೊಂದಿಗೆ ವಿಡಿಯೋ ಹಂಚಿಕೊಳ್ಳುವ ವೈಷ್ಣವಿ ಗೌಡ ಇದೀಗ ಅವರ ಮನೆಯ ಒಂದು ಮದುವೆ ವಿಡೀಯೋ ಹಂಚಿಕೊಂಡಿದ್ದಾರೆ. ಮದುವೆಯ ವಿಡಿಯೋ ಶೇರ್ ಮಾಡಿಕೊಂಡ ವೈಷ್ಣವಿ ಗೌಡ ಅವರು ಅವರ ಇಡೀ ಕುಟುಂಬವನ್ನು ಎಲ್ಲರಿಗೂ ಪರಿಚಯ ಮಾಡಿದ್ದಾರೆ. ಇಲ್ಲಿದೆ ನೋಡಿ ಮದುವೆ ವಿಡಿಯೋ. ಹಾಗೆ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ವೈಷ್ಣವಿ ಎಂದು ಪ್ರಶ್ನೆ ಮಾಡಿದ್ದು. ಈ ವಿಡಿಯೋಗೆ ಮೆಚ್ಚುಗೆ ತಿಳಿಸಿದ್ದಾರೆ. ವಿಡಿಯೋ ನೋಡಿ. ಹಾಗೆ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ ತಪ್ಪದೆ ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು ..