Vaishnavi : ಕೊನೆಗೂ ರೋಡ್ ಟ್ರಿಪ್ ಕೈಗೊಂಡ ಕಿರುತೆರೆ ನಟಿ ವೈಷ್ಣವಿ..! ಇಲ್ಲಿದೆ ನೋಡಿ ವೈರಲ್ ವಿಡೀಯೋ
Updated:Monday, May 23, 2022, 14:58[IST]

ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಇದೀಗ ಯೂಟ್ಯೂಬ್ ನಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ಆಗಾಗ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೆ ಇರುತ್ತಾರೆ ಎನ್ನಬಹುದು. ಹೌದು ನಟಿ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿ ಆಗಿದ್ದ ಅಗ್ನಿಸಾಕ್ಷಿ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವರು. ಹಾಗೆಯೇ ಬಳಿಕ ಕೆಲವೊಂದಿಷ್ಟು ದಿನಗಳ ಕಾಲ ಮದುವೆ ವಿಚಾರವಾಗಿಯೂ ಕೂಡ ವೈಷ್ಣವಿ ಅವರು ಸದ್ದು ಮಾಡಿದ್ದ ನೋಡಿದೆವು. ನಂತರ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಆದಂತಹ ಬಿಗ್ಬಾಸ್ ಸೀಸನ್ ಎಂಟರಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಇಷ್ಟಪಟ್ಟ ಹಾಗೇನೇ ಆಟ ಆಡಿ ಹೊರಬಂದರು ಎನ್ನಬಹುದು.
ಹೌದು ಹೀಗೆ ಒಂದಲ್ಲ ಒಂದು ವಿಚಾರವಾಗಿ ವೈಷ್ಣವಿ ಗೌಡ ಅವರು ಇದೀಗ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ವೈಷ್ಣವಿ ಯುಟ್ಯೂಬ್ ಚಾನೆಲ್ ನಲ್ಲಿ ಸಕ್ರಿಯ ಆಗಿದ್ದು, ಕೆಲವೊಂದಿಷ್ಟು ಆಸಕ್ತಿದಾಯಕವಾದ ವಿಚಾರಗಳನ್ನು ಮತ್ತು ಅವರ ವೈಯಕ್ತಿಕ ಕೆಲ ವಿಚಾರಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಅಭಿಮಾನಿಗಳಿಗಾಗಿ ಮತ್ತು ಜನರಿಗೆ ಕೆಲವೊಂದಿಷ್ಟು ಪ್ರೊಡಕ್ಟ್ ಬಗ್ಗೆಯೂ ಸಹ ಮಾಹಿತಿ ತಿಳಿಸಿಕೊಡುತ್ತಿದ್ದು, ವೈಷ್ಣವಿ ಅವರ ಎಲ್ಲಾ ವಿಡಿಯೋಗಳು ಸಹ ವೈರಲ್ ಎಂದು ಹೇಳಬಹುದು. ಇದೀಗ ನಟಿ ವೈಷ್ಣವಿ ಗೌಡ ಅವರು ಸಕಲೇಶಪುರ ಟ್ರಿಪ್ ನಡೆದಿರುವ ವಿಡಿಯೋ ವೈರಲ್ ಆಗುತ್ತಿದೆ. ನಟಿ ವೈಷ್ಣವಿ ಅವರು ರೋಡ್ ಟ್ರಿಪ್ ಕೈಗೊಂಡಿದ್ದು, ರೋಡ್ ಉದ್ದಕ್ಕೂ ಸಕಲೇಶಪುರ ಟ್ರಿಪ್ ಅನುಭವವನ್ನು ಹೇಳಿಕೊಂಡಿದ್ದಾರೆ.
ಹೌದು ಅತ್ತ ಸಕಲೇಶಪುರ ತಲುಪುವವರೆಗೂ ವೈಷ್ಣವಿ ಅವರು ರಸ್ತೆ ಮಧ್ಯೆ ಇಳಿದು, ಅಜ್ಜಿ ಜೊತೆ ಮಾತನಾಡಿದ ದೃಶ್ಯ ತುಂಬಾ ಚೆನ್ನಾಗಿತ್ತು. ಹಾಗೆ ಅಭಿಮಾನಿಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡ ರೀತಿ ಚೆನ್ನಾಗಿತ್ತು. ಇನ್ನು ಏನೇನೆಲ್ಲಾ ರಸ್ತೆಯುದ್ದಕ್ಕೂ ನಟಿ ವೈಷ್ಣವಿ ಮಾಡಿದರು ಗೊತ್ತಾ ಈ ವಿಡಿಯೋದಲ್ಲಿದೆ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ತಪ್ಪದೇನೇ ಶೇರ್ ಮಾಡಿ ಧನ್ಯವಾದಗಳು..( video credit ; vaishnavi r b )