ಡಿ ಬಾಸ್ ಮತ್ತು ಅಪ್ಪು ಬಳಿ ಇರುವ ಲ್ಯಾಂಬೋರ್ಗಿನಿ ಕಾರಿನ ಬೆಲೆ ಯಾರದ್ದು ಹೆಚ್ಚು ಯಾರದ್ದು ಕಡಿಮೆ?

By Infoflick Correspondent

Updated:Friday, September 23, 2022, 22:05[IST]

ಡಿ ಬಾಸ್ ಮತ್ತು ಅಪ್ಪು  ಬಳಿ ಇರುವ ಲ್ಯಾಂಬೋರ್ಗಿನಿ ಕಾರಿನ ಬೆಲೆ ಯಾರದ್ದು ಹೆಚ್ಚು ಯಾರದ್ದು ಕಡಿಮೆ?

 ನಿಮಗೆಲ್ಲ ಗೊತ್ತಿರುವ ಹಾಗೆ ದರ್ಶನ ಮತ್ತು ಅಪ್ಪು ಬಳಿ ಲ್ಯಾಂಬೋರ್ಗಿನಿ  ಕಾರ್ ಇದೆ.ಇವರನ್ನು ಬಿಟ್ಟರೆ ಇನ್ನು ಯಾರ ಬಳಿಯೂ ಸಹ ಇಷ್ಟು ಬೆಲೆ ಬಾಳುವ ಕಾರ್ ಯಾರ ಹತ್ತಿರವೂ ಸಹ ಇಲ್ಲ. ಒಂದು  ಸಮಯದಲ್ಲಿ ದರ್ಶನ ಅವರು ಅಪ್ಪು ಹತ್ತಿರ ಇರುವ ಕಾರ್ ನನ್ನ ಹತ್ತಿರ ಸಹ ಇದೆ ಎಂದು ಹೇಳಿ ಕೊಂಡಿದ್ದರು .

ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಐಷಾರಾಮಿ ದುಬಾರಿ ಕಾರುಗಳನ್ನು ಇಟ್ಟುಕೊಳ್ಳುವ ಹವ್ಯಾಸವನ್ನು ಇಟ್ಟುಕೊಂಡಿದ್ದ ನಟರು ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಗಿದ್ದರು. ಆದರೆ ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನೆಲ್ಲ ಬಿಟ್ಟು ಅಗಲಿದ್ದಾರೆ.ಇದೇ ಸಮಯದಲ್ಲಿ ನಮ್ಮೆಲ್ಲರ ನೆಚ್ಚಿನ ದೊಡ್ಡಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಲ್ಯಾಂಬೋರ್ಗಿನಿ ಉರಸ್ ಕಾರ್ ಅನ್ನು ಕೂಡ ತಮ್ಮ ಪತ್ನಿಗಾಗಿ ಖರೀದಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಿಂತ ಹೆಚ್ಚಾಗಿ ಅಪ್ಪು ಅವರೇ ಈ ಕಾರ್ ಅನ್ನು ಹೊರಗೆ ಹೋಗುವಾಗ ಹೆಚ್ಚಾಗಿ ಬಳಸುತ್ತಿದ್ದರು ಯಾಕೆಂದರೆ ಇದು ಅವರಿಗೆ ಅತ್ಯಂತ ಇಷ್ಟವಾದ ಕಾರಾಗಿತ್ತು. ಇನ್ನು ಡಿ ಬಾಸ್ ಹಾಗೂ ಅಪ್ಪು ಅವರ ಕಾರಿನ ಬೆಲೆಯ ನಡುವಿನ ಅಂತರವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲ್ಯಾಂಬೋರ್ಗಿನಿ ಕಾರ್ ಅನ್ನು ಅವರು ಬರೋಬ್ಬರಿ ಮೂರು ಕೋಟಿ ರೂಪಾಯಿಗೆ ಖರೀದಿಸಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರ್ ಅನ್ನು ಭರ್ಜರಿ ಮೂರೂವರೆ ಕೋಟಿ ಖರೀದಿಸಿದ್ದಾರೆ. ಈ ಮೂಲಕ ಅಪ್ಪು ಅವರ ಲ್ಯಾಂಬೋರ್ಗಿನಿ ಕಾರಿನ ಬೆಲೆ ಹೆಚ್ಚು ಎಂಬುದಾಗಿ ತಿಳಿದು ಬಂದಿದೆ.