Vamshika Anand : ಅಬ್ಬಬ್ಬಾ ಅದೇನು ಡ್ಯಾನ್ಸ್ ಸ್ಟೆಪ್ ಹಾಕ್ತಾಳೆ ನೋಡಿ ವಂಶಿಕಾ..! ಎಕ್ಕ ಸಕ್ಕ ಹಾಡು ವೈರಲ್

By Infoflick Correspondent

Updated:Friday, July 1, 2022, 07:37[IST]

Vamshika Anand :  ಅಬ್ಬಬ್ಬಾ ಅದೇನು ಡ್ಯಾನ್ಸ್ ಸ್ಟೆಪ್ ಹಾಕ್ತಾಳೆ ನೋಡಿ ವಂಶಿಕಾ..! ಎಕ್ಕ ಸಕ್ಕ ಹಾಡು ವೈರಲ್

ಕನ್ನಡ ಕಿರುತೆರೆಯ ಅಂಗಳದಲ್ಲಿ ಈಗಾಗಲೇ ಹೆಚ್ಚು ಜನರು ಪ್ರತಿಕ್ರಿಯ ಪಡೆದು ಅವರ ಪ್ರೀತಿ ಅಭಿಮಾನಿಗಳಿಸಿದ್ದಾರೆ. ಅವರ ಸಾಲಿಗೆ ಮಾಸ್ಟರ್ ಆನಂದ್ ಅವರು ಬರುತ್ತಾರೆಂದು ಹೇಳಬಹುದು. ಆರಂಭದದಿನಗಳಲ್ಲಿ ಬಾಲ ನಟ ಆಗಿ ಹೆಚ್ಚು ಗುರುತಿಸಿಕೊಂಡಿದ್ದ ಮಾಸ್ಟರ್ ಆನಂದ್ ಅಭಿನಯದಲ್ಲಿ ಎಲ್ಲವನ್ನೂ ಕುಡಿದು ಅರಗಿಸಿದ್ದರು. ಮಾಸ್ಟರ್ ಆನಂದ್  ದೊಡ್ಡವರಾದ ಬಳಿಕವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು. ಆದರೆ ಅವರಿಗೆ ಅಷ್ಟಾಗಿ ಬೆಳ್ಳಿತರೆಯೂ ಯಶಸ್ವಿ ತಂದುಕೊಡಲಿಲ್ಲ. ಬದಲಿಗೆ ಮಾಸ್ಟರ್ ಆನಂದ್ ಅವರು ಅವರದೇ ಆದ ವಿಶೇಷ ಶೈಲಿಯ ನಿರೂಪಣೆಯ ಮೂಲಕ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡು ಕನ್ನಡ ಜನತೆಯ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ.  

ಇದೀಗ ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಅವರಿಗೆ ಒಂದು ಮುದ್ದಾದ ಮಗುವಿದೆ. ಆ ಹೆಸರು ಕೂಡ ನಿಮಗೂ ಗೊತ್ತಿದೆ. ಹೌದು ಅದುವೇ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಟಿಸುತ್ತಿರೊ ವಂಶಿಕ ಕಶ್ಯಪ್ ಆನಂದ್. ಹೌದು ವಂಶಿಕ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಪರಿಚಿತರಾದರು. ನಂತರ ಯಾವುದೇ ಪಾತ್ರ ಕೊಟ್ಟರೂ ಕೂಡ ಲೀಲಾಜಾಲವಾಗಿ ವಂಶಿಕ ಭರ್ಜರಿಯಾಗಿ ಅಭಿನಯಿಸುತ್ತಾಳೆ. ಇದೀಗ ಗಿಚ್ಚಿ ಗಿಲಿ ಗಿಲಿ ಶೋನಲ್ಲಿಯೂ ಸಹ ಸಕ್ಕತ್ ಮೆರೆಯುತ್ತಿದ್ದಾಳೆ. ಹೌದು ವಂಶಿಕ ಮತ್ತು ಇನ್ನೊಬ್ಬ ಪುಟ್ಟ ಬಾಲಕಿ ಇದೀಗ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಈ ಸಿನಿಮಾದ ಹಾಡಿನ ರೀಲ್ಸ್ ಈಗಾಗಲೇ ಎಲ್ಲಾ ಕಡೆ ಹರಿದಾಡುತ್ತಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ ಎನ್ನಬಹುದು. ಹಾಗೆ ಸಿನಿಮಾ ಮುಂದಿನ ತಿಂಗಳು 28 ನೇ ತಾರೀಕು ತೆರೆಗೆ ಬರುತಿದೆ. ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವಂತೆ ಸಿನಿಮಾ ತಯಾರಾಗಿದ್ದು, ಇದು ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಸಿನಿಮಾ ಆಗಿರಲಿದೆ ಎನ್ನಬಹುದು. ಪ್ಯಾನ್ ವರ್ಡ್ ಸಿನಿಮಾ ಇದಾಗಿದ್ದು, ಈ ಪುಟ್ಟ ಕಂದಮ್ಮಗಳು ಎಕ್ಕ ಸಕ್ಕ ಎನ್ನುತ್ತಾ ಯಾವ ರೀತಿ ಡಾನ್ಸ್ ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ನೀವೂ ಬೆರಗಾಗ್ತಿರ. ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ. ಹಾಗೆ ವಂಶಿಕ ಅಭಿನಯ, ಆಕೆ ಡ್ಯಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಹೆಚ್ಚಿನ ಹೊಸ ಹೊಸ ಸುದ್ದಿಗಳಿಗೆ ನಮ್ಮ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು...