Vamshika : ಚಂದ್ರಲೋಕಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ..! ಅಸಲಿ ವಿಡೀಯೋ ವೈರಲ್
Updated:Sunday, May 29, 2022, 20:21[IST]

ಕನ್ನಡ ಕಿರುತೆರೆಯ ಸಾಕಷ್ಟು ಹೊಸ ಹೊಸ ಕಾಮಿಡಿ ಶೋಗಳು ಮತ್ತು ಡ್ರಾಮಾ ಜೂನಿಯರ್ ಸರಿಗಮಪ ಹೀಗೆ ಒಂದಲ್ಲ ಒಂದು ಕಾರ್ಯಕ್ರಮಗಳು ವಾರಂತ್ಯಕ್ಕೆ ಪ್ರೇಕ್ಷಕರನ್ನು ಹೆಚ್ಚು ರಂಜಿಸುತ್ತವೆ. ಹೌದು ಒಂದೊಂದು ಕಾರ್ಯಕ್ರಮ ತುಂಬಾನೆ ಜನಪ್ರಯತೆ ಪಡೆಯುತ್ತಿವೆ. ಮೊನ್ನೆ ಇತ್ತೀಚಿಗೆ ಆರಂಭವಾದ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಹೊಸ ಶೋ ಇದೀಗ ಭರ್ಜರಿಯಾಗಿ ಪ್ರದರ್ಶನ ಕೊಡುತ್ತಿದ್ದು, ಇದರಲ್ಲಿ ಕೆಲವೊಂದಿಷ್ಟು ಕಲಾವಿದರನ್ನು ಜೋಡಿಯನ್ನಾಗಿ ಮಾಡಿ ಅವರ ಮೂಲಕ ಕಾಮಿಡಿ ಸ್ಕ್ರಿಪ್ಟ್ ಗಳನ್ನು ಮಾಡಿಸಲಾಗುತ್ತದೆ. ಹೌದು ನಿವೇದಿತಾ ಗೌಡ ಕೂಡ ಇದೇ ಕಾಮಿಡಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದಾರೆ.
ಹೀಗೆ ಎಲ್ಲರೂ ಸಹ ತುಂಬಾನೇ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದು, ಕಲರ್ಸ್ ಕನ್ನಡದಲ್ಲಿ ಇದೀಗ ಮನರಂಜನೆ ನೀಡುವ ಕಾರ್ಯಕ್ರಮವಾಗಿ ಇದು ಹೊರಹೊಮ್ಮಿದೆ ಎನ್ನಬಹುದು. ಜಡ್ಜಸ್ ಆಗಿ ನಟಿ ಶೃತಿ ಮತ್ತು ನಟ ಸೃಜನ್ ಇದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ಮೂಡಿಬರುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ದಿನೇ ದಿನೇ ಹೆಚ್ಚು ಪ್ರೇಕ್ಷಕರನ್ನ ಹೊಂದುತ್ತಿದ್ದು, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ. ಅದೆಷ್ಟು ಚೂಟಿಗಾಗಿ ನಟನೆ ಮಾಡುತ್ತಾರೆ ಎಂದು. ಹೌದು ವಂಶಿಕಾ ಆನಂದ್ ನಟನೆ ನಿಜಕ್ಕೂ ಅದ್ಭುತ. ಇದೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಹೌದು ಚಂದ್ರ ಲೋಕಕ್ಕೆ ಕಾಲಿಟ್ಟ ವಂಶಿಕಾ ಮಾಸ್ಟರ್ ಆನಂದ್ ಫುಲ್ ಹವಾ ಸೃಷ್ಟಿಸಿದ್ದಾರಂತೆ.
ಹೌದು ಕಾಪಾಡಿ ಕಾಪಾಡಿ ಎಂದು ಸದ್ದು ಬರುತ್ತಿದ್ದಂತೆ ರಜನಿ ಸ್ಟೈಲಲ್ಲಿ ವಂಶಿಕ ಎಂಟ್ರಿ ಕೊಡುತ್ತಾಳೆ. ತದನಂತರ ಆಗಿದ್ದೇನು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಹಾಗೆ ನಿಮ್ಮ ನೆಚ್ಚಿನ ಈ ಕಾರ್ಯಕ್ರಮದ ಕಂಟೆಸ್ಟೆಂಟ್ ಯಾರು ಎಂದು ಕಮೆಂಟ್ ಮಾಡಿ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ನಿಜಕ್ಕೂ ಇಷ್ಟ ಎಂದಾದರೆ ಈ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು...