Vamshika Anand : ವಂಶಿಕಾ ಡಾಕ್ಟರ್ ಆದ್ರೇನ್ ರೀ..! ಅಬ್ಬಬ್ಬಾ ಶುಗರ್ ಟೆಸ್ಟ್ ಮಾಡೋ ರೀತಿ ನೋಡಿ..!

By Infoflick Correspondent

Updated:Thursday, July 21, 2022, 19:22[IST]

Vamshika Anand : ವಂಶಿಕಾ ಡಾಕ್ಟರ್ ಆದ್ರೇನ್ ರೀ..! ಅಬ್ಬಬ್ಬಾ ಶುಗರ್ ಟೆಸ್ಟ್ ಮಾಡೋ ರೀತಿ ನೋಡಿ..!

ಕನ್ನಡ ಕಿರುತೆರೆಯಲ್ಲಿ ವಾರಾಂತ್ಯಕ್ಕೆ ಪ್ರೇಕ್ಷಕರನ್ನು ರಂಜಿಸಲು ನಾನ ರೀತಿಯ ಕಾರ್ಯಕ್ರಮಗಳು ಈಗಾಗಲೇ ಹೆಚ್ಚು ಪ್ರಸಾರ ಆಗುತ್ತಿವೆ. ಕಲರ್ಸ್ ಕನ್ನಡ, ಜೀ ಕನ್ನಡ, ಸುವರ್ಣ ವಾಹಿನಿ ಹೀಗೆ ಆಯಾ ಚಾನೆಲ್ ಗಳು ಹೆಚ್ಚು ಮನರಂಜನೆ ನೀಡುವ ಉದ್ದೇಶದಿಂದ ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತಾ ತುಂಬಾನೇ ಶೋಗಳು ಇದೀಗ ನಡೆಯುತ್ತಿವೆ. ರಿಯಾಲಿಟಿ ಶೋ ಮೂಲಕ ಬೇರೆ ಬೇರೆ ರೀತಿಯ ಕಾಮಿಡೀ ಜಲಕ್ ನೀಡುವ ಶೋಗಳನ್ನ ಕನ್ನಡ ಕಿರುತೆರೆಯಲ್ಲಿ ಈಗೀಗ ನೀವು ಹೆಚ್ಚು ನೋಡಿರುತ್ತೀರಿ. ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ಶೋ ಗೆದ್ದ ವಂಶಿಕ ಇದೀಗ ಮತ್ತೆ ಗಿಚ್ ಗಿಲಿ ಗಿಲಿ ಕಾಮಿಡಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಲ್ಲಿಯೂ ಕೂಡ ಹೆಚ್ಚು ಎಲ್ಲರನ್ನೂ ನಗಿಸುತ್ತಿದ್ದಾಳೆ.  

ಈ ಕಾರ್ಯಕ್ರಮಕ್ಕೆ ಜಡ್ಜಸ್ಗಳಾಗಿ ನಟಿ ಶೃತಿ, ಸಾಧುಕೋಕಿಲ ಅವರು ಕಾಣಿಸುತ್ತಿದ್ದಾರೆ. ಹೌದು ನಿರೂಪಕರಾಗಿ ನಿರಂಜನ್ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ ಎನ್ನಬಹುದು. ನಟ ಮಾಸ್ಟರ್ ಆನಂದ್ ಅವರ ಮಗಳ ಬಗ್ಗೆ ನಾವು ನಿಮಗೆ ಹೆಚ್ಚು ಹೇಳಬೇಕಾಗಿಲ್ಲ. ಗಿಚ್ಚಿ ಗಿಲಿ ಗಿಲಿಯಲ್ಲಿ ಇದೀಗ ಹೆಚ್ಚು ಪ್ರದರ್ಶನ ನೀಡುತ್ತಿದ್ದು ಎಲ್ಲರನ್ನು ನಗೆಯಲ್ಲಿ ತೆಲಾಡುವಂತೆ ಮಾಡುತ್ತಿದ್ದಾಳೆ ವಂಶಿಕ. ವಂಶಿಕ ಅಂಜನಿ ಕಶ್ಯಪ ಅವರಿಗೆ ಯಾವುದೇ ಟಾಪಿಕ್ ಕೊಟ್ಟರೂ, ಯಾವುದೇ ಪಾತ್ರವನ್ನು ಸಹ ನೀಡಿದರೂ ಸಲೀಸಾಗಿ ನಟನೆ ಮಾಡುತ್ತಾಳೆ. ಆ ನಟನೆ ಅಭಿನಯದ ಕೌಶಲ್ಯ ಇದೆ ವಂಶಿಕಾಗೆ ಎನ್ನಬಹುದು. ಈಗ ಗಿಚ್ಚಿ ಗಿಲಿ ಗಿಲಿ ವೇದಿಕೆಯಲ್ಲಿ ವಂಶಿಕ ಡಾಕ್ಟರ್ ಆಗಿದ್ದಾಳೆ.

ಡಾಕ್ಟರ್ ಪಾತ್ರ ನಿಭಾಯಿಸಿದ ವಂಶಿಕ ಶುಗರ್ ಟೆಸ್ಟ್, ಮತ್ತು ಬಿಪಿ ಚೆಕ್ ಮಾಡುವ ರೀತಿಗೆ ಎಲ್ಲರೂ ಬಿದ್ದು ಬಿದ್ದು ಸಕತ್ ನಗೆಯಲ್ಲಿ ತೇಲಾಡಿದ್ದಾರೆ. ಆ ದೃಶ್ಯವನ್ನು ಸಹ ನೀವಿಲ್ಲಿ ನೋಡಬಹುದು. ಪ್ರೋಮೋ ವಿಡಿಯೋ ಹಂಚಿಕೊಂಡಿರುವ ಕಲರ್ಸ್ ಕನ್ನಡ ವಂಶಿಕಾ ಡಾಕ್ಟರ್ ಆಗಿ ಅದ್ಹೇಗೆ ಚೆಕ್ ಅಪ್ ಮಾಡುತ್ತಾಳೆ ಎಂಬುದಾಗಿ ಹಂಚಿಕೊಂಡಿದ್ದಾರೆ. ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದ್ದು, ಜಡ್ಜಸ್ ಗಳು ವಂಶಿಕ ನಟನೆಗೆ ಬಿದ್ದು ಬಿದ್ದು ನಕ್ಕಿದ್ದಾರೆ. ಅಸಲಿಗೆ ವಂಶಿಕಾ ಯಾವ ರೋಗವೂ ಇಲ್ಲದವರಿಗೆ ಬಿಪಿ ಚೆಕಪ್ ಮಾಡಿದ್ದೆಗೆ, ಹಾಗೆ  ಶುಗರ್ ಚೆಕಪ್ ಮಾಡಲು ಹೋದಾಗ ಆದ ಅವಾಂತರ ಏನೇನು ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ. ಹಾಗೆ ವಂಶಿಕ ಅಭಿನಯ ಹೇಗೆ ಮೂಡಿ ಬರುತ್ತಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.. ( video credit : colours super ).