Vamshika Anand : ಕೊನೆಗೂ ಬಯಲಾಯ್ತು ವಂಶಿಕಾ ಪಡೆಯುವ ವಾರದ ಸಂಭಾವನೆ ಹಣ..! ಅಬ್ಬಾ ಇಷ್ಟೊಂದಾ..!

By Infoflick Correspondent

Updated:Sunday, July 10, 2022, 13:01[IST]

Vamshika Anand :  ಕೊನೆಗೂ ಬಯಲಾಯ್ತು ವಂಶಿಕಾ ಪಡೆಯುವ ವಾರದ ಸಂಭಾವನೆ ಹಣ..! ಅಬ್ಬಾ ಇಷ್ಟೊಂದಾ..!

ಕನ್ನಡ ಕಿರುತೆರೆ ಖ್ಯಾತ ರಿಯಾಲಿಟಿ ಶೋಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಕೂಡ ಒಂದಾಗಿತ್ತು. ಹೌದು ಇದರಲ್ಲಿ ಯಶಸ್ವಿನಿ ಹಾಗೂ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಕೂಡ ಅಭಿನಯ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದರು. ಹಾಗೆ ಅಂದುಕೊಂಡಂತೆ ವಂಶಿಕ ಮನೆಮನೆಗೂ ಈ ಕಾರ್ಯಕ್ರಮ ಮೂಲಕ ತಲುಪಿದರು ಎನ್ನಬಹುದು. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೊದಲ ಎಪಿಸೋಡ್ ನಲ್ಲಿ ಧೂಳ್ ಎಬ್ಬಿಸಿದ ವಂಶಿಕಾ ವಿಡಿಯೋಸ್ ಹೆಚ್ಚು ವೈರಲಾಗುತ್ತಿದ್ದಂತೆ ಅಭಿಮಾನಿಗಳು ಕೂಡ ಈಕೆಗೆ ಹುಟ್ಟಿಕೊಂಡಿದ್ದರು. ಜೊತೆಗೆ ಜನರು ಕೂಡ ವಂಶಿಕ ಅಭಿನಯಕ್ಕೆ ಫಿದಾ ಆಗಿದ್ದು ಎಲ್ಲರೂ ಕೂಡ ಕೊಂಡಾಡಿದ್ದು ಉಂಟು. ಆದರೆ ಇದೀಗ ಅವೆಲ್ಲ ಉಲ್ಟಾ ಆಗಿದೆ. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಗೆದ್ದುಕೊಂಡಿದ್ದ ವಂಶಿಕಾ ಹಾಗೂ ಯಶಸ್ವಿನಿಯವರಿಗೆ ಬಹುಮಾನವಾಗಿ 5 ಲಕ್ಷ ಹಣ ಅಂದು ಕೈಗೆ ಸೇರಿತ್ತು. ಅದು ಸಂಭಾವನೆಯನ್ನು ಬಿಟ್ಟು ಎನ್ನಲಾಗಿದೆ. 

ಅದೇ ದುಡ್ಡಿನಲ್ಲಿ ಕಾರು ಕೊಂಡುಕೊಂಡು ಫೋಟೋ ಶೇರ್ ಮಾಡಿಕೊಂಡಿದ್ದರು ವಂಶಿಕ ಹಾಗೂ ಅವರ ತಾಯಿಯಾದ ಯಶಸ್ವಿನಿ. ಅಂದು ಹೊಗಳಿದ್ದ ಜನರೇ ಇಂದು ಆ ವಂಶಿಕಾ ಮತ್ತೆ ಗಿಚ್ಚಿ ಗಿಲಿ ಗಿಲಿಗೆ ಬಂದು ನಟಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಂಶಿಕಾ ಅಭಿನಯ ನೋಡಲು ಕೆಲ ಜನರಿಗೆ ಕಿರಿಕಿರಿ ಉಂಟು ಮಾಡಿದೆಯಂತೆ. ಹೌದು ಓದುವ ವಯಸ್ಸಿನಲ್ಲಿ ಅವಳ ನಟನೆಯ ಮೂಲಕ ನೀವು ದುಡ್ಡನ್ನ ಮಾಡಬೇಕಾ ಎನ್ನಲಾಗಿ ಕೆಲವರು ನಟ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರಿಗೆ ಚುಚ್ಚು ಮಾತುಗಳನ್ನು ಆಡಿದ್ದು ಕಮೆಂಟ್ಗಳ ಮೂಲಕ ಬೇಸರ ಮಾಡಿದ್ದಾರೆ ಎನ್ನಲಾಗಿದೆ. ಅವೆಲ್ಲವಕ್ಕೂ ಉತ್ತರ ನೀಡಿದ ಮಾಸ್ಟರ್ ಆನಂದ್ ನಾವು ನಮ್ಮ ಮಗಳ ದುಡಿಮೆಯಿಂದ ದುಡ್ಡು ಮಾಡುತ್ತಿಲ್ಲ, ಅವಳಿಗೆ ಆಸಕ್ತಿ ಇರುವುದರ ಕಡೆಗೆ ಕಳುಹಿಸಿದ್ದೇವೆ.

ಅವಳ ಓದಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಿರ, ಅವಳೇನು ಐಎಎಸ್ ಓದುತ್ತಿದ್ದಾಳ, ಅವಳ ಆಸಕ್ತಿ ಇದ್ದ ಕಡೆ ನಾವು ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ಇದೀಗ ಗಿಚ್ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ವಂಶಿಕಾಗೆ ಎಷ್ಟು ಸಂಭಾವನೆ ಕೊಡಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ವಾರಕ್ಕೆ ಒಂದು ಎಪಿಸೋಡಿಗೆ 20,000 ಹಣವನ್ನ ವಂಶಿಕಾಗೆ ಕೊಡಲಾಗುತ್ತಿದೆಯಂತೆ. ತಿಂಗಳಿಗೆ 4 ರಿಂದ 5 ವಾರ ಶೂಟಿಂಗ್ ನಡೆಯುತ್ತಿದ್ದು, ತಿಂಗಳಿಗೆ ಹತ್ತಿರ ಹತ್ತಿರ ಒಂದು ಲಕ್ಷ ಸಂಭಾವನೆಯಾಗಿ ವಂಶಿಕ ಪಡೆಯುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.