Vamshika Anand : ವಂಶಿಕಾ ಪೊಲೀಸ್ ಗೆಟಪ್ ಗೆ ಬಿದ್ದು ಬಿದ್ದು ನಕ್ಕ ಜಡ್ಜಸ್..! ಕೊನೆಗೂ ಟ್ರೋಫಿ ಕಂಡು ಹಿಡಿದಳಾ ನೋಡಿ..!

By Infoflick Correspondent

Updated:Saturday, June 25, 2022, 14:33[IST]

Vamshika Anand :   ವಂಶಿಕಾ ಪೊಲೀಸ್ ಗೆಟಪ್ ಗೆ ಬಿದ್ದು ಬಿದ್ದು ನಕ್ಕ ಜಡ್ಜಸ್..! ಕೊನೆಗೂ ಟ್ರೋಫಿ ಕಂಡು ಹಿಡಿದಳಾ ನೋಡಿ..!

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹೌದು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೊಸ ಹೊಸ ಪ್ರತಿಭೆಗಳು ಬರುತ್ತಲೇ ಇರುತ್ತಾರೆ. ಕ್ಷಣಾರ್ಧದಲ್ಲಿ ಎಲ್ಲರ ಮನಸ್ಸು ಕದಿಯುತ್ತಾರೆ. ಹೌದು ಮಾಸ್ಟರ್ ಆನಂದ್ ಅವರ ಪುತ್ರಿ ಬಗ್ಗೆ ಈಗಾಗಲೇ ನಿಮಗೆ ಹೆಚ್ಚಾಗಿ ಮಾಹಿತಿ ಇದೆ ಅಂದುಕೊಂಡಿದ್ದೇನೆ. ವಂಶಿಕಾ ಅವರ ಅಭಿನಯವೂ ಅದೆಷ್ಟು ಜನರ ಮನಸ್ಸಿನಲ್ಲಿ ಉಳಿದಿದೆ ಎಂದರೆ ಚಟಪಟನೆ ಮಾತಾಡುವ ವಂಶಿಕ ಶೈಲಿಗೆ ಆಕೆಯದ್ದೇ ಆದ ಅಭಿಮಾನಿ ಬಳಗ ಸಹ ಇದೆ. ಹೌದು ಕಲರ್ಸ್ ಕನ್ನಡದಲ್ಲಿ ಈಗಾಗಲೇ ಹೆಚ್ಚು ಮನರಂಜನೆ ನೀಡುವ ಕಾರ್ಯಕ್ರಮ ನಡೆದಿವೆ ಅದು ಗೊತ್ತಿರುವ ವಿಚಾರ. 

ಕಲರ್ಸ್ ಕನ್ನಡದಲ್ಲಿ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಪ್ರೋಗ್ರಾಮ್ ಇತ್ತೀಚಿಗೆ ಆರಂಭವಾಗಿದ್ದು ಕಾರ್ಯಕ್ರಮದಲ್ಲಿ ಸಾಕಷ್ಟು ಹೊಸ ಹೊಸ ಪ್ರತಿಭೆಗಳು ಬಂದಿದ್ದಾರೆ. ಹಾಗೆ ತಮ್ಮದೇ ಆದ ಕಾಮಿಡಿ ಜಲಕ್ ನೀಡೋ ಮಾತುಗಳನ್ನು ಆಡಿ ಕಾಮಿಡಿ ನಟನೆ ಮಾಡುತ್ತಾ ಅಪಾರವಾದ ಅಭಿಮಾನಿ ಗಿಟ್ಟಿಸಿಕೊಂಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕನ್ನಡ ಕಿರುತೆರೆಯಲ್ಲಿ ಇದ್ದ ಕೆಲ ಸೆಲೆಬ್ರಿಟಿ ಕಾಮಿಡಿ ನಟರು ನಟಿಯರು, ಜೊತೆಗೆ ಕಾಮಿಡಿ ನಟನ ಮಗಳು ಕೂಡ ಈ ಕಾರ್ಯಕ್ರಮದಲ್ಲಿ ಇದ್ದಾಳೆ. ಅದೇ ವಂಶಿಕ ಹೌದು ವಂಶಿಕಾ ಮತ್ತು ಆತನ ಜೋಡಿ ಶಿವ ಪಾತ್ರ ಮಾಡುವ ನಟ ಅದೆಷ್ಟು ಜನರಿಗೆ ಮೋಡಿ ಮಾಡಿದ್ದಾರೆ ಎಂದರೆ, ವೇದಿಕೆ ಮೇಲೆ ಬರುತ್ತಿದ್ದಂತೆ ಇವರಿಬ್ಬರನ್ನು ನೋಡಿ ಬಿದ್ದು ಬಿದ್ದು ನಗುತ್ತಾರೆ.

ಅಷ್ಟರಮಟ್ಟಿಗೆ ಈ ಜೋಡಿ ನಟನೆಯೂ ಫೇಮಸ್ ಆಗಿದೆ. ಹೌದು ಈಗ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಟ್ರೋಫಿ ಸಹ ಕಳುವಾಗಿದೆ. ಹಾಗೆ ಅದನ್ನು ಹುಡುಕುವ ಕೆಲಸಕ್ಕೆ ಇದೀಗ ಕೈ ಹಾಕಿರೋದು ವಂಶಿಕಾ. ಅದನ್ನು ಕದ್ದವರು ಆಕೆಯ ಜೋಡಿ ಶಿವ ಪಾತ್ರದಾರಿ ನಟ. ಕದ್ದಿರುವ ಟ್ರೋಫಿಯನ್ನು ಪೊಲೀಸ್ ಪಾತ್ರದಲ್ಲಿ ಬಂದ ವಂಶಿಕ ಯಾವ ರೀತಿ ವಿಚಾರಣೆ ಮಾಡಿ ಎಲ್ಲರನ್ನೂ ನಗೆಯಲ್ಲಿ ಹೇಗೆ ತೇಲಾಡುವಂತೆ ಮಾಡುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಹೌದು ಇವರಿಬ್ಬರ ಈ ಅಭಿನಯ ನಿಮಗೂ ಕೂಡ ಇಷ್ಟ ಆದಲ್ಲಿ, ತಪ್ಪದೇ ಶೇರ್ ಮಾಡಿ, ಮತ್ತು ನೀವು ಈ ವಿಡಿಯೋ ನೋಡದೆ ನಗದೇ ಇದ್ದರೆ ಖಂಡಿತ ಅರೆಸ್ಟ್ ಆಗುತ್ತೀರಾ ಧನ್ಯವಾದಗಳು...