Vamshika : ರಾ ರಾ ರಕ್ಕಮ್ಮ ಎಂದ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ..! ಮಗಳು ವಂಶಿಕಾ ಜೊತೆಗಿನ ಸ್ಟೆಪ್ ನೋಡಿ

By Infoflick Correspondent

Updated:Tuesday, June 7, 2022, 16:28[IST]

Vamshika :  ರಾ ರಾ ರಕ್ಕಮ್ಮ ಎಂದ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ..! ಮಗಳು ವಂಶಿಕಾ ಜೊತೆಗಿನ ಸ್ಟೆಪ್ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದು ಬಾರಿ ವೈರಲ್ ಆಗಿತ್ತು. ವಿಕ್ರಾಂತ್ ರೋಣ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಮುಖ್ಯ ನಾಯಕನಟನಾಗಿ ಅಭಿನಯ ಮಾಡುತ್ತಿದ್ದಾರೆ. ಅನೂಪ್ ಬಂಡಾರಿ ಇದೆ ಮೊದಲ ಬಾರಿಗೆ ನಟ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ರಾರಾ ರಕ್ಕಮ್ಮ ಎನ್ನುವ ಲಿರಿಕಲ್ ವಿಡಿಯೋ ಮಾತ್ರ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ನಟಿ ಫರ್ನಾಂಡಿಸ್ ಮಸ್ತ್ ಡ್ಯಾನ್ಸ್ ಮಾಡಿ ಸೈ ಎನಿಸಿದ್ದಾರೆ. ಹಾಗೆ ಈ ಸಿನಿಮಾದ ವಿಡಿಯೋ ತುಣುಕು ಒಂದರಲ್ಲಿ ನಟ ಕಿಚ್ಚ ಸುದೀಪ್ ಅವರು ಕೂಡ ಡಾನ್ಸ್ ಮಾಡಿದ ಪರಿಗೆ ನೀವು ಬೆರಗಾಗಲೇಬೇಕು. ಇಷ್ಟು ದಿನ ಕೆಲವರು ನಟ ಸುದೀಪ್ ಅವರ ಸಿನಿಮಾದಲ್ಲಿ ಸುದೀಪ್ ಅವರು ಎಲ್ಲಾ ರೀತಿಯ ಅಭಿನಯ ಮಾಡುತ್ತಾರೆ, ಆದರೆ ಡ್ಯಾನ್ಸ್ ಮಾತ್ರ ಕಡಿಮೆ ಇರುತ್ತದೆ ಎನ್ನುತ್ತಿದ್ದರು.

ಇದೀಗ ವಿಕ್ರಾಂತ್ ರೋಣ ಸಿನಿಮಾದ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರ ವಿಭಿನ್ನವಾದ ಸ್ಟೆಪ್ ಆ ರೀತಿ ಹೇಳುವವರ ಬಾಯಿ ಮುಚ್ಚಿಸಿದೆ ಎನ್ನಬಹುದು.  ನಟ ಕಿಚ್ಚ ಸುದೀಪ್ ಅವರ ರಾರಾ ರಕ್ಕಮ್ಮ ಹಾಡು ಇದೀಗ ದೇಶದಲ್ಲೆಡೆ ಬಾರಿ ವೈರಲ್ ಆಗುತ್ತಿದೆ. ಹೌದು ವಿಕ್ರಾಂತ್ ರೋಣ ಕೂಡಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇದು ಸಹ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ. ಹೌದು ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ನಟ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಅವರದ್ದು ಕೂಡ ಹೆಚ್ಚು ವಿಡಿಯೋಗಳು ವೈರಲ್ ಆಗುತ್ತಲೆ ಇರುತ್ತವೆ. ಇದೀಗ ಮನೆಯೊಳಗೆ ತಮ್ಮ ತಾಯಿಯಾದ ಯಶಸ್ವಿನಿ ಅವರ ಜೊತೆ ವಂಶಿಕ ರಾರಾ ರಕ್ಕಮ್ಮ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. 

ಹೌದು ವಿಡೀಯೋ ನೋಡಿ ನೆಟ್ಟಿಗರು ಕ್ಯೂಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದು, ವಿಡಿಯೋ ನೋಡುವುದಕ್ಕೆ ತುಂಬಾ ಮುದ್ದಾಗಿದೆ ಎಂದು ಹೇಳಬಹುದು. ಇಲ್ಲಿದೆ ನೋಡಿ ವಂಶಿಕಾ ವಿಡಿಯೋ. ಈ ವಿಡಿಯೋ ಪೂರ್ತಿ ನೋಡಿದ ಬಳಿಕ ನಿಮಗೂ ಸಹ ಇಷ್ಟವಾದಲ್ಲಿ, ತಪ್ಪದೆ ಶೇರ್ ಮಾಡಿ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..