ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಕತ್ ಎಂಟ್ರಿ ಕೊಟ್ಟ ವಂಶಿಕಾ..! ವಿಡಿಯೋ ನೋಡಿದ್ರೆ ನೀವೂ ನಗುತ್ತಿರ..!

By Infoflick Correspondent

Updated:Saturday, April 9, 2022, 12:58[IST]

ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಕತ್ ಎಂಟ್ರಿ ಕೊಟ್ಟ ವಂಶಿಕಾ..! ವಿಡಿಯೋ ನೋಡಿದ್ರೆ ನೀವೂ ನಗುತ್ತಿರ..!

   

ಕನ್ನಡ ಕಿರುತೆರೆಯಲ್ಲಿ ವಾರಂತ್ಯ ಬಂತು ಅಂದರೆ ಸಕ್ಕತ್ ಮನರಂಜನೆಯ ಕಾರ್ಯಕ್ರಮಗಳು ಸಿದ್ಧವಾಗಿರುತ್ತವೆ. ಹೌದು ಇತ್ತೀಚಿಗಷ್ಟೆ ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮ ಮುಗಿಸಿರುವ ಕಲರ್ಸ್ ಕನ್ನಡ ಇದೀಗ ಹೊಸ ಕಾಮಿಡಿ ಷೋ ವನ್ನ ಕಿರುತೆರೆಯ ಮೇಲೆ ತರುತ್ತಿದೆ. ಕಲರ್ಸ್ ಕನ್ನಡದಲ್ಲಿ ಇದೇ ಏಪ್ರಿಲ್ 9 ನೇ ತಾರೀಖಿನಿಂದ ರಾತ್ರಿ ಶನಿವಾರ ಮತ್ತು ಭಾನುವಾರ 7:30 ಕ್ಕೆ ಗಿಚ್ಚಿ ಗಿಲಿಗಿಲಿ  (Gichhi gili gili show) ಆರಂಭವಾಗುತ್ತಿದ್ದು ಈಗಾಗಲೇ ಕಾರ್ಯಕ್ರಮದ ಒಂದು ಪ್ರೊಮೋ ವಿಡಿಯೋ ಬಿಡುಗಡೆ ಆಗಿತ್ತು. ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ಚಾನೆಲ್ ಅದ್ದೂರಿ ಓಪನಿಂಗ್ ಪಡೆಯಲು ಎಲ್ಲಾ ಸಿದ್ಧತೆ ನಡೆಸಿದೆಎನ್ನಲಾಗಿದೆ.

ಹೌದು ಇದೀಗ ಮತ್ತೊಂದು ವಿಡಿಯೋದಲ್ಲಿ ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕ   (Vamshika anand)  ಆನಂದ್ ಎಂಟ್ರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಜೊತೆಗೆ ಇನ್ನು ಕೆಲ ಬೇಸರಯುಕ್ತ ಕಾಮೆಂಟ್ಗಳು ಕೂಡ ಈ ವಿಡೀಯೋ ಬಿಡುಗಡೆ ಆದಮೇಲೆ ಕೇಳಿ ಬಂದಿವೆ. ವಿಡಿಯೋ ನೋಡಿದ ಕನ್ನಡ ಕಿರುತೆರೆಯ ಪ್ರೇಕ್ಷಕರು ಸಣ್ಣ ಮಕ್ಕಳು ನೋಡುವ ಪ್ರೋಗ್ರಾಮ್ ಇದು ಆಗಿರುತ್ತದೆ. ಈ ರೀತಿ ಕೆಟ್ಟ ಪರಿಣಾಮ ಬೀರುವ ಡೈಲಾಗ್ ಗಳನ್ನು ಅವರ ಬಾಯಲ್ಲಿ ಹೇಳಿಸಬೇಡಿ ಎಂದಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಆಗಿರುವ ವಂಶಿಕ ಆನಂದ್ ಬಾಯಲ್ಲಿ ಇದೀಗ ನಟಿ ಶ್ರುತಿ ಅವರ ಅಭಿನಯದ ಸಿನಿಮಾದ ಒಂದು ಡೈಲಾಗನ್ನು ಹೇಳಿಸಿದ್ದಾರೆ. ಇಂಥಾ ಡೈಲಾಗ್ ಚಿಕ್ಕ ಮಕ್ಕಳು ಹೇಳುವ ಡೈಲಾಗ್ ಅಲ್ಲ.

ಅಂತಹದರಲ್ಲಿ ನೀವು ಈ ರೀತಿಯ ಡೈಲಾಗ್ ಹೇಳಿಸಿ ಸಣ್ಣ ಮಕ್ಕಳ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದ್ದಿರಿ,  ಅವರ ಮನಸ್ಸು ಹಸಿಗೋಡೆ ಇದ್ದಹಾಗೆ ಅವರ ಮನಸ್ಸನ್ನ ನೀವು ಈ ರೀತಿ ಸಣ್ಣ ಮಕ್ಕಳ ಬಾಯಿಯಲ್ಲಿ ಹೇಳಿಸಿ ಷೋ ನೋಡುವರಿಗೆ ಕೆಟ್ಟದಾಗಿ ಕಾಣುವಂತೆ ಮಾಡಿಸಿದ್ದಿರಿ ಎಂದು ಕಲರ್ಸ್ ಕನ್ನಡ ಚಾನೆಲ್ ವಿರುದ್ಧ ಕೆಲ ವೀಕ್ಷಕರು ಬೇಸರ ವ್ಯಕ್ತಪಡಿಸಿ. ಮಾತನಾಡಿದ್ದಾರೆ. ಅಸಲಿಗೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ವಂಶಿಕ ಹೊಡೆದ ಆ ಡೈಲಾಗ್ ಎಂಥದು ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋವನ್ನ ನೋಡಿ, ನಂತರ ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ, ಧನ್ಯವಾದಗಳು...(Video credit : colours kannada )