ಡಾಕ್ಟರ್‌ ಆಗಿ ವನ್ಷಿಕಾ ಕೊಡೊ ಟ್ರೀಟ್ಮೆಂಟ್ ಗೆ ಎಲ್ಲರೂ ಬೆಚ್ಚಿ ಬಿದ್ದಿದಾರೆ : ಏನದು ನೋಡಿ

By Infoflick Correspondent

Updated:Tuesday, August 9, 2022, 09:26[IST]

ಡಾಕ್ಟರ್‌ ಆಗಿ ವನ್ಷಿಕಾ ಕೊಡೊ ಟ್ರೀಟ್ಮೆಂಟ್ ಗೆ ಎಲ್ಲರೂ ಬೆಚ್ಚಿ ಬಿದ್ದಿದಾರೆ : ಏನದು ನೋಡಿ

ಕನ್ನಡ ಚಿತ್ರರಂಗದ ಖ್ಯಾತ ಕಾಮಿಡಿ ನಟ ನಿರೂಪಕ ಆಗಿ ಗಮನ ಸೆಳೆಯುತ್ತಿರುವ ನಟ ಮಾಸ್ಟರ್ ಆನಂದ್ ಅವರು ಈಗಾಗಲೇ ಎಲ್ಲರಿಗೂ ಪರಿಚಿತ ಇದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ಮೂಲಕ ನಿರೂಪಣೆ ಆರಂಭಿಸಿದ ಮಾಸ್ಟರ್ ಆನಂದ್ ಅವರು ಮುಂಚೆ ಹೆಚ್ಚು ನಿರೂಪಣೆಗೆ ಹೆಸರಾದ ನಟ. ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದು ಗಮನ ಸೆಳೆದವರು. ನಿರೂಪಕ ಆಗಿ ಇದೀಗ ಹೆಚ್ಚು ಜನಮನ್ನಣೆಯ ಗಳಿಸಿದ್ದಾರೆ.. ಆನಂದ್ ಪುತ್ರಿ ಏನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ತಂದೆಯನ್ನೇ ಮೀರಿಸುವ ಹಾಗೆ ಅಭಿನಯವ ಮಾಡಿ ಈಗ ಎಲ್ಲರ ಮನೆಗೆಲ್ಲುತ್ತಿದ್ದಾರೆ ವಂಶಿಕಾ. ಹೌದು ಮಾಸ್ಟರ್ ಆನಂದ್ ಪುತ್ರಿ ವಂಶಿಕ ಅಂಜನಿ ಈಗಾಗ್ಲೇ ಒಂದು ರಿಯಾಲಿಟಿ ಶೋವನ್ನು ಸಹ ಗೆದ್ದು ಬಂದಿದ್ದಾಳೆ. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಮೊದಲ ವಿಜೇತ ಆಗಿ ಹೊರಹೊಮ್ಮಿದ ಅಂಜನಿ ಕಶಪ್ಪ ಇದೀಗ ಕಲರ್ಸ್ ಕನ್ನಡದ ಇನ್ನೊಂದು ಕಾರ್ಯಕ್ರಮದಲ್ಲಿ ಸಕ್ಕತ್ ಬಿಜಿಯಾಗಿದ್ದಾಳೆ ಎನ್ನಬಹುದು.

ಹಾಗೆ ಒಳ್ಳೆಯ ಸಂಭಾವನೆ ಕೂಡ ಪಡೆಯುತ್ತಿದ್ದಾಳಂತೆ ವಂಶಿಕಾ. ಸಂಭಾವನೆ ವಿಚಾರವಾಗಿಯೂ ಬಾಲನಟಿ ವಂಶಿಕ ಅಭಿನಯ ವಿಚಾರವಾಗಿ ಕೆಲವು ದಿನಗಳ ಹಿಂದೆ ನೆಟ್ಟಿಗರು ಅವರ ತಂದೆ ತಾಯಿಗೆ ಸಾಕಷ್ಟು ಪ್ರಶ್ನೆಗಳನ್ನು ಮಾಡಿದ್ದರು. ನಿಮಗೆ ದುಡ್ಡೇ ಮುಖ್ಯಾನ, ಅವಳಿಗೆ ಯಾಕೆ ಸಣ್ಣ ವಯಸ್ಸಿನಲ್ಲಿಯೇ ಅಷ್ಟು ಅಭಿನಯ ಮಾಡಿಸಿ ದುಡ್ಡು ಪಡೆಯುತ್ತಿದ್ದೀರಾ, ಹಾಗೆ ಹೀಗೆ ಎಂದು ಮಾತನಾಡಿದರು. ಆಗ ನಟ ಆನಂದ್ ಮತ್ತು ಅವರ ಪತ್ನಿ ಯಶಸ್ವಿನಿ ಅವರು ಈ ವಿಚಾರವಾಗಿ ವಿಡಿಯೋ ಬಿಟ್ಟು ಅವರ ಅನಿಸಿಕೆಯನ್ನು ಕೂಡ ಹಂಚಿಕೊಂಡಿದ್ದ ನೀವೂ ಸಹ ನೋಡಿದ್ದೀರಿ. ಇದೀಗ ವಂಶಿಕಾ ಶಿವು ಅವರ ಜೊತೆ ಭರ್ಜರಿ ಅಭಿನಯಮಾಡಿ ಎಲ್ಲರ ಮನವನ್ನು ರಂಜಿಸುತ್ತಿದ್ದಾರೆ. ವಂಶಿಕ ಹಾಗೂ ಶಿವು ಹಾಗೇನೇ ನಿವೇದಿತ ಗೌಡ ಸೇರಿ ಮಾಡಿದ ಈ ಒಂದು ಅಭಿನಯ ಇದೀಗ ಎಲ್ಲೆಡೆ ವೈರಲಾಗುತ್ತಿದೆ. 

ವೇದಿಕೆ ಮೇಲೆ ಡಾ. ವಂಶಿಕ ಹಾಗೆ ಕ್ಲಿನಿಕಲ್ಲಿ ಶಿವು ಅವರು ಕೂಡ ಇದ್ದು ಸಕತ್ ಸ್ಕಿಟ್ ನೀಡಿದ್ದಾರೆ ಎನ್ನಬಹುದು. ಒಮ್ಮೆ ವಿಡೀಯೋ ನೋಡಿ. ಕೊನೆಯಲ್ಲಿ ಗಿಚ್ಚಿ ಗಿಲಿ ಗಿಲಿ ಷೋದ ನಿರೂಪಕ ನಿರಂಜನ್ ದೇಶಪಾಂಡೆ ಅವರು ಶಿವು ಅವರಿಗೆ ಒಂದು ಡೈಲಾಗ್ ಹೇಳುವ ಮೂಲಕ ಕಾಮಿಡಿ ಮಾಡುತ್ತಾರೆ. ಆಗ ವಂಶಿಕ ಹೊಡೆಯುವ ಡೈಲಾಗ್ ಕೇಳಿ ನಟ ನಿರಂಜನ್ ಕುಂತಲ್ಲೇ ಶಾಕ್ ಆಗಿದ್ದಾರೆ. ಆ ಟಾಂಗ್ ಅದ್ಭುತವಾಗಿತ್ತು ಎನ್ನಬಹುದು. ಮೊದಲು ಕಾಮಿಡಿ ಮಾಡುವುದನ್ನು ಬಿಟ್ಟು ಆಂಕರಿಂಗ್ ಮಾಡಿ ಎಂದ ವಂಶಿಕ ನಂತರದಲ್ಲಿ ನಿಮಗೆ ಆಂಕರಿಂಗ್ ಕೂಡ ಬರುವುದಿಲ್ಲ ಬಿಡಿ ಎಂದು ಮಾತನ್ನು ಮುಗಿಸುತ್ತಾರೆ. ಅದರ ವಿಡಿಯೋ ಇಲ್ಲಿದೆ ನೋಡಿ. ನೀವು ಕೂಡ ನಗೆಯಲ್ಲಿ ತೇಲಾಡುತ್ತಿರಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೆ ಈ ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು...( video credit : colours kannada )