Vamshika : ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೆಜಿಎಫ್ 2 ಡೈಲಾಗ್ ಗೆ ಸುಸ್ತಾದ ಜಡ್ಜ್ ಗಳು

By Infoflick Correspondent

Updated:Sunday, May 8, 2022, 12:40[IST]

Vamshika : ಮಾಸ್ಟರ್ ಆನಂದ್ ಪುತ್ರಿ ವಂಶಿಕಾ  ಕೆಜಿಎಫ್ 2     ಡೈಲಾಗ್ ಗೆ ಸುಸ್ತಾದ ಜಡ್ಜ್ ಗಳು

ಅಪ್ಪನಂತೆಯೇ ಪಟ ಪಟ ಅಂತ ಮಾತನಾಡುವ ವಂಶಿಕಾ ಅಜನಿ ಕಶ್ಯಪ್ ಪ್ರೇಕ್ಷಕರ ಅಚ್ಚು ಮೆಚ್ಚಿನ ಮುದ್ದು ಬಾಲಕಿ. ಜಟ ಪಟ ಅಂತ ಮಾತನಾಡುವ ವಂಶಿಕಾ ಮಾಸ್ಟರ್ ಆನಂದ್ ಅವರ ಮಗಳಾಗಿದ್ದು, ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾ ಮತ್ತು ತಾಯಿ ಯಶಸ್ವಿನಿ ವಿನ್ ಆಗಿದ್ದಾರೆ. ಫಿನಾಲೆಯಲ್ಲಿ ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ ಜೋಡಿ ಈ ಟ್ರೋಫಿ ಗೆದ್ದಿದ್ದಾರೆ.

ಗೆದ್ದಾಗ ಬಂದ ಹಣದಲ್ಲಿ ಕಾರನ್ನು ಕೂಡ ಖರೀದಿಸಿದ್ದಾರೆ. ನಾಲ್ಕು ವರ್ಷದ ವಂಶಿಕಾ ಮಾತುಗಳಿಗೆ ವೀಕ್ಷಕರು ಮಾರು ಹೋಗಿದ್ದಾರೆ. ವಂಶಿಕಾ ರನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ವಂಶಿಕಾ ಭಾಗವಹಿಸಿದ್ದಾರೆ. ಇತ್ತೀಚೆಗೆ ನಡೆದ ಡ್ಯಾನ್ಸಿಂಗ್ ಚಾಂಪಿಯನ್ ಶೋ ಹಾಗೂ ಗಿಚ್ಚಿ ಗಿಲಿಗಿಲಿ ಶೋ ಮಹಾಸಂಗಮವಾಗಿತ್ತು. ಇದರಲ್ಲಿ ವಂಶಿಕಾ ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಳು.   

ವೇದಿಕೆಯಲ್ಲಿ ವಂಶಿಕಾ ಕೆಜಿಎಫ್ ಸಿನಿಮಾದ ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್ ಇಟ್.. ಐ ಅವಾಯ್ಡ್.. ಬಟ ವೈಲೆನ್ಸ್ ಲೈಕ್ಸ್ ಮಿ.. ಈ ಕಾಂಟ್ ಅವಾಯ್ಡ್ ಅನ್ನೋ ಡೈಲಾಗ್ ಅನ್ನು ತನ್ನ ಶೈಲಿಯಲ್ಲಿ ಹೇಳಿದ್ದಾಳೆ. ಆಕ್ಟಿಂಗ್ ಆಕ್ಟಿಂಗ್ ಆಕ್ಟಿಂಗ್.. ಐ ಡೋಂಟ್ ಲೈಕ್ ಇಟ್.. ಐ ಅವಾಯ್ಡ್.. ಬಟ್ ಆಕ್ಟಿಂಗ್ ಲೈಕ್ಸ್ ಮಿ.. ಐ ಕಾಂಟ್ ಅವಾಯ್ಡ್ ಎಂದು ಹೇಳಿ ಜಡ್ಜ್ ಗಳು ಕುಣಿಯುವಂತೆ ಮಾಡಿದ್ದಾಳೆ. ಇದಷ್ಟೇ ಅಲ್ಲದೇ, ಇಂತಹದ್ದೇ ಕೆಜಿಎಫ್ ನ ಬೇರೆ ಬೇರೆ ಡೈಲಾಗ್ ಗಳನ್ನು ಹೇಳಿ ಎಲ್ಲರನ್ನು ನಗಿಸಿದ್ದಾಳೆ.