Vamshika Anand : ವಂಶಿಕಾ ಳಿಂದ ಬಂದ ಹಣವನ್ನು ಏನು ಮಾಡುತ್ತಿದ್ದೀರಾ ಎಂದು ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಮೈ ಮುಟ್ಟಿ ಕೊಳ್ಳುವಂತ ಉತ್ತರ ಕೊಟ್ಟ ಯಶಸ್ವಿನಿ ಆನಂದ್

By Infoflick Correspondent

Updated:Sunday, July 10, 2022, 10:32[IST]

Vamshika Anand :  ವಂಶಿಕಾ ಳಿಂದ  ಬಂದ ಹಣವನ್ನು   ಏನು ಮಾಡುತ್ತಿದ್ದೀರಾ ಎಂದು ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಮೈ ಮುಟ್ಟಿ ಕೊಳ್ಳುವಂತ ಉತ್ತರ ಕೊಟ್ಟ ಯಶಸ್ವಿನಿ ಆನಂದ್

ಅಪ್ಪನಂತೆಯೇ ಪಟ ಪಟ ಅಂತ ಮಾತನಾಡುವ ವಂಶಿಕಾ ಅಜನಿ ಕಶ್ಯಪ್ ಪ್ರೇಕ್ಷಕರ ಅಚ್ಚು ಮೆಚ್ಚಿನ ಮುದ್ದು ಬಾಲಕಿ. ಜಟ ಪಟ ಅಂತ ಮಾತನಾಡುವ ವಂಶಿಕಾ ಮಾಸ್ಟರ್ ಆನಂದ್ ಅವರ ಮಗಳಾಗಿದ್ದು, ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾ ಮತ್ತು ತಾಯಿ ಯಶಸ್ವಿನಿ ವಿನ್ ಆಗಿದ್ದರು. 

ನಾಲ್ಕು ವರ್ಷದ ವಂಶಿಕಾ ಮಾತುಗಳಿಗೆ ವೀಕ್ಷಕರು ಮಾರು ಹೋಗಿದ್ದಾರೆ. ವಂಶಿಕಾ ರನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ವಂಶಿಕಾ ಭಾಗವಹಿಸಿದ್ದಾರೆ. ಇನ್ನು ಇದರ ಜೊತೆಗೆ ರಾಜಾ-ರಾಣಿ ರಿಯಾಳಿಟಿ ಶೋನಲ್ಲೂ ಮಿಂಚುತ್ತಿದ್ದಾಳೆ. ಇನ್ನು ವಂಶಿಕಾ ಪರ್ಫಾಮೆನ್ಸ್‌ ಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ, ಹೀಗೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದರೆ ಆಕೆ ಭವಿಷ್ಯದ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.    

ಇನ್ನು ವಂಶಿಕಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದರೆ, ಅವಳ ಓದಿನ ಗತಿಯೇನು..? ಅಷ್ಟೇ ಅಲ್ಲದೇ, ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರುವ ಹಣದಲ್ಲಿ ಏನು ಮಾಡುತ್ತಿದ್ದೀರಾ ಎಂದು ಪ್ರೇಕ್ಷಕರು ಪ್ರಶ್ನಿಸಿದ್ದಾರೆ. ಇನ್ನು ಈ ವದಂತಿಗಳಿಗೆ ವಂಶಿಕಾ ಅವರ ತಾಯಿ ಪ್ರತಿಕ್ರಯಿಸಿದ್ದು, ನಾವು ಅವಳ ಹಣದಲ್ಲಿ ಬದುಕುವ ಸ್ಥಿತಿ ಬಂದಿಲ್ಲ. ಅವಳ ಹಣವನ್ನು ನಾವು ಸೇವ್‌ ಮಾಡುತ್ತಿದ್ದೇವೆ. ಇನ್ನು ಅವಳ ಎಜುಕೇಶನ್‌ ಮುಂದುವರಿದಿದ್ದು, ಯಾವುದೇ ತೊಂದರೆ ಇಲ್ಲ. ಅವಕಾಶ ಬಂದಿದ್ದಕ್ಕೆ ರಿಯಾಲಿಟಿ  ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಅಷ್ಟೇ ಎಂದು ಹೇಳಿದ್ದಾರೆ.