Vamshika : ಗಿಚ್ಚಿ ಗಿಲಿ ಗಿಲಿ ವಿಜೇತರಾಗಿ ಹೊರ ಹೊಮ್ಮಿದ ಶಿವು ವಂಶಿಕ ಅವರಿಗೆ ಚಾನೆಲ್ ಕೊಟ್ಟ ಹಣವೇಷ್ಟು ಗೊತ್ತೇ..?

By Infoflick Correspondent

Updated:Wednesday, September 21, 2022, 18:38[IST]

Vamshika : ಗಿಚ್ಚಿ ಗಿಲಿ ಗಿಲಿ ವಿಜೇತರಾಗಿ ಹೊರ ಹೊಮ್ಮಿದ ಶಿವು ವಂಶಿಕ  ಅವರಿಗೆ ಚಾನೆಲ್ ಕೊಟ್ಟ ಹಣವೇಷ್ಟು ಗೊತ್ತೇ..?

ವಂಶಿಕ ಅಂಜನಿ ಕಶ್ಯಪ, ಹೌದು ಕನ್ನಡ ಸಿನಿಮಾರಂಗದ ಖ್ಯಾತ ನಟರಾಗಿ ಜೊತೆಗೆ ಬಾಲ ಕಲಾವಿದರೂ ಆಗಿ ಮೊದಲೇ ಹೆಸರು ಮಾಡಿದ್ದ ಈಗ ತಮ್ಮದೇ ಆದ ಸಕತ್ ನಿರೂಪಣೆಯನ್ನು ಕೂಡ ಮಾಡಿ ಹೆಚ್ಚು ಸದ್ದು ಮಾಡಿದ ನಟ ಮಾಸ್ಟರ್ ಆನಂದ್ ಎಲ್ಲರಿಗೂ ಪರಿಚಯ ಇದ್ದಾರೆ. ಹೌದು ಇವರ ಪುತ್ರಿಯಾಗಿ ಕಿರುತೆರೆಯಲ್ಲಿ ಗಮನ ಸೆಳೆಯುತ್ತಿದ್ದಾರೆ ವಂಶಿಕಾ ಅಂಜನಿ ಕಶ್ಯಪ. ಮಾಸ್ಟರ್ ಆನಂದ್ ಅವರಂತೆ ಚಟಪಟನೆ ಮಾತನಾಡುತ್ತ ವಂಶಿಕಾ ಕಾಲಿಟ್ಟ ಕಡೆಯಲ್ಲ ತನ್ನ ಹವಾ ಎಬ್ಬಿಸಿದ್ದಾಳೆ ಎಂದು ಹೇಳಿದರೆ ತಪ್ಪಾಗಲಾರದು. ಕಾರಣ ಅಷ್ಟು ಅತ್ಯದ್ಭುತ ಅಭಿನಯ ವಂಶಿಕ ಅವರಲ್ಲಿದೆ. ಸಣ್ಣ ಹುಡುಗಿಯಾದರು ಸಹ ಬಹಳ ದೊಡ್ಡ ಕಲಾವಿದೆ ಎಂಬಂತೆ ಸಾಕಷ್ಟು ಜನರ ಮನ ಗೆದ್ದಿದ್ದಾಳೆ. ಹಾಗೆ ಕನ್ನಡಿಗರ ಜನಪ್ರಿಯತೆ ಕೂಡ ಕಳಿಸಿಕೊಂಡಿದ್ದಾಳೆ. 

ವಂಶಿಕ ಅಂಜನಿ ಕಶ್ಯಪ ಆರಂಭದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಎಂಟ್ರಿ ಪಡೆದಳು. ಮೊದಲ ಹಂತದಲ್ಲಿ ತನ್ನ ತಾಯಿ ಅವರ ಜೊತೆ ಅಭಿನಯ ಮಾಡಿ ಯಶಸ್ವಿಯಾದವರು. ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಗೆದ್ದು 5 ಲಕ್ಷ ಹಣವನ್ನು ಬಹುಮಾನವನ್ನಾಗಿ ಚಾನೆಲ್ ಕಡೆಯವರಿಂದ  ಗಿಟ್ಟಿಸಿಕೊಂಡಿದ್ದರು. ಹೌದು ವಂಶಿಕಾ ಅಂಜನಿ ಕಶ್ಯಪರ ಪ್ರತಿಭೆ ನೋಡಿ ಕಲರ್ಸ್ ಕನ್ನಡದವರು ಮತ್ತೆ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಕಾರ್ಯಕ್ರಮಕ್ಕೂ ಕೂಡ ಕರೆತಂದಿದ್ದರು. ಹೌದು  ಇಲ್ಲಿಯೂ ಕೂಡ ವಂಶಿಕ ತನ್ನ ಅಭಿನಯದ ಮೂಲಕ ಎಲ್ಲರನ್ನ ರಂಜಿಸಿದ್ದಾಳೆ. ಈಕೆಯ ಪಾರ್ಟ್ನರ್ ಶಿವು ಬಗ್ಗೆ ನಾವು ಏನನ್ನೂ ಹೇಳಲು ಆಗುವುದಿಲ್ಲ. ಅಷ್ಟು ದೊಡ್ಡ ಕಾಮಿಡಿ ನಟ ಆಗಿ ಎಲ್ಲರನ್ನ ನಗೆಯಲ್ಲಿ ತೇಲಾಡುಸುತ್ತಾರೆ.

ಹೌದು ಈ ಶಿವು ಕೂಡ ಅತ್ಯದ್ಭುತ ಅಭಿನಯದ ಮೂಲಕ ಮೊದಲೇ ಹೆಸರು ಮಾಡಿದ್ದವರು ಎನ್ನಬಹುದು. ನಂತರ ಈ ಕಾರ್ಯಕ್ರಮಕ್ಕೆ ಬಂದ ಮೇಲೆ ಇನ್ನಷ್ಟು ಖ್ಯಾತಿ ಶಿವು ಅವರು ಹೊಂದಿದ್ದಾರೆ. ಗಿಚ್ಚ್ ಗಿಲಿ ಗಿಲಿ ಕಾರ್ಯಕ್ರಮದ ಮೊದಲ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ ಶಿವು ಮತ್ತು ವಂಶಿಕಾ. ಆಕ್ಟರ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ ಶಿವು. ಹಾಗೆ ನಾನ್ ಆಕ್ಟರ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ವಂಶಿಕ ಗೆದ್ದುಕೊಂಡಿದ್ದಾಳೆ. ಹಾಗೆ ನಿವೇದಿತಾ ಗೌಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದ್ದಾರೆ ಎನ್ನಲಾಗಿದೆ. ಈ ರನ್ನರ್ ಸ್ಥಾನಕ್ಕೆ ಮೂರು ಲಕ್ಷ ನಗದು ಚಾನೆಲ್ ವತಿಯಿಂದ ಕೊಟ್ಟಿದ್ದು, ಮೊದಲನೇ ಸ್ಥಾನ ಗೆದ್ದ ಶಿವು ಮತ್ತು ವಂಶಿಕಾಗೆ 5 ಲಕ್ಷ ನೀಡಿದ್ದಾರೆ ಎಂದು ತಿಳಿದು ಬಂದಿದೆ..ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....