Rashmika Mandanna : ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಸ್ಪೋಟಕ ಭವಿಷ್ಯ ನುಡಿದ ಜ್ಯೋತಿಷಿ ಏನೆಂದರು

By Infoflick Correspondent

Updated:Wednesday, July 27, 2022, 16:11[IST]

Rashmika Mandanna : ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಸ್ಪೋಟಕ ಭವಿಷ್ಯ ನುಡಿದ ಜ್ಯೋತಿಷಿ ಏನೆಂದರು

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಕೂರ್ಗ್​ ಬ್ಯೂಟಿ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಕುರಿತು ಸ್ಪೋಟಕ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ವೇಣು ಸ್ವಾಮಿ ಸೆಲೆಬ್ರಿಟಿಗಳ ಜಾತಕವನ್ನು ನೋಡುತ್ತಾರೆ. ಅವರ ಜೀವನದಲ್ಲಿ ಮುಂಬರುವ ಘಟನೆಗಳನ್ನು ಊಹಿಸುತ್ತಾರೆ.ರಶ್ಮಿಕಾ ರಾಜಕೀಯಕ್ಕೆ ಬರುತ್ತಾರೆ ಕಾಂಗ್ರೆಸ್ ಪಕ್ಷದ ಪರವಾಗಿ ರಶ್ಮಿಕಾ ಕರ್ನಾಟಕದಿಂದ ಸಂಸದೆಯಾಗಿ ಸ್ಪರ್ಧಿಸಲಿದ್ದಾರೆ.  ಎಂದು ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.  

ಹೈದರಾಬಾದ್‌ನಲ್ಲಿರುವ ರಶ್ಮಿಕಾ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಈಗ ಅವರು ನ್ಯಾಷನಲ್‌ ಕ್ರಶ್ ಆಗಿದ್ದಾರೆ. ಚಿತ್ರಕ್ಕೆ 6 ರಿಂದ 7 ಕೋಟಿ ರೂಪಾಯಿ ಸಂಬಾವನೆ ತೆಗೆದುಕೊಳ್ಳುತ್ತಿದ್ದಾರೆ. ಅವರು ಶೀಘ್ರದಲ್ಲೇ ಸಂಸದೆಯೂ ಆಗಲಿದ್ದಾರೆ. ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆಗೆ ಆಯ್ಕೆಯಾಗಲಿದ್ದಾರೆ. ಇದನ್ನು ಅವರ ಜಾತಕದಲ್ಲಿ ಬರೆಯಲಾಗಿದೆ. ರಶ್ಮಿಕಾಗೆ ಆ ಯೋಗವಿದೆ. ಹಾಗಾಗಿ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗಲಿದ್ದಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

ವೇಣು ಸ್ವಾಮಿ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಮೇಲಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆ ಸಂಸದರಾಗುತ್ತಾರೆ ಎನ್ನುತ್ತಾರೆ.