#Metoo : ಮತ್ತೊಂದು ಮೀ ಟೂ ಪ್ರಕರಣ ಬಯಲು : ನಟಿಯ ಮೇಲೆ ಗಂಭೀರ ಆರೋಪ ಮಾಡಿದ ನಿರ್ಮಾಪಕ
Updated:Wednesday, April 27, 2022, 13:54[IST]

ಮೀ ಟೂ ಅಭಿಯಾನ ಸೈಲೆಂಟ್ ಆಗಿದೆ ಎನ್ನುವಾಗಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಹಾಗೂ ಲೈಂಗಿಕ ಶೋಷಣೆಗೆ ಗುರಿಯಾದ ಹೆಣ್ಣಿನ ಬೆಂಬಲ ನೀಡುವವರು. ಈಗ ಮಲಯಾಳಂನ ಮತ್ತೊಬ್ಬ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟ, ನಿರ್ಮಾಪಕ ವಿಜಯ್ ಬಾಬು ಮೇಲೆ ಯುವತಿ ಯೋರ್ವಳು ದೂರು ನೀಡಿದ್ದಾರೆ. ಪೊಲೀಸರು ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ವಾರ ಅಂದರೆ, ಏಪ್ರಿಲ್ 22 ರಂದು ಯುವತಿ ಕೇರಳದ ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ವಿಜಯ್ ಬಾಬು ಅವರು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಗೆ ಭರವಸೆ ನೀಡಿದ್ದಾರೆ. ಭರವಸೆ ನೀಡಿದ ಬಳಿಕ ಕೊಚ್ಚಿಯ ಎರ್ನಾಕುಲಂ ಫ್ಲ್ಯಾಟ್ನಲ್ಲಿ ವಿಜಯ್ ಬಾಬು ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ತನಗೆ ವಿಜಯ್ ಬಾಬು ಅವರಿಂದ ಮೋಸವಾಗಿದೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ಆರೋಪ ಮಾಡಿದ್ದಾಳೆ.
ಕೋಝಿಕೋಡ್ ನಿವಾಸಿಯಾಗಿರುವ ಯುವತಿಯು, ವಿಜಯ್ ಬಾಬು ವಿರುದ್ಧ ಅತ್ಯಾಚಾರದ ಜೊತೆಗೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಯುವತಿ ದೂರು ನೀಡಿದ್ದರೂ ಕೂಡ ಇದುವರೆಗೂ ಪೊಲೀಸರು ವಿಜಯ್ ಬಾಬು ಅವರನ್ನು ಕರೆಸಿ ಯಾವುದೇ ವಿಚಾರಣೆಯನ್ನು ನಡೆಸಿಲ್ಲ. ವಿಚಾರಣೆ ನಡೆಸಿ ದೊಡ್ಡ ಸುದ್ದಿ ಮಾಡುವ ಬದಲಾಗಿ ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಇದೀಗ ಯುವತಿ ಆರೋಪಿಸಿದ್ದಾಳೆ. ಯುವತಿಯ ಆರೋಪದ ಬಳಿಕ ಜನರು ಆಕ್ರೋಶಗೊಂಡಿದ್ದು, ಇದು ಗಂಭೀರ ಪ್ರಕರಣವಾಗಿದ್ದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗಲಾಟೆ ಮಾಡಿದ್ದಾರೆ.
ವಿಜಯ್ ಬಾಬು ಫ್ರೈಡೇ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಜಯ್ ಬಾಬು ಅವರು ನಿರ್ಮಿಸಿದ್ದಾರೆ. 1983ರಲ್ಲಿ ಬಾಲ ನಟನಾಗಿ ವಿಜಯ್ ಬಾಬು ಮಲೆಯಾಳಂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಸದ್ಯ ವಿಜಯ್ ಬಾಬು ಮಳಯಾಳಂನ ಭಾರೀ ಬೇಡಿಕೆಯ ನಟನಾಗಿದ್ದಾರೆ.