ಕೆಜಿಎಫ್ 2 ಚಿತ್ರದ ಸಿನಿಮಾ ರಿಲೀಸ್ ಬಗ್ಗೆ ಪ್ರೊಡ್ಯುಸರ್ ವಿಜಯ್ ಕಿರಗಂದೂರು ಹೇಳಿದ್ದೇನು..?

By Infoflick Correspondent

Updated:Saturday, April 16, 2022, 19:09[IST]

ಕೆಜಿಎಫ್ 2 ಚಿತ್ರದ   ಸಿನಿಮಾ  ರಿಲೀಸ್ ಬಗ್ಗೆ ಪ್ರೊಡ್ಯುಸರ್ ವಿಜಯ್ ಕಿರಗಂದೂರು ಹೇಳಿದ್ದೇನು..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2 ರಿಲೀಸ್ ಗೆ ಇನ್ನು ಮೂರೇ ದಿನ ಬಾಕಿ ಇದೆ. ಇದೇ ಗುರುವಾರ ಚಿತ್ರ ತೆಎ ಮೇಲೆ ಅಪ್ಪಳಿಸಲಿದ್ದು, ವಿಶ್ವಾದ್ಯಂತ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವೆಡೆ ಆನ್ ಲೈನ್ ಟಿಕೆಟ್ ಗಳು ಕೂಡ ಸೋಲ್ಡ್ ಔಟ್ ಆಗಿವೆ. ಏಪ್ರಿಲ್ 14 ರಂದು 6000ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಕೆಜಿಎಫ್ 2 ಚಿತ್ರ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಈ ಬಗ್ಗೆ ಸಿನಿಮಾ ಪ್ರೊಡ್ಯುಸರ್ ವಿಜಯ್ ಕಿರಗಂದೂರು ಏನ್ ಹೇಳಿದ್ದಾರೆ ಗೊತ್ತಾ..?

ಚಿತ್ರತಂಡ ಈಗ ಸಿನಿಮಾ ರಿಲೀಸ್ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕೆಜಿಎಫ್ 2 ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್, ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರೈ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಚಿತ್ರತಂಡ ಥಿಯೇಟರ್ ಗಳಲ್ಲಿ ಸ್ಟ್ಯಾಂಡಿ ಹಾಗೂ ಪೋಸ್ಟರ್ ಗಳನ್ನು ಅಳವಡಿಸಲು ತಯಾರಿ ನಡೆಸುತ್ತಿದೆ. ಡಿಫರೆಂಟ್ ಆಗಿ ಸ್ಟ್ಯಾಂಡಿ ಹಾಗೂ ಪೋಸ್ಟರ್ ಗಳನ್ನು ಸಿದ್ಧ ಪಡಿಸಿದೆ. 

ಇದೇ ಸಂದರ್ಭದಲ್ಲಿ ಮಾತನಾಡಿರುವ ವಿಜಯ್ ಕಿರಗಂದೂರು ಅವರು, ಭಾರತದಾದ್ಯಂತ ಆರರಿಂದ ಐದೂವರೆ ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ. ಇನ್ನು ಯುಕೆ, ಯುಎಸ್ ಸೇರಿದಂತೆ ವಿದೇಶಗಳಲ್ಲೂ ಚಿತ್ರ ರಿಲೀಸ್ ಆಗಲಿದ್ದು, ಹಿಂದಿ, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲಿದ್ದಾರಂತೆ. ಇನ್ನು ಕರ್ನಾಟಕದಲ್ಲಿ 500 ರಿಂದ 550 ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಚಿತ್ರ ರಿಲೀಸ್ ಆಗ್ತಿದೆಯಂತೆ. 500 ಚಿತ್ರ ಮಂದಿರಗಳಲ್ಲಿ ಕನ್ನಡ ವರ್ಷನ್ ರಿಲೀಸ್ ಮಾಡಲಿದ್ದು, ಉಳಿದ 50 ಥಿಯೇಟರ್ ಗಲಲ್ಲಿ ತೆಲುಗು, ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತದೆ ಎಂದು ಹೇಳಿದ್ದಾರೆ.