Rashmika Mandanna : ವಿಜಯ್ ದೇವರಕೊಂಡ ರಶ್ಮಿಕಾ ಇನ್ನು ನನ್ನ ಡಾರ್ಲಿಂಗ್ ಎಂದು ಹೇಳಿದ್ಯಾಕೆ ? ಸತ್ಯ ಏನು ನೋಡಿ

By Infoflick Correspondent

Updated:Saturday, August 6, 2022, 14:40[IST]

Rashmika Mandanna :  ವಿಜಯ್ ದೇವರಕೊಂಡ  ರಶ್ಮಿಕಾ ಇನ್ನು ನನ್ನ ಡಾರ್ಲಿಂಗ್ ಎಂದು ಹೇಳಿದ್ಯಾಕೆ ? ಸತ್ಯ ಏನು ನೋಡಿ

ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ವಿಜಯ್ ದೇವರಕೊಂಡ  ಮತ್ತು ರಶ್ಮಿಕಾ ಮಂದಣ್ಣ  ಅವರ ಸಂಬಂಧ ಆಗಾಗ್ಗೆ ಸುದ್ದಿಯಲ್ಲಿರುತ್ತೆ. ಇತ್ತೀಚೆಗೆ, ವೀಡಿಯೊವೊಂದು ವೈರಲ್ ಆದ ನಂತರ ಇಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಗೆ ವಿಜಯ್ ದೇವರಕೊಂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನೀನು ಯಾವಾಗಲು ಸುಂದರವಾಗಿ ಕಾಣುತ್ತೀಯಾ ಎಂದಿದ್ದರು. ಅಲ್ಲದೆ ಕಾಫಿ ವಿತ್ ಕರಣ್ ಶೋನಲ್ಲೂ ರಶ್ಮಿಕಾ ನನ್ನ ಡಾರ್ಲಿಂಗ್ ಎಂದು ವಿಜಯ್ ದೇವರಕೊಂಡ ಹೇಳಿದ್ದರು. ಅಷ್ಟಕ್ಕೂ ಇವರಿಬ್ಬರ ನಡುವಿನ ಸಂಬಂಧದ ಸತ್ಯ ಏನು? ಇಲ್ಲಿದೆ ಮಾಹಿತಿ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪ್ರೀತಿಯ ನ್ಯೂಸ್ ಪೋರ್ಟರ್ ವರದಿ ಮಾಡಿದೆ, ಗೀತಾ ಗೋವಿಂದ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿಗಳು ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಆ ಪ್ರೀತಿ ಹೆಚ್ಚು ದಿನ ಉಳಿಯಲ್ಲಿಲ್ಲ. ಎರಡು ವರ್ಷಗಳ ಹಿಂದೆಯೇ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿತ್ತು ಎಂದು ವರದಿಯಾಗಿದೆ. ದೂರವಾದ ಬಳಿಕ ರಶ್ಮಿಕಾ ಹಾಗೂ ವಿಜಯ್ ಉತ್ತಮ ಸಂಬಂಧ ಹೊಂದಿದ್ದಾರೆ.    

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2 ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ, ಈಗ ಅಂಥದ್ದು ಇವರಿಬ್ಬರ ನಡುವೆ ಇಲ್ವಂತೆ. ವರದಿಗಳ ಪ್ರಕಾರ, 2017 ರಲ್ಲಿ ರಶ್ಮಿಕಾ ಅವರ ನಿಶ್ಚಿತಾರ್ಥದ ಬ್ರೇಕಪ್ ನಂತರ, ಇಬ್ಬರೂ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದರು, ಆದರೆ ಅವರ ಸಂಬಂಧವು ಎರಡು ವರ್ಷಗಳ ಹಿಂದೆಯೇ ಕೊನೆಗೊಂಡಿತು.

ಈ ಸೂಪರ್‌ ಹಿಟ್‌ ಜೋಡಿ ಬೇರೆಯಾಗಲು ಕಾರಣ ಏನು ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಸದ್ಯ ರಶ್ಮಿಕಾ ಸಿಂಗಲ್‌ ಅಂತೆ. ಬ್ರೇಕಪ್‌ ಆದ್ಮೇಲೂ ರಶ್ಮಿಕಾ ಹಾಗೂ ವಿಜಯ್‌ ಒಳ್ಳೆ ಫ್ರೆಂಡ್ಸ್‌ ಆಗಿದ್ದಾರಂತೆ. ಹಾಗಾಗಿ ಈ ಜೋಡಿ ಮತ್ತೆ ಒಂದಾಗಬಹುದು ಅನ್ನೋದು ಅಭಿಮಾನಿಗಳ ನಿರೀಕ್ಷೆ.