ಗರಂ ಅದ ವಿಜಯಲಕ್ಷ್ಮೀ ನಾನು ಸಹಾಯ ಮಾಡಿದ ಸುದ್ದಿ ಏಕೆ ಹೇಳುವದಿಲ್ಲ ? ವೀಡಿಯೋದಲ್ಲಿ ಏನಿದೆ ನೋಡಿ..

By Infoflick Correspondent

Updated:Wednesday, June 8, 2022, 22:08[IST]

ಗರಂ  ಅದ ವಿಜಯಲಕ್ಷ್ಮೀ  ನಾನು ಸಹಾಯ ಮಾಡಿದ ಸುದ್ದಿ ಏಕೆ ಹೇಳುವದಿಲ್ಲ  ? ವೀಡಿಯೋದಲ್ಲಿ ಏನಿದೆ ನೋಡಿ..

ಹಿರಿಯ ನಟಿ ವಿಜಯಲಕ್ಷ್ಮೀ ಅವರಿಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಈಗಾಗಲೇ ಸುಮಾರು ಒಂದೂವರೆ ವರ್ಷದಿಂದ ಹಲವರ ಮೇಲೆ ಆರೋಪಗಳನ್ನು ಮಾಡುತ್ತಾ ನೂರಾರು ವೀಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಇದೀಗ ಮತ್ತೊಂದು ವೀಡಿಯೋ ಮಾಡಿರುವ ವಿಜಯಲಕ್ಷ್ಮಿ ಅವರು ಎಲ್ಲರಿಗೂ ತುಂಬಾ ಬೇಸರ ಮಾಡಿದ್ದಾರೆ. ವಿಜಯಲಕ್ಷ್ಮೀ ಅವರ ನಡೆಗೆ ಕೆಲವರು ಹುಚ್ಚು ಹಿಡಿದಿದೆ ಎಂದರೆ, ಇನ್ನೂ ಕೆಲವರು ಪಬ್ಲಿಸಿಟಿಗೋಸ್ಕರ ಹೀಗೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಆದರೆ ಯಾವುದು ಸತ್ಯವೋ ಆ ದೇವರೇ ಬಲ್ಲ. 

ಮೊದ ಮೊದಲು ಕೆಲ ತಮಿಳು ನಟರನ್ನು ಬೈದಿದ್ದ ವಿಜಯಲಕ್ಷ್ಮೀ ಅವರು ನಟಿ ಜಯಪ್ರದ, ನಟ ವಿಶಾಲ್, ಸೃಜನ್ ಲೋಕೇಶ್ ಹೀಗೆ ಸಾಲು ಸಾಲಾಗಿ ಎಲ್ಲರನ್ನೂ ಬೈದಿದ್ದಾರೆ. ಪತ್ರಕರ್ತರನ್ನೂ ಬಿಡದ ವಿಜಯಲ್ಕಷ್ಮೀ ಅವರು ಕೆಲವು ಕಡೆಗಳಲ್ಲಿ ಕೆಟ್ಟ ಪದಗಳನ್ನು ಕೂಡ ಬಳಸಿದ್ದಾರೆ. ವಿಜಯಲಕ್ಷ್ಮೀ ಅವರ ನಡೆಗೆ ಎಲ್ಲರೂ ಬೇಸರವನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಅನಾಥಾಶ್ರಮವನ್ನು ನಡೆಸುತ್ತಿರುವ ಯೋಗೇಶ್ ಎಂಬುವರ ಮೇಲೂ ಹಲವು ಆರೋಪಗಳನ್ನು ಮಾಡಿ ವೀಡಿಯೋಗಳನ್ನು ಹರಿ ಬಿಟ್ಟಿದ್ದರು. ಹಣದ ವಿಚಾರವಾಗಿ ತುಂಬಾ ದೊಡ್ಡ ವಿವಾದವನ್ನು ಸೃಷ್ಟಿಸಿದ್ದರು.  

ಇದೀಗ ಕಲಾವಿದರ ಕಟ್ಟಡ ನಿರ್ಮಾಣದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ನಾನು ಮಾಡುವ ಕೆಟ್ಟ ಮಾತುಗಳನ್ನು ಪ್ರಸಾರ ಮಾಡಿ ದೊಡ್ಡದಾಗಿ ನನ್ನ ಬಗ್ಗೆ ನೆಗೆಟಿವ್ ಸುದ್ದಿ ಮಾಡುವವರಿಗೆ ನಾನು ಮಾಡಿದ ಒಳ್ಳೆಯ ಕೆಲಸಗಳು ನೆನಪಿಲ್ಲವಾ.? ಯೋಗೇಶ್ ಹಾಗೆ ಹೀಗೆ ಎಂದು ಹೇಳಿದ್ದಾರೆ. ಅಲ್ಲದೇ, ಕಲಾವಿದರ ಕಟ್ಟಡ ನಿರ್ಮಾಣಕ್ಕೆ ನಾನು ಅದಾಗಲೇ ನನ್ನ ಒಂದು ಸಿನಿಮಾದ ಸಂಭಾವನೆಯ ಹಣವನ್ನು ನೀಡಿದ್ದೆ. ಈ ಬಗ್ಗೆ ಯಾರೂ ಸುದ್ದಿ ಮಾಡಿಲ್ಲವೇಕೆ ಎಂದೆಲ್ಲಾ ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. ( video credit : suddi mane )