Vijaya Lakshmi : ನಾನು ಸತ್ತರೆ ಅಂತಿಮ ಸಂಸ್ಕಾರದ ಬಳಿಕ ನನ್ನ ಬೂದಿಯನ್ನು ಶೃಂಗೇರಿಯಲ್ಲಿ ಬಿಡಿ ಎಂದ ವಿಜಯಲಕ್ಷ್ಮಿ..! ಮತ್ತೆ ಭಾವುಕರಾಗಿದ್ದೇಕೆ

By Infoflick Correspondent

Updated:Friday, June 3, 2022, 19:28[IST]

Vijaya Lakshmi :   ನಾನು ಸತ್ತರೆ ಅಂತಿಮ ಸಂಸ್ಕಾರದ ಬಳಿಕ ನನ್ನ ಬೂದಿಯನ್ನು ಶೃಂಗೇರಿಯಲ್ಲಿ ಬಿಡಿ ಎಂದ ವಿಜಯಲಕ್ಷ್ಮಿ..! ಮತ್ತೆ ಭಾವುಕರಾಗಿದ್ದೇಕೆ

ದಕ್ಷಿಣ ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ನಾಗಮಂಡಲ ಚಿತ್ರದ ನಟಿ ವಿಜಯಲಕ್ಷ್ಮಿ ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ನಮಗೂ ನಿಮಗೂ ಹೊಸದೇನಲ್ಲ. ಯಾವುದಾದರೊಂದು ವಿಚಾರಕ್ಕೆ ನಟಿ ವಿಜಯಲಕ್ಷ್ಮಿ ತಟ್ಟನೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಅವರ ಅನಿಸಿಕೆಯನ್ನು ಇದ್ದಕ್ಕಿದ್ದಂತೆ ಹಂಚಿಕೊಳ್ಳುತ್ತಾರೆ. ತಪ್ಪು ಇರಲಿ, ಸರಿ ಇರಲಿ ಕ್ಷಮೆ ಕೇಳುವ ಮೂಲಕ ಅಥವಾ ಸಹಾಯ ಬೇಡುವ ಮೂಲಕ, ಅವರಿಗೆ ಅನಿವಾರ್ಯತೆ ಇದ್ದಾಗ ಹೆಚ್ಚು ಮಾತಾಡೋ ವಿಜಯಲಕ್ಷ್ಮಿ ಅವರು ಇದೀಗ ಮತ್ತೊಂದು ವಿಡಿಯೋ ಮೂಲಕವೇ ಈಗ ಕಾಣಿಸಿಕೊಂಡಿದ್ದಾರೆ. ಹೌದು ನಟಿ ವಿಜಯಲಕ್ಷ್ಮಿ ಅವರು ಹೇಳುವ ಹಾಗೆ ನನ್ನ ಮೇಲೆ ಆಗಲಿ, ಅಥವಾ ನಮ್ಮ ಅಕ್ಕನ ಮೇಲೆ ಆಗಲಿ, ಹೆಣ್ಣು ಅಂದಾಗ ಕರುಣೆ ಇರಲಿ, ನಮ್ಮ ಮೇಲೆಯೂ ಕನಿಕರ ತೋರಿ ಎಂದಿದ್ದಾರೆ.

ಹಾಗೆ ನಾನು ಸತ್ತಾಗ ನನ್ನ ಅಂತಿಮ ಸಂಸ್ಕಾರ ಮುಗಿಸಿದ ಬಳಿಕ ನನ್ನ ಬೂದಿಯನ್ನು ಶೃಂಗೇರಿ ನದಿಯಲ್ಲಿ ಬಿಡಿ ಎಂದು ಭಾವುಕರಾಗಿದ್ದಾರೆ. ಹೌದು ನಾನು ತಮಿಳುನಾಡು ಮತ್ತು ಕರ್ನಾಟಕ ಅಂತ ಬಂದಾಗ, ನಿಮಗೆ ಅಪ್ಪ ಅಮ್ಮ ಯಾರು ಇಷ್ಟ ಎಂಬ ಪ್ರಶ್ನೆ ಬಂದರೆ, ನಾನು ಕರ್ನಾಟಕಾನೆ ಎಂದೇ ಉತ್ತರ ನೀಡುತ್ತೇನೆ. ಕರ್ನಾಟಕ ನನ್ನ ಮೊದಲ ಆದ್ಯತೆ ಆಗಿರುತ್ತದೆ ಎಂದರು. ಹೌದು ನಟಿ ವಿಜಯಲಕ್ಷ್ಮಿ ಅವರು ಹೇಳು ಹಾಗೆ, ಈ ಚಲನಚಿತ್ರ ವಾಣಿಜ್ಯ ಮಂಡಳಿ ಅವರಿಗೆ ಮತ್ತು ಮಾಧ್ಯಮದವರಿಗೆ ನನ್ನಿಂದ ನಿಮಗೆ ತೊಂದರೆ ಆಗಿದ್ದರೆ ಕ್ಷಮೆ ಇರಲಿ, ಇದೀಗ ಯಾರು ಕೂಡ ನನ್ನ ಜೊತೆ ಮಾತನಾಡುತ್ತಿಲ್ಲ. ನನ್ನ ಅಕ್ಕನಿಗೆ ಆಗಲಿ, ನನಗಾಗಲಿ ಹಿಂದು ಮುಂದು ಯಾರು ಇಲ್ಲ, ಅವಳು ಕೂಡ ಗಂಡ ಮಕ್ಕಳು ಇಲ್ಲದೆ ನೋವನ್ನು ಅನುಭವಿಸುತ್ತಿದ್ದಾಳೆ.   

ನಾನು ಕೂಡ ಗಂಡ ಮಕ್ಕಳು ಮತ್ತು ತಾಯಿ ಇಲ್ಲದೆ ತುಂಬಾ ಕಷ್ಟದ ಜೀವನ ನಡೆಸುತ್ತಿದ್ದೇವೆ. ಹೀಗಿರುವಾಗ ಟೀಕಿಸುವ ಮಾತುಗಳನ್ನು ನಮ್ಮ ಮೇಲೆ ಆಡಬೇಡಿ. ನನಗೆ ಏನು ಸರಿ ಅನಿಸುತ್ತೋ ಅದನ್ನೇ ಮಾಡಿದ್ದೇನೆ. ಈ ಮನುಷ್ಯರು ತಪ್ಪು ಮಾಡುತ್ತಾರೆ, ತಿದ್ದಿಕೊಂಡು ಹೋಗುತ್ತಾರೆ ಅವರಲ್ಲಿ ನಾನು ಕೂಡ ಒಬ್ಬಳು. ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ, ಅದು ತಪ್ಪಾದಲ್ಲಿ ಕ್ಷಮೆ ಇರಲಿ. ಕರ್ನಾಟಕದ ಅಭಿಮಾನಿಗಳಿಗೆ ನಾನು ಚಿರಋಣಿ ನಮ್ಮ ಮೇಲೆ ಸ್ವಲ್ಪ ಕರುಣೆ ಇರಲಿ ಕನಿಕರ ಇರಲಿ ಎಂದಿದ್ದಾರೆ ವಿಜಯಲಕ್ಷ್ಮಿ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು... ( video credit : suddi mane )