ವಿಜಯ್ ರಾಘವೇಂದ್ರ ಅವರಿಗೆ ಪ್ರೀತಿ ಹುಟ್ಟಿದ್ದು ಕಾಫೀ ಡೇನಲ್ಲಿ ಯಾರ ಜೊತೆ ಗೊತ್ತಾ..?

By Infoflick Correspondent

Updated:Wednesday, June 1, 2022, 07:46[IST]

ವಿಜಯ್ ರಾಘವೇಂದ್ರ ಅವರಿಗೆ ಪ್ರೀತಿ ಹುಟ್ಟಿದ್ದು ಕಾಫೀ ಡೇನಲ್ಲಿ ಯಾರ ಜೊತೆ  ಗೊತ್ತಾ..?

ಸ್ಯಾಂಡಲ್ ವುಡ್ ನಲ್ಲಿ ಬಹಳ ಸರಳ ಹಾಗೂ ಸಜ್ಜನಿಕೆಯ ನಟ ಎಂದರೆ ಅದು ಚಿನ್ನಾರಿಮುತ್ತ. ಈಗಲೂ ಚಿನ್ನಾರಿಮುತ್ತ ಎಂದೇ ಚಿರಪರಿಚಿತರಾದ ನಟ ವಿಜಯ್ ರಾಘವೇಂದ್ರ ಅವರ ಸಿನಿಮಾಗಳು ಅದ್ಭುತವಾಗಿರುತ್ತವೆ. ಬಾಲನಟನಾಗಿ ಸಿನಿಮಾರಂಗಕ್ಕೆ ಬಂದ ವಿಜಯ್ ರಾಘವೇಂದ್ರ  ಅವರು ಈಗ ಸಿನಿಮಾ ರಂಗ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಸದಾ ವಿಭಿನ್ನ ಬಗೆಯ ಪಾತ್ರಗಳ ಮೂಲಕ, ಅದ್ಭುತವಾದ ನಟನೆಯಿಂದಾಗಿ ಅಭಿಮಾನಿಗಳನ್ನು ರಂಜಿಸುತ್ತಿರುವ ನಮ್ಮ ಚಿನ್ನಾರಿ ಮುತ್ತ ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ವಿಜಯ್ ರಾಘವೇಂದ್ರ ನಟಿಸುತ್ತಿರುವ ಹೊಸ ಚಿತ್ರದ ಹೆಸರು ರಾಘು. ಈ ಚಿತ್ರಕ್ಕೆ ಆನಂದ್ ರಾಜ್ ಆಕ್ಷನ್ ಕಟ್ ಹೇಳಿದ್ದು, ಇವರು ಈ ಮೊದಲು ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.  ರಾಘು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಅಂದಹಾಗೇ ರಾಘು ಸಿನಿಮಾ ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದೆ. ಕನ್ನಡದಲ್ಲಿ ಇದೊಂದು ಹೊಸಬಗೆಯ ಸಿನಿಮಾ ಎಂದು ಹೇಳಲಾಗಿದೆ. ವಿಜಯ್ ರಾಘವೇಂದ್ರ ಅವರು ಹಿಂದೆಂದೂ ಮಾಡದ ವಿಭಿನ್ನವಾದ ಪಾತ್ರಕ್ಕೆ ಜೀವ ತುಂಬಲಿದ್ದಾರೆ.   

ಡಿಕೆಎಸ್ ಸ್ಟುಡಿಯೋಸ್ ಹಾಗೂ ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ರಣ್ವೀತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟ ರಾಘು ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಬ್ಯಾಂಗ್, ಫ್ಯಾಮಿಲಿ ಪ್ಯಾಕ್ ಸಿನಿಮಾಗಳ ಖ್ಯಾತಿಯ ಉದಯ್ ಲೀಲಾ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿರಲಿದೆ. ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಲಿದ್ದಾರೆ. ಅಥರ್ವ್ ಆರ್ಯ ಸಂಭಾಷಣೆಯನ್ನು ಬರೆಯುತ್ತಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಸಿನಿಮಾಗಳ ಜೊತೆಗೆ ಕಿರುತೆರೆ ರಿಯಾಲಿಟಿ ಶೋಗಳಲ್ಲೂ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಡ್ಯಾನ್ಸಿಂಗ್ ಚಾಮಪಿಯನ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿದ್ದಾರೆ.

ಇನ್ನು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರದ್ದು ಲವ್ ಮ್ಯಾರೇಜ್.  ಸ್ಪಂದನಾ ಅವರನ್ನು ಮಲ್ಲೇಶ್ವರಂ ನ ಕಾಫೀಡೇ ನಲ್ಲಿ ನೋಡಿದ್ದರಂತೆ. ಮೊದಲ ಬಾರಿಯೇ ಇವರಿಬ್ಬರ ನಡುವೆ ಸಂಗೀತದ ವಿಚಾರಕ್ಕೆ ಫೈಟ್ ಆಗಿತ್ತಂತೆ.. ಮತ್ತೆ ಮೂರು ವರ್ಷಗಳ ಬಳಿಕ ಶೇಷಾದ್ರಿಪುರಂ  ಕಾಫಿ ಡೇನಲ್ಲಿ  ಮತ್ತೆ ಭೇಟಿಯಾದರಂತೆ. ಆಗ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರು ಮಾತನಾಡಿದರಂತೆ. ಅಲ್ಲಿ ಹುಟ್ಟಿದ ಪ್ರೀತಿ ಮನೆಯಲ್ಲಿ ಮಾತನಾಡಿದರಂತೆ. ಇದೀಗ ಇವರಿಗೆ ಮುದ್ದಾದ ಮಗನೊಬ್ಬನಿದ್ದಾನೆ.