ಕೆಜಿಎಫ್2 ನ್ನು ಮೀರಿಸಿತೆ ಮೊದಲ ದಿನದ ವಿಕ್ರಾಂತ್ ರೋಣ ಕಲೆಕ್ಷನ್ ? ಇಲ್ಲಿದೆ ಗಳಿಕೆಯ ಲೆಕ್ಕಾಚಾರ

By Infoflick Correspondent

Updated:Friday, July 29, 2022, 08:34[IST]

ಕೆಜಿಎಫ್2 ನ್ನು ಮೀರಿಸಿತೆ ಮೊದಲ ದಿನದ ವಿಕ್ರಾಂತ್ ರೋಣ ಕಲೆಕ್ಷನ್ ? ಇಲ್ಲಿದೆ ಗಳಿಕೆಯ ಲೆಕ್ಕಾಚಾರ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು ಸರಿಸುಮಾರು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ ಎಂದು ತಿಳಿದುಬಂದಿದೆ. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ.

ಈಗ ಕನ್ನಡದಲ್ಲಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ 'ಕೆಜಿಎಫ್‌' ಜೊತೆಗೆ ಹೋಲಿಕೆ ಮಾಡುವ ಪರಿಪಾಠ ಶುರುವಾಗಿಬಿಟ್ಟಿದೆ. 'ವಿಕ್ರಾಂತ್‌ ರೋಣ' ಸಿನಿಮಾ ವಿಚಾರದಲ್ಲೂ ಹೀಗೆ ನಡೀತಿದೆ. ವಿಕ್ರಾಂತ್‌ ರೋಣ' ಸಿನಿಮಾ 2ಡಿ ಜೊತೆಗೆ 3ಡಿ ಮಾದರಿಯಲ್ಲೂ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ದುಪ್ಪಟ್ಟಾಗಿಸಿದೆ. ಕೆಜಿಎಫ್ ಚಾಪ್ಟರ್ 2' ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿತ್ತು. 'ವಿಕ್ರಾಂತ್ ರೋಣ' ಮೊದಲ ದಿನವೇ 'ಕೆಜಿಎಫ್ ಚಾಪ್ಟರ್ 2' ದಾಖಲೆ ಹಿಂದಿಕ್ಕಿದೆ.


ಅಡ್ವಾನ್ಸ್ ಬುಕಿಂಗ್ ಮಾಹಿತಿಯಂತೆ ಸಿನಿಮಾ ಬಿಡುಗಡೆಗೆ ಎರಡು ದಿನ ಮುಂಚಿತವಾಗಿ ಕರ್ನಾಟಕದಲ್ಲಿ 3.20 ಕೋಟಿ ಮೌಲ್ಯದ ಸಿನಿಮಾ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದೆ. ಸಿನಿಮಾದ ಹಿಂದಿ ಆವೃತ್ತಿಯ ಮುಂಗಡ ಟಿಕೆಟ್‌ ಮೌಲ್ಯ 40 ಲಕ್ಷ, ತೆಲುಗು ರಾಜ್ಯದಲ್ಲಿ 35 ಲಕ್ಷ ಮೌಲ್ಯದ ಟಿಕೆಟ್‌, ತಮಿಳಿನಲ್ಲಿ 12 ಲಕ್ಷ, ಮಲಯಾಳಂನ ಎರಡು ಲಕ್ಷ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿದೆ. ಅಲ್ಲಿ ಒಟ್ಟು ಆರು ಕೋಟಿ ಮೌಲ್ಯದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆಗಿತ್ತು.

ವಿಕ್ರಾಂತ್ ರೋಣ' ಕರ್ನಾಟಕದಲ್ಲಿ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಟ್ರೇಡ್ ಅನಲಿಸ್ಟ್‌ ಗಳ ಲೆಕ್ಕಾಚಾರದ ಪ್ರಕಾರ ಚಿತ್ರವು ಮೊದಲ ದಿನದ ಕಲೆಕ್ಷನ್​ ನಲ್ಲಿ ಕನ್ನಡದಲ್ಲಿ 16ರಿಂದ 20 ಕೋಟಿ ಆಗಬಹುದು ಎಂದು ಹೇಳಿದ್ದಾರೆ. ಅದೇ ರೀತಿ ಟ್ರೇಡ್ ಅನಲಿಸ್ಟ್‌ ಅಭಿಷೇಕ್ ಪರಿಹಾರ್​ aವರ ಪ್ರಕಾರ, ಕರ್ನಾಟಕದಲ್ಲಿ, 14.85 ಕೋಟಿ, ಆಂದ್ರ ಮತ್ತು ತೆಲಂಗಾಣದಲ್ಲಿ 2.2ಕೋಟಿ, ತಮಿಳುನಾಡು 1 ಕೋಟಿ, ಕೇರಳ 0.15 ಕೋಟಿ ಮತ್ತು ಸಾಗರೋತ್ತರ ದೇಶಗಳಲ್ಲಿ 3 ಕೋಟಿ ಸೇರಿ ಒಟ್ಟು ವಿಕ್ರಾಂತ್ ರೋಣ ಮೊದಲ ದಿನ 21.2 ಕೋಟಿ ಕಲೆಕ್ಷನ್ ಮಾಡಬುದು ಎಂದು ಅಂದಾಜಿಸಿದ್ದಾರೆ.

ಸಿನಿಮಾಗಳ ರೇಟಿಂಗ್ ಹಾಗೂ ಕಲೆಕ್ಷನ್ ಗಳ ಬಗ್ಗೆ ಮಾಹಿತಿ ನೀಡುವ ಒರ್ಮ್ಯಾಕ್ಸ್ ಮೀಡಿಯಾ ಸಹ ಒಂದು ವರದಿಯನ್ನು ನೀಡಿದ್ದು, ಇದು ಕೇವಲ ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಸಿನಿಮಾ 16.2 ಕೋಟಿ ಗಳಿಕೆ ಮಾಡಲಿದೆ ಎಂದು ತಿಳಿಸಿದೆ. ಒಟ್ಟಾರೆಯಾಗಿ ಚಿತ್ರವು ಭರ್ಜರಿ ಓಫನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ತಂದಿದೆ.