ವಿಕ್ರಾಂತ್‌ ರೋಣ ಚಿತ್ರದ ನಾಯಕಿ ನೀತಾ ಅಶೋಕ್‌ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

By Infoflick Correspondent

Updated:Thursday, June 30, 2022, 14:42[IST]

ವಿಕ್ರಾಂತ್‌ ರೋಣ ಚಿತ್ರದ ನಾಯಕಿ ನೀತಾ ಅಶೋಕ್‌ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

ವಿಕ್ರಾಂತ್‌ ರೋಣ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ದೇಶಾದ್ಯಂತ ಚಿತ್ರದ ಪ್ರೊಮೋಷನ್‌ ಕೆಲಸಗಳು ನಡೆಯುತ್ತಿವೆ. ಅನೂಪ್‌ ಭಂಡಾರಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅಲಂಕಾರ್ ಪಾಂಡ್ಯನ್ ಸಹ ನಿರ್ಮಾಪಕರು. ಜೀ ಸ್ಟುಡಿಯೋಸ್ ಕೂಡ ಚಿತ್ರಕ್ಕೆ ಕೈ ಜೋಡಿಸಿದ್ದು, ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್‌, ರವಿಶಂಕರ್ ಗೌಡ ಸೇರಿದಂತೆ ಅಲವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಿಸಿದ್ದು, ವಿಲಿಯಂ ಡೇವಿಡ್ ಕ್ಯಾಮರಾ ಹಿಡಿದಿದ್ದಾರೆ. 

ಇನ್ನು ಚಿತ್ರದ ನಾಯಕಿ ನೀತಾ ಅಶೋಕ್.‌ ನೀತಾ ಅಶೋಕ್‌ ಕನ್ನಡದ ಕಿರುತೆರೆಯಲ್ಲಿ ಮಿಂಚಿ ಮರೆಯಾಗಿದ್ದರು. ಕಿರುತೆರೆಯಿಂದ ನೇರವಾಗಿ ಸ್ಟಾರ್‌ ನಟನ ಜೊತೆಗೆ ತೆರೆ ಹಂಚಿಕೊಂಡ ನಟಿ. ಈ ಹಿಂದೆ ಕಿರುತೆರೆಯಲ್ಲಿ ಮೂಡಿ ಬಂದ ಯಶೋಧೆ, ನಾ ನಿನ್ನ ಬಿಡಲಾರೆ, ನೀಲಾಂಬರಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಹಿಂದಿಯ ಆಶಾಯೇ ಎಂಬ ಸರಣಿಯಲ್ಲೂ ನಟಿಸಿದ್ದರು. ಕಿನ್ನರಿ ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.   

ನೀತಾ ಅಶೋಕ್‌ ಅವರು ಹುಟ್ಟಿದ್ದು ಉಡುಪಿ ಹಾಗೂ ಕುಂದಾಪುರದ ಮಧ್ಯೆ ಇರುವ ಕೋಟಾ ಎಂಬ ಹಳ್ಳಿಯಲ್ಲಿ. ಇವರ ತಂದೆ ಬ್ಯಾಂಕ್‌ ಉದ್ಯೋಗಿ ಹಾಗೂ ತಾಯಿ ಗೃಹಿಣಿ. ನೀತಾ ಅವರಿಗೆ ಒಬ್ಬ ಸಹೋದರನಿದ್ದು, ಇವರು ಓದಿ ಬೆಳೆದಿದ್ದೆಲ್ಲಾ ಉಡುಪಿ, ಮಂಗಳೂರು, ದೆಹಲಿ ಹಾಗೂ ಬೆಂಗಳೂರಿನಲ್ಲಿ. ಎಂ.ಬಿ.ಎ ಓದಿದ ಬಳಿಕ ಕಂಪನಿಯಲ್ಲಿ ನೀತಾ ಕೆಲಸಕ್ಕೆ ಸೇರಿದ್ದರು. ಫೇಸ್‌ಬುಕ್‌ ಮುಖಾಂತರ ನಟನೆಯ ಅವಕಾಶ ದೊರೆಯಿತು. ಯಶೋದೆ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಸದಾ ಕ್ರಿಯಾತ್ಮಕವಾಗಿ ಚಿಂತಿಸುವ ನೀತಾ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಬಿಡುವಿನ ವೇಳೆಯಲ್ಲಿ ನೀತಾ ಅವರು ಪೇಂಟಿಂಗ್‌ ಮಾಡುತ್ತಾರಂತೆ. ಇನ್ನು ವಿಕ್ರಾಂತ್‌ ರೋಣ ಚಿತ್ರ ರಿಲೀಸ್‌ ಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.