Vikrant Rona : ಅಬ್ಬಬ್ಬಾ ವಿಕ್ರಾಂತ್ ರೋಣನ ಆರ್ಭಟ ಹೇಗಿದೆ ಗೊತ್ತಾ..? ಮೊದಲ ವಿಮರ್ಶೆ ಹಂಚಿಕೊಂಡ ಸೆನ್ಸಾರ್ ಸದಸ್ಯನ ಟ್ವಿಟ್ ವೈರಲ್

By Infoflick Correspondent

Updated:Wednesday, July 27, 2022, 14:57[IST]

Vikrant Rona : ಅಬ್ಬಬ್ಬಾ ವಿಕ್ರಾಂತ್ ರೋಣನ ಆರ್ಭಟ ಹೇಗಿದೆ ಗೊತ್ತಾ..?  ಮೊದಲ ವಿಮರ್ಶೆ ಹಂಚಿಕೊಂಡ ಸೆನ್ಸಾರ್ ಸದಸ್ಯನ ಟ್ವಿಟ್ ವೈರಲ್

ಕನ್ನಡ ಚಲನಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕಿಚ್ಚ ಸುದೀಪ್ ಅವರ ಅಭಿನಯದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಚಿತ್ರ ಈಗಾಗಲೇ ದೊಡ್ಡದಾಗಿಯೇ ಸದ್ದು ಮಾಡಿದೆ. ಈ ಸಿನಿಮಾ ಶೂಟಿಂಗ್ ಆರಂಭವಾದಾಗನಿಂದ ಹಿಡಿದು ಇತ್ತೀಚಿಗೆ ಅದರ ಸಿನಿಮಾದ ಒಂದು ಹಾಡು ಭರ್ಜರಿಯಾಗಿ ಭಾರತೀಯ ಚಿತ್ರರಂಗದಲ್ಲಿ ಸಂಚಲನವ ಸೃಷ್ಟಿಸಿ ಭಾರಿ ವೈರಲ್ ಆಗಿತ್ತು. ಎಕ್ಕಸಕ್ಕ ಎನ್ನುವ ಮೂಲಕ ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ಅವರು ಸೊಂಟ ಬಳುಕಿಸಿದ ಪರಿ ನಿಜವಾಗಿ ಅದ್ಭುತ ಆಗಿತ್ತು ಎಂದು ಹೇಳಬಹುದು. ಹೌದು ವಿಕ್ರಾಂತ್ ರೋಣ ಚಿತ್ರತಂಡ ಈಗ ಸಿನಿಮಾ ಪ್ರಚಾರ ನಡೆಸಿದೆ. ಎಲ್ಲೆಡೆ ಜೋರಾಗಿ ಸಿನಿಮಾದ ಸದ್ದು ಮಾಡುತ್ತಿದೆ..ದೇಶದಾದ್ಯಂತ ಕಿಚ್ಚನ ಅಭಿಮಾನಿಗಳು ಈ ಸಿನಿಮಾ ಮೂಲಕ ಮತ್ತೊಂದು ಪ್ಯಾನ್ ಇಂಡಿಯಾ ಹಿಟ್ ಸಿನಿಮಾವನ್ನಾಗಿ ಮಾಡಲು ಹೆಚ್ಚು ಹರಸಾಹಸ ಪಡುತ್ತಿರುವುದು ಖುಷಿಯ ವಿಚಾರ.     

ಈ ಸಿನಿಮಾ ಕೂಡ ಚೆನ್ನಾಗಿ ಮೂಡಿಬರುವುದಕ್ಕೆ ಕಾರಣ ಅದ್ಭುತ ನಿರ್ದೇಶಕ ಅನುಪ್ ಬಂಡಾರಿಯವರ ಕೈಚಳಕತನ ಇದರಲ್ಲಿ ಇದ್ದೇ ಇರುತ್ತದೆ ಎನ್ನುವ ನಂಬಿಕೆ. ಹೌದು ಇದೀಗ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ಕೂಡ ಪ್ರಸಾರ ಆಗಲಿದೆ. ಈ ಸಿನಿಮಾ ಓವರ್ ಸಿಸ್ ನಲ್ಲಿ ಪ್ರಸಾರ ಆಗಬೇಕು ಎಂದರೆ ಮೊದಲು ಅಲ್ಲಿಯ ಸೆನ್ಸಾರ್ ಮಂಡಳಿ ಸ್ನೇನ್ಸರ್ ಮಾಡಲಾಗುತ್ತದೆ. ಅಲ್ಲಿಯ ಸೆನ್ಸಾರ್ ಮಂಡಳಿಯ ಸದಸ್ಯರು ಈಗಾಗಲೇ ಈ ಸಿನಿಮಾ ವೀಕ್ಷಣೆ ಮಾಡಿದ್ದು ಅಲ್ಲಿಯ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಸಿನಿಮಾ ಹಿಟ್ ಆಗುತ್ತದೆಯಾ ಅಥವಾ ಇಲ್ವಾ ಎಂದು ಈಗ ಟ್ವಿಟರ್ ಮೂಲಕ ಬರೆದುಕೊಂಡಿದ್ದಾರೆ. ಉಮೈರ್ ಸಂದು ಅವರು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಸಕತ್ ರಿವ್ಯೂ ಕೊಟ್ಟಿದ್ದಾರೆ.

ಹೌದು ಸಿನಿಮಾ ವಿಮರ್ಶೇ ಮಾಡಿದ ಉಮರ್ ಸಂದು ಅವರು ಟ್ವಿಟ್ ಮಾಡಿದ್ದು ವಿಕ್ರಾಂತ್ ರೋಣ ಸಿನಿಮಾಗೆ ಕ್ಲಿನ್ ಬೋಲ್ಡ್ ಆಗಿದ್ದಾರೆ. 'ಸೆನ್ಸಾರ್ ಮಂಡಳಿಯಿಂದ ಮೊದಲ ವಿಮರ್ಶೆ ವಿಕ್ರಾಂತ್ ರೋಣ, ಒಟ್ಟಾರೆಯಾಗಿ ವಿಕ್ರಾಂತ್ ರೋಣ ಸಿನಿಮಾ (ಹಿಂದಿ) ಪೈಸಾ ವಸೂಲ್ ಎಂಟರ್‌ಟೈನರ್ ಆಗಿರಲಿದ್ದು, ಅನುಪ್ ಭಂಡಾರಿ ಅವರ ನಿರ್ದೇಶನ, ಹಾಗೆ ಎಂಗೇಜಿಂಗ್ ಸ್ಟೋರಿ, ಮತ್ತು ಸಿನಿಮಾ ನೋಡುವಾಗ ಉಸಿರುಗಟ್ಟಿಸುವ ಛಾಯಾಗ್ರಹಣ, ಆಕ್ಷನ್, ಥ್ರಿಲ್ಸ್ ಮತ್ತು ಸುದೀಪ್ ಅವರ ಸ್ಟಾರ್ ಗಿರಿ ಇದ್ದು, ಶ್ಯೂರ್ ಶಾಟ್ ಹಿಟ್' ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ ಹಾಗೆ ನಟ ಸುದೀಪ್ ಅವರ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗೆ ಒಟ್ಟು ನಾಲ್ಕು ಸ್ಟಾರ್ ನೀಡಿದ್ದಾರೆಂದು ಹೇಳಲಾಗಿದೆ. ನೀವು ಕೂಡ ವಿಕ್ರಾಂತ್ ರೋಣ ಚಿತ್ರಕ್ಕೆ ಹೆಚ್ಚು ಕಾಯುತ್ತಿದ್ದರೆ, ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ, ಹಾಗೆ ಇದೊಂದು ಕನ್ನಡದ ಮತ್ತೊಂದು ಶಕ್ತಿಯುತ ಸಿನಿಮ ಎಂದು ಇಡೀ ದೇಶಕ್ಕೆ ಸಾರಿ ಧನ್ಯವಾದಗಳು..

Vikrant Rona : ಅಬ್ಬಬ್ಬಾ ವಿಕ್ರಾಂತ್ ರೋಣನ ಆರ್ಭಟ ಹೇಗಿದೆ ಗೊತ್ತಾ..?  ಮೊದಲ ವಿಮರ್ಶೆ ಹಂಚಿಕೊಂಡ ಸೆನ್ಸಾರ್ ಸದಸ್ಯನ ಟ್ವಿಟ್ ವೈರಲ್